ಯೋಬ 2:5 - ಪರಿಶುದ್ದ ಬೈಬಲ್5 ಆದರೆ ನೀನು ಕೈಚಾಚಿ ಅವನ ಮಾಂಸವನ್ನೂ ಮೂಳೆಗಳನ್ನೂ ಹೊಡೆ. ಅವನು ನಿನ್ನ ಮುಖದೆದುರಿಗೆ ನಿನ್ನನ್ನು ಖಂಡಿತವಾಗಿ ದೂಷಿಸುವನು” ಎಂದು ಉತ್ತರಕೊಟ್ಟನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ಆದರೆ ನಿನ್ನ ಕೈಚಾಚಿ ಅವನ ಅಸ್ತಿಮಾಂಸಗಳನ್ನು ಹೊಡೆ. ಆಗ ಅವನು ನಿನ್ನ ಮುಖದೆದುರಿಗೆ ನಿನ್ನನ್ನು ದೂಷಿಸದೆ ಬಿಡುವುದಿಲ್ಲ” ಎಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5 ನೀವೀಗ ಕೈಚಾಚಿ ಯೋಬನ ಮೂಳೆಮಾಂಸಗಳನ್ನು ಮುಟ್ಟಿನೋಡಿ; ಅವನು ನಿಮ್ಮ ಮುಖದೆದುರಿಗೇ ನಿಮ್ಮನ್ನು ದೂಷಿಸುತ್ತಾನೋ ಇಲ್ಲವೋ ನೀವೇ ನೋಡುವಿರಂತೆ,” ಎಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ಆದರೆ ನಿನ್ನ ಕೈಚಾಚಿ ಅವನ ಅಸ್ತಿಮಾಂಸಗಳನ್ನು ಹೊಡೆ; ಅವನು ನಿನ್ನ ಮುಖದೆದುರಿಗೆ ನಿನ್ನನ್ನು ದೂಷಿಸಲೇ ದೂಷಿಸುವನು ಅಂದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ5 ಆದರೆ ಈಗ ನಿಮ್ಮ ಕೈಚಾಚಿ, ಅವನ ಎಲುಬನ್ನೂ ಅವನ ಮಾಂಸವನ್ನೂ ಹೊಡೆದರೆ, ಅವನು ನಿಮ್ಮ ಮುಖದೆದುರಿಗೇ ನಿಮ್ಮನ್ನು ಶಪಿಸುವನು,” ಎಂದನು. ಅಧ್ಯಾಯವನ್ನು ನೋಡಿ |
ಪ್ರತಿಯೊಂದು ಔತಣಕೂಟದ ದಿನಗಳು ಮುಗಿದ ಮೇಲೆ ಯೋಬನು ಅವರನ್ನು ಶುದ್ಧೀಕರಿಸುತ್ತಿದ್ದನು. ಅದಕ್ಕಾಗಿ ಅವನು ಮುಂಜಾನೆಯಲ್ಲಿಯೇ ಎದ್ದು ತನ್ನ ಪ್ರತಿಯೊಬ್ಬ ಮಕ್ಕಳ ಹೆಸರಿನಲ್ಲಿ ಒಂದೊಂದು ಸರ್ವಾಂಗಹೋಮವನ್ನು ಅರ್ಪಿಸುತ್ತಿದ್ದನು. ಯಾಕೆಂದರೆ, “ಒಂದುವೇಳೆ ನನ್ನ ಮಕ್ಕಳು ಹೃದಯದಲ್ಲಿ ದೇವರನ್ನು ದೂಷಿಸಿ ಪಾಪಮಾಡಿರಬಹುದು” ಎಂಬುದು ಯೋಬನ ಆಲೋಚನೆಯಾಗಿತ್ತು. ತನ್ನ ಮಕ್ಕಳ ಪಾಪಕ್ಷಮೆಗಾಗಿ ಯೋಬನು ಯಾವಾಗಲೂ ಹೀಗೆ ಮಾಡುತ್ತಿದ್ದನು.