Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 21:5 - ಪರಿಶುದ್ದ ಬೈಬಲ್‌

5 ನನ್ನನ್ನು ನೋಡಿ ಬೆರಗಾಗಿ ನಿಮ್ಮ ಬಾಯಿಯ ಮೇಲೆ ಕೈಯಿಟ್ಟುಕೊಳ್ಳಿರಿ, ಗಾಬರಿಯಿಂದ ನನ್ನನ್ನೇ ದೃಷ್ಟಿಸಿ ನೋಡಿರಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ನನ್ನ ಕಡೆಗೆ ಗಮನಿಸಿ, ನಿಮ್ಮ ಬಾಯಿಯ ಮೇಲೆ ಕೈಯಿಟ್ಟು ಬೆರಗಾಗಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ನನ್ನ ಕಡೆಗೆ ಗಮನ ಕೊಡಿ ಬಾಯಿಯ ಮೇಲೆ ಕೈಯಿಟ್ಟು ನಿಬ್ಬೆರಗಾಗಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ನನ್ನ ಕಡೆಗೆ ಗಮನಿಸಿ ಬೆರಗಾಗಿ ಬಾಯ ಮೇಲೆ ಕೈಯಿಟ್ಟುಕೊಳ್ಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ನನ್ನ ಕಡೆಗೆ ಗಮನಿಸಿರಿ; ನೀವು ನಿಮ್ಮ ಬಾಯಿಯ ಮೇಲೆ ಕೈ ಇಟ್ಟು ಬೆರಗಾಗಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 21:5
13 ತಿಳಿವುಗಳ ಹೋಲಿಕೆ  

“ನಾನು ಅಲ್ಪನೇ ಸರಿ! ನಾನು ನಿನಗೆ ಉತ್ತರ ಕೊಡಲಾರೆನು! ನನ್ನ ಕೈಯನ್ನು ಬಾಯಿಯ ಮೇಲೆ ಇಟ್ಟುಕೊಳ್ಳುತ್ತೇನೆ.


ಮಾತಾಡುತ್ತಿದ್ದ ಜನನಾಯಕರು ತಮ್ಮ ಬಾಯಿ ಮೇಲೆ ಕೈಯಿಟ್ಟುಕೊಂಡು ಮೌನವಾಗುತ್ತಿದ್ದರು.


ಆ ಐದು ಜನರು, “ಸುಮ್ಮನಿರು, ಶಬ್ದ ಮಾಡಬೇಡ. ನಮ್ಮ ಸಂಗಡ ಬಾ. ನಮಗೆ ತಂದೆಯೂ ಯಾಜಕನೂ ಆಗಿರು. ನೀನು ಕೇವಲ ಒಬ್ಬ ಮನುಷ್ಯನ ಯಾಜಕನಾಗಿರುವುದು ಒಳ್ಳೆಯದೋ ಅಥವಾ ಇಸ್ರೇಲರ ಒಂದು ಕುಲದ ಯಾಜಕನಾಗಿರುವುದು ಒಳ್ಳೆಯದೋ ಎಂಬುದನ್ನು ನೀನೇ ವಿಚಾರಮಾಡು” ಎಂದು ಉತ್ತರಿಸಿದರು.


ನೀನು ನಿನ್ನನ್ನು ಹೆಚ್ಚಿಸಿಕೊಂಡು ಮೂಢನಾಗಿದ್ದರೆ, ಕೆಡುಕನ್ನು ಆಲೋಚಿಸುತ್ತಿದ್ದರೆ, ಸ್ವಲ್ಪ ಯೋಚಿಸು.


ಹೌದು, ದೇವರ ಐಶ್ವರ್ಯವು ಎಷ್ಟೋ ಅಪಾರವಾಗಿದೆ! ದೇವರ ವಿವೇಕಕ್ಕೂ ಜ್ಞಾನಕ್ಕೂ ಕೊನೆಯೇ ಇಲ್ಲ! ದೇವರು ನಿರ್ಧರಿಸುವ ಸಂಗತಿಗಳನ್ನು ಯಾವನೂ ವಿವರಿಸಲಾರನು. ದೇವರ ಮಾರ್ಗಗಳನ್ನು ಯಾವನೂ ಅರ್ಥಮಾಡಿಕೊಳ್ಳಲಾರನು.


ಜನಾಂಗಗಳು ಆ ಅದ್ಭುತವನ್ನು ನೋಡಿ ನಾಚಿಕೆಗೊಳ್ಳುವರು. ನನ್ನ ಶಕ್ತಿಯ ಎದುರು ಅವರ ಬಲವು ಏನೂ ಅಲ್ಲವೆಂದು ತಿಳಿಯುವರು. ಅವರು ಆಶ್ಚರ್ಯಚಕಿತರಾಗಿ ತಮ್ಮ ಬಾಯಿಗಳ ಮೇಲೆ ಕೈಗಳನ್ನಿಡುವರು. ತಮ್ಮ ಕಿವಿಗಳನ್ನು ಮುಚ್ಚಿ ವಾರ್ತೆ ಕೇಳಲು ನಿರಾಕರಿಸುವರು.


ಆ ಸಮಯದಲ್ಲಿ ಜ್ಞಾನಿಗಳಾದ ಬೋಧಕರು ಸುಮ್ಮನಿರುವರು. ಯಾಕೆಂದರೆ ಅದು ಕೆಟ್ಟ ಸಮಯವಾಗಿರುತ್ತದೆ.


ನಾನು ಬಾಯಿತೆರೆದು ಮಾತಾಡುವುದಿಲ್ಲ. ನೀನು ನ್ಯಾಯಕ್ಕೆ ತಕ್ಕಂತೆ ಮಾಡಿರುವೆ.


ನೀತಿವಂತರು ಇದನ್ನು ಕಂಡು ಗಲಿಬಿಲಿಗೊಂಡಿದ್ದಾರೆ. ನಿರಪರಾಧಿಗಳು ದೇವದೂಷಕರ ವಿಷಯದಲ್ಲಿ ಗಲಿಬಿಲಿಗೊಂಡಿದ್ದಾರೆ.


ಆದರೆ ಆ ಮೂವರು ಸ್ನೇಹಿತರು ಬಹು ದೂರದಿಂದ ಯೋಬನನ್ನು ಕಂಡಾಗ ಅವನ ಗುರುತೇ ಹಿಡಿಯಲಾರದೆ ಗಟ್ಟಿಯಾಗಿ ಅಳತೊಡಗಿದರು; ತಮ್ಮ ತಮ್ಮ ಮೇಲಂಗಿಗಳನ್ನು ಹರಿದುಕೊಂಡು ಮಣ್ಣನ್ನು ಮೇಲಕ್ಕೆ ತೂರಿ ತಮ್ಮ ತಲೆಗಳ ಮೇಲೆ ಸುರಿಸಿಕೊಂಡರು.


ನೀವು ಬಾಯಿಮುಚ್ಚಿಕೊಂಡು ಸುಮ್ಮನಿದ್ದರೆ ಎಷ್ಟೋ ಒಳ್ಳೆಯದು. ನೀವು ಮಾಡಬಹುದಾದ ಜ್ಞಾನದ ಕಾರ್ಯ ಅದೊಂದೇ.


ಅನೇಕ ಜನಾಂಗಗಳವರು ಆತನನ್ನು ಕಂಡು ಆಶ್ಚರ್ಯಪಡುವರು. ಅರಸರು ದಿಗ್ಭ್ರಮೆಯಿಂದ ಆತನನ್ನು ದೃಷ್ಟಿಸಿ ನೋಡುವರು. ಅವರು ನನ್ನ ಸೇವಕನ ಬಗ್ಗೆ ಕೇಳಲಿಲ್ಲ. ಆತನಿಗೆ ಸಂಭವಿಸಿದ್ದನ್ನೇ ನೋಡಿದರು. ಅವರು ಆತನ ವಿಚಾರ ಕೇಳದಿದ್ದರೂ ಅವರಿಗೆ ತಿಳಿದುಬಂತು.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು