Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 18:5 - ಪರಿಶುದ್ದ ಬೈಬಲ್‌

5 “ಹೌದು, ದುಷ್ಟನ ದೀಪವು ಆರಿಹೋಗುವುದು; ಅವನ ಬೆಂಕಿಯು ಉರಿಯುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಹೇಗಾದರೂ ದುಷ್ಟನ ದೀಪವು ಆರುವುದು, ಅವನ ಒಲೆಯು ಉರಿಯುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಹೌದು, ದುರುಳನ ದೀಪ ಆರಿಹೋಗುವುದು ಅವನ ಒಲೆಯು ಉರಿಯದೆ ಹೋಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಹೇಗಾದರೂ ದುಷ್ಟನ ದೀಪವು ಆರುವದು, ಅವನ ಒಲೆಯು ಉರಿಯುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 “ಹೌದು, ನಿಶ್ಚಯವಾಗಿ ದುಷ್ಟರ ಬೆಳಕು ಆರಿಹೋಗುವುದು; ಅವನ ಬಾಳಿನ ಬೆಂಕಿಯ ಜ್ವಾಲೆಯು ಉರಿಯದೆ ಹೋಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 18:5
12 ತಿಳಿವುಗಳ ಹೋಲಿಕೆ  

ಶಿಷ್ಟನು ಪ್ರಕಾಶಮಾನವಾದ ಬೆಳಕಿನಂತಿರುವನು. ದುಷ್ಟನಾದರೋ ನಂದಿಹೋಗುತ್ತಿರುವ ಬೆಳಕಿನಂತಿರುವನು.


ಆ ಕೆಡುಕರಿಗೆ ನಿರೀಕ್ಷೆಯಿಲ್ಲ. ಅವರ ಬೆಳಕು ಕತ್ತಲೆಯಾಗುವುದು.


ತಂದೆಯನ್ನಾಗಲಿ ತಾಯಿಯನ್ನಾಗಲಿ ದೂಷಿಸುವವನ ಜೀವಿತವು ಕತ್ತಲೆಯಲ್ಲಿ ಆರಿಹೋದ ದೀಪದಂತೆ ಕೊನೆಗೊಳ್ಳುವುದು.


ಎಷ್ಟು ಸಲ ದುಷ್ಟರ ದೀಪವು ಆರಿಹೋಯಿತು? ಎಷ್ಟು ಸಲ ದುಷ್ಟರಿಗೆ ನಾಶನವು ಬರುವುದು? ದೇವರು ಎಷ್ಟು ಸಲ ಅವರ ಮೇಲೆ ಕೋಪಗೊಂಡು ಅವರನ್ನು ದಂಡಿಸುವನು?


“ಆದರೆ ನೀವು ನಿಮ್ಮ ದಾರಿಯಲ್ಲಿಯೇ ಜೀವಿಸಬೇಕೆಂದಿದ್ದೀರಿ, ನೀವು ನಿಮ್ಮ ಬೆಂಕಿಗಳನ್ನೂ ದೀವಟಿಗೆಗಳನ್ನೂ ಹಚ್ಚುತ್ತೀರಿ, ನಿಮಗೆ ಇಷ್ಟಬಂದ ರೀತಿಯಲ್ಲಿ ಜೀವಿಸುತ್ತೀರಿ. ಆದ್ದರಿಂದ ನೀವು ಶಿಕ್ಷಿಸಲ್ಪಡುವಿರಿ. ನಿಮ್ಮ ಬೆಂಕಿಯಲ್ಲಿಯೂ ದೀವಟಿಗೆಗಳಲ್ಲಿಯೂ ನೀವೇ ಬಿದ್ದು ಸುಟ್ಟುಹೋಗುವಿರಿ. ಇದನ್ನು ನಾನೇ ನೆರವೇರಿಸುವೆನು.”


ಆದರೆ ದುಷ್ಟರ ಜೀವಿತವು ರಾತ್ರಿಯ ಕತ್ತಲೆಯಂತಿದೆ. ಅವರು ಕತ್ತಲೆಯಲ್ಲಿ ತಪ್ಪಿಸಿಕೊಂಡಿದ್ದು ತಮಗೆ ಕಾಣದ ವಸ್ತುಗಳ ಮೇಲೆ ಎಡವಿ ಬೀಳುತ್ತಾರೆ.


ಯೋಬನೇ, ನಿನ್ನ ಕೋಪದಿಂದ ನಿನ್ನನ್ನೇ ಗಾಯಮಾಡಿಕೊಳ್ಳುತ್ತಿರುವೆ. ಕೇವಲ ನಿನಗೋಸ್ಕರ ಜನರು ಲೋಕವನ್ನು ಬಿಟ್ಟುಹೋಗಬೇಕೇ? ಕೇವಲ ನಿನ್ನನ್ನು ತೃಪ್ತಿಪಡಿಸುವುದಕ್ಕಾಗಿ ದೇವರು ಬೆಟ್ಟಗಳನ್ನು ಜರುಗಿಸುತ್ತಾನೆಂದು ಭಾವಿಸಿಕೊಂಡಿರುವಿಯಾ?


ದುಷ್ಟಜನರು ರೊಚ್ಚಿಗೆದ್ದ ಸಾಗರದಂತೆ, ಸಮಾಧಾನವಾಗಿಯೂ ಮೌನವಾಗಿಯೂ ಇರಲಾರರು. ಅವರು ಸಿಟ್ಟುಗೊಂಡು ಸಾಗರದಂತೆ ಕೆಸರನ್ನು ಕದಡಿಸುವರು.


ನೀನು ಕಾಣೆಯಾಗುವಂತೆ ನಾನು ಮಾಡುವೆನು. ಆಕಾಶವನ್ನು ಮುಚ್ಚಿ ನಕ್ಷತ್ರಗಳನ್ನು ಹೊಳೆಯದಂತೆ ಮಾಡುವೆನು. ಸೂರ್ಯನನ್ನು ಮೋಡವು ಮುಚ್ಚುವಂತೆ ಮಾಡುವೆನು. ಚಂದ್ರನು ಪ್ರಕಾಶಿಸದಂತೆ ಮಾಡುವೆನು.


ದುಷ್ಟನು ಕತ್ತಲೆಯೊಳಗಿಂದ ತಪ್ಪಿಸಿಕೊಳ್ಳುವುದಿಲ್ಲ. ಬೆಂಕಿಯಿಂದ ಸುಟ್ಟುಹೋದ ಕೊಂಬೆಗಳನ್ನು ಹೊಂದಿರುವ ಮರದಂತೆ ಅವನಿರುವನು. ದೇವರ ಉಸಿರು ದುಷ್ಟನನ್ನು ಬಡಿದುಕೊಂಡು ಹೋಗುವುದು.


ಗರ್ವದ ಕಣ್ಣುಗಳು ಮತ್ತು ದುರಾಭಿಮಾನದ ಹೃದಯ ಪಾಪಮಯವಾಗಿದ್ದು ದುಷ್ಟನಿಗೆ ಮಾರ್ಗದರ್ಶನ ನೀಡುತ್ತವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು