Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 24:19 - ಪರಿಶುದ್ದ ಬೈಬಲ್‌

19 ಬರಗಾಲವೂ ಬಿಸಿಲೂ ಹಿಮದ ನೀರನ್ನು ಹೀರುವಂತೆ ಪಾತಾಳವು ದುಷ್ಟರನ್ನು ಎಳೆದುಕೊಳ್ಳುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಬರಗಾಲವೂ, ಬಿಸಿಲೂ ಹಿಮದ ನೀರನ್ನು ಹೀರುವ ಹಾಗೆ, ಪಾತಾಳವು ಪಾಪಿಗಳನ್ನು ಎಳೆದುಕೊಳ್ಳುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ಬರಗಾಲ-ಬೇಸಿಗೆ ಹಿಮವನು ಹೀರಿಕೊಳ್ಳುವಂತೆ ಪಾತಾಳದ ಕೂಪ ಪಾಪಿಯನು ಸೆಳೆದುಕೊಳ್ಳುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಬರಗಾಲವೂ ಬಿಸಿಲೂ ಹಿಮದ ನೀರನ್ನು ಹೀರುವ ಹಾಗೆ ಪಾತಾಳವು ಪಾಪಿಗಳನ್ನು ಎಳೆದುಕೊಳ್ಳುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಬರಗಾಲದ ಬಿಸಿಲು ಹಿಮದ ನೀರನ್ನು ಹೀರಿಕೊಳ್ಳುವಂತೆ, ಪಾಪಮಾಡಿದವರನ್ನು ಸಮಾಧಿಯು ಹೀರಿಕೊಳ್ಳುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 24:19
12 ತಿಳಿವುಗಳ ಹೋಲಿಕೆ  

“ಸ್ವಲ್ಪ ಸಮಯದ ನಂತರ ಲಾಜರನು ಸತ್ತನು. ದೇವದೂತರು ಲಾಜರನನ್ನು ತೆಗೆದುಕೊಂಡು ಹೋಗಿ ಅಬ್ರಹಾಮನ ಎದೆಗೆ ಒರಗಿಸಿದರು. ಒಂದು ದಿನ ಐಶ್ವರ್ಯವಂತನೂ ಸತ್ತನು. ಅವನಿಗೆ ಸಮಾಧಿ ಮಾಡಲಾಯಿತು.


ಅವರು ಕುರಿಗಳಂತಿದ್ದಾರೆ. ಸಮಾಧಿಯೇ ಅವರ ಕೊಟ್ಟಿಗೆ. ಮರಣವೇ ಅವರ ಕುರುಬ. ಒಂದು ಮುಂಜಾನೆ, ಅವರ ದೇಹಗಳು ಅವರ ಮನೆಗಳಿಂದ ದೂರವಾಗಿ ಸಮಾಧಿಯಲ್ಲಿ ಕೊಳೆಯುತ್ತಿರಲು, ನೀತಿವಂತರು ಜಯಶಾಲಿಗಳಾಗಿರುವರು.


ದುಷ್ಟರು ತಮ್ಮ ಜೀವಮಾನವೆಲ್ಲಾ ಏಳಿಗೆ ಹೊಂದುವರು. ಅವರು ಸಂಕಟಪಡದೆ ಸತ್ತು ಸಮಾಧಿಗೆ ಸೇರುವರು.


“ಆದರೆ ದೇವರು ಅವನಿಗೆ, ‘ನೀನು ಬುದ್ಧಿಹೀನ! ಈ ರಾತ್ರಿ ನೀನು ಸಾಯುವೆ! ಈಗ ಹೇಳು, ನೀನು ಕೂಡಿಟ್ಟ ಪದಾರ್ಥಗಳ ಗತಿ ಏನಾಗುವುದು? ಅವು ಯಾರ ಪಾಲಾಗುತ್ತವೆ?’ ಎಂದು ಕೇಳಿದನು.


ದುಷ್ಟನು ತನ್ನ ಕೆಡುಕಿನಿಂದಲೇ ಸೋತುಹೋಗುವನು; ಆದರೆ ಒಳ್ಳೆಯವನು ಮರಣದ ಸಮಯದಲ್ಲೂ ಜಯಶಾಲಿಯಾಗುವನು.


ಗಾಳಿ ಬಡಿದುಕೊಂಡು ಹೋಗುವ ಹೊಗೆಯಂತೆ ನಿನ್ನ ಶತ್ರುಗಳು ಚದರಿಹೋಗಲಿ. ಬೆಂಕಿಯಲ್ಲಿ ಕರಗಿಹೋಗುವ ಮೇಣದಂತೆ ನಿನ್ನ ಶತ್ರುಗಳು ನಾಶವಾಗಲಿ.


ಒಬ್ಬನು ತನ್ನ ಜೀವಮಾನವೆಲ್ಲಾ ಯಶಸ್ವಿಯಾಗಿ ಬಾಳಿ ಸಾಯುವನು. ಅವನು ಸುರಕ್ಷಿತವೂ ಸುಖಕರವೂ ಆದ ಬಾಳ್ವೆಯನ್ನು ನಡೆಸಿದನು.


ನಾನು ಹುಟ್ಟಿದಾಗಲೇ ಸತ್ತುಹೋಗಿದ್ದರೆ, ಸಮಾಧಾನದಿಂದ ನಿದ್ರೆಮಾಡುತ್ತಿದ್ದೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು