ಯೋಬ 35:8 - ಪರಿಶುದ್ದ ಬೈಬಲ್8 ಯೋಬನೇ, ನಿನ್ನ ದುಷ್ಟತನದಿಂದ ನಿನ್ನಂಥವನಿಗೇ ಕೇಡಾಗುವುದು; ನಿನ್ನ ಒಳ್ಳೆಯ ಕಾರ್ಯಗಳಿಂದ ನಿನ್ನಂಥವನಿಗೇ ಒಳ್ಳೆಯದಾಗುವುದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ನಿನ್ನ ಕೆಟ್ಟತನದಿಂದ ನಿನ್ನಂಥ ಮನುಷ್ಯನಿಗೇ ನಷ್ಟವಾದೀತು, ನಿನ್ನ ನೀತಿಯಿಂದ ನರಜನ್ಮದವನಿಗೇನು ಲಾಭ ಸಿಕ್ಕಬಹುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)8 ನಿನ್ನ ನೀಚತನದಿಂದ ನಿನ್ನಂಥವನಿಗೇ ನಷ್ಟ ನಿನ್ನ ಸಜ್ಜನಿಕೆಯಿಂದ ನರಜನ್ಮದವನಿಗೇ ಲಾಭ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)8 ನಿನ್ನ ಕೆಟ್ಟತನದಿಂದ ನಿನ್ನಂಥವನಿಗೇ [ನಷ್ಟವಾದೀತು], ನಿನ್ನ ನೀತಿಯಿಂದ ನರಜನ್ಮದವನಿಗೇ [ಲಾಭ ಸಿಕ್ಕೀತು]. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ8 ನಿನ್ನ ದುಷ್ಟತನವು ನಿನ್ನಂಥವರನ್ನೇ ಬಾಧಿಸುವುದು; ನಿನ್ನ ನೀತಿಯಿಂದ ಬೇರೆ ಜನರಿಗೆ ಮಾತ್ರ ಲಾಭವಾಗುವುದು. ಅಧ್ಯಾಯವನ್ನು ನೋಡಿ |
ಆದ್ದರಿಂದ, ಈಗ ನೀವು (ಮೂವರು) ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ತೆಗೆದುಕೊಂಡು ನನ್ನ ಸೇವಕನಾದ ಯೋಬನ ಬಳಿಗೆ ಹೋಗಿ ಅವುಗಳನ್ನು ನಿಮಗೋಸ್ಕರ ದೋಷಪರಿಹಾರಕಯಜ್ಞ ಮಾಡಿರಿ. ನನ್ನ ಸೇವಕನಾದ ಯೋಬನು ನಿಮಗೋಸ್ಕರ ಪ್ರಾರ್ಥಿಸುವನು. ಆಗ ನಾನು ಅವನ ಪ್ರಾರ್ಥನೆಗೆ ಖಂಡಿತವಾಗಿ ಉತ್ತರಿಸುವೆನು; ನಿಮ್ಮ ಮೂರ್ಖತನಕ್ಕೆ ಬರಬೇಕಾಗಿದ್ದ ದಂಡನೆಯನ್ನು ಮನ್ನಿಸುವೆನು. ನೀವು ನನ್ನ ಬಗ್ಗೆ ಹೇಳಿದವುಗಳು ಸತ್ಯವಲ್ಲ; ಆದರೆ ನನ್ನ ಸೇವಕನಾದ ಯೋಬನು ಹೇಳಿದವುಗಳು ಸತ್ಯವಾಗಿವೆ.” ಎಂದನು.