Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 22:14 - ಪರಿಶುದ್ದ ಬೈಬಲ್‌

14 ದಟ್ಟವಾದ ಮೋಡಗಳು ಆತನನ್ನು ಮುಚ್ಚಿಕೊಂಡಿವೆ. ಆಕಾಶದ ಮೇಲ್ಗಡೆಯಲ್ಲಿ ನಡೆದಾಡುವ ಆತನು ನಮ್ಮನ್ನು ಕಾಣಲಾರನು’ ಎಂದು ಹೇಳುತ್ತಿರುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ದಟ್ಟವಾದ ಮೋಡಗಳು ಆತನಿಗೆ ಪರದೆಯ ಹಾಗಿರುವುದರಿಂದ ನೋಡಲಾರನು; ಆಕಾಶಮಂಡಲದ ಮೇಲೆ ನಡೆದಾಡುತ್ತಾನೆ’ ಎಂದು ಹೇಳಿಕೊಂಡೆಯಲ್ಲವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಆತ ನೋಡಲಾಗದಂತೆ ದಟ್ಟವಾದ ಮೋಡಗಳ ಪರದೆ ಇದೆ ಆತನ ನಡೆದಾಟವೆಲ್ಲ ಆಕಾಶದ ಮೇಲ್ಗಡೆಯಲ್ಲವೆ?’ ಎಂದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ದಟ್ಟವಾದ ಮೋಡಗಳು ಆತನಿಗೆ ಪರದೆಯ ಹಾಗಿರುವದರಿಂದ ನೋಡಲಾರನು; ಆಕಾಶಮಂಡಲದ ಮೇಲ್ಗಡೆಯಲ್ಲಿಯೇ ನಡೆದಾಡುತ್ತಾನೆ ಎಂದು ಹೇಳಿಕೊಂಡಿಯಲ್ಲವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ದಟ್ಟವಾದ ಮೋಡಗಳು ದೇವರಿಗೆ ಪರದೆಯ ಹಾಗಿರುವುದರಿಂದ ದೇವರು ನಮ್ಮನ್ನು ನೋಡಲು ಸಾಧ್ಯವಿಲ್ಲ. ದೇವರು ಆಕಾಶಮಂಡಲದ ಮೇಲ್ಗಡೆಯಲ್ಲಿ ನಡೆದಾಡುತ್ತಾರೆ,’ ಎಂದು ಹೇಳಿಕೊಂಡಿರುವೆ ಅಲ್ಲವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 22:14
10 ತಿಳಿವುಗಳ ಹೋಲಿಕೆ  

ಕಾರ್ಮೋಡಗಳು ಆತನನ್ನು ಕವಿದುಕೊಂಡಿವೆ. ನೀತಿಯೂ ನ್ಯಾಯವೂ ಆತನ ರಾಜ್ಯದ ಬಲವಾಗಿವೆ.


ಒಬ್ಬನು ನನಗೆ ಕಾಣದಂತೆ ಗುಪ್ತವಾದ ಸ್ಥಳದಲ್ಲಿ ಅಡಗಿಕೊಳ್ಳಲು ಪ್ರಯತ್ನಿಸಿದರೂ ನಾನು ಅವನನ್ನು ಸರಾಗವಾಗಿ ನೋಡಬಲ್ಲೆನು. ನಾನು ಭೂಮ್ಯಾಕಾಶಗಳ ಎಲ್ಲಾ ಕಡೆಗಳಲ್ಲೂ ಇದ್ದೇನೆ.” ಯೆಹೋವನೇ ಇವುಗಳನ್ನು ಹೇಳಿದ್ದಾನೆ.


ಆತನು ತನ್ನ ಮಹಾಸಿಂಹಾಸನದಿಂದ ಭೂನಿವಾಸಿಗಳೆಲ್ಲರನ್ನು ನೋಡುವನು.


ದುಷ್ಟನನ್ನು ದೇವರಿಂದ ಮರೆಮಾಡಬಲ್ಲ ಕತ್ತಲೆಯ ಸ್ಥಳವಾಗಲಿ ಕಾರ್ಗತ್ತಲೆಯ ಸ್ಥಳವಾಗಲಿ ಇಲ್ಲವೇ ಇಲ್ಲ.


ದೇವರು ತನ್ನ ಮೋಡಗಳನ್ನು ಹರಡಿ ಪೂರ್ಣಚಂದ್ರನನ್ನು ಮರೆಮಾಡುವನು.


ಯೆಹೋವನು ಸತ್ಯವಾದ ದೇವರು. ಆತನು ಉನ್ನತವಾದ ಆಕಾಶದಲ್ಲಿ ಕುಳಿತುಕೊಳ್ಳುವನು. ಆತನಿಗೆ ಹೋಲಿಸಿದರೆ ಜನರು ಮಿಡತೆಗಳಂತಿರುವರು. ಆತನು ಬಟ್ಟೆಯಂತೆ ಆಕಾಶಮಂಡಲವನ್ನು ಸುರುಳಿಯಾಗಿ ಸುತ್ತುವನು. ಆಕಾಶಮಂಡಲವನ್ನು ಆತನು ಎಳೆದು ಗುಡಾರದಂತೆ ಅಗಲಮಾಡಿ ಅದರಡಿಯಲ್ಲಿ ಕುಳಿತುಕೊಳ್ಳುವನು.


ಯೆಹೋವನು ಆಕಾಶದ ಮೇಲೆ ತನಗಾಗಿ ಮೇಲುಪ್ಪರಿಗೆಗಳನ್ನು ಕಟ್ಟಿದನು. ಭೂಮಿಯ ಮೇಲೆ ಆಕಾಶವನ್ನು ಹರಡಿದನು. ಸಮುದ್ರದ ನೀರನ್ನು ಕರೆದು ಭೂಮಿಯ ಮೇಲೆ ಮಳೆಗೆರೆಯುವಂತೆ ಮಾಡುವನು. ಆತನ ಹೆಸರು ಯೆಹೋವ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು