ಯೋಬ 18:18 - ಪರಿಶುದ್ದ ಬೈಬಲ್18 ಜನರು ಅವನನ್ನು ಬೆಳಕಿನಿಂದ ತಳ್ಳಿಬಿಡುವರು; ಅವನನ್ನು ಕತ್ತಲೆಯೊಳಗೆ ನೂಕಿಬಿಡುವರು. ಅವರು ಅವನನ್ನು ಲೋಕದಿಂದಲೇ ಅಟ್ಟಿಬಿಡುವರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201918 ಅವನನ್ನು ಬೆಳಕಿನಿಂದ ಕತ್ತಲೆಗೆ ನೂಕಿ, ಲೋಕದಿಂದಲೇ ಅಟ್ಟಿಬಿಡುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)18 ಅವನನ್ನು ಬೆಳಕಿನಿಂದ ತಳ್ಳುವರು ಕತ್ತಲಿಗೆ ಅಟ್ಟಿಬಿಡುವರು ಅವನನ್ನು ಲೋಕದಿಂದಲೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)18 ಅವನನ್ನು ಬೆಳಕಿನಿಂದ ಕತ್ತಲೆಗೆ ನೂಕಿ ಲೋಕದಿಂದಲೇ ಅಟ್ಟಿಬಿಡುವರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ18 ಬೆಳಕಿನಿಂದ ಅವನನ್ನು ಕತ್ತಲೆಗೆ ದಬ್ಬಲಾಗುವುದು; ಅವನು ಲೋಕದಿಂದ ಬಹಿಷ್ಕರಿಸಲಾಗುವನು. ಅಧ್ಯಾಯವನ್ನು ನೋಡಿ |
ಅನಂತರ ನೆಬೂಕದ್ನೆಚ್ಚರನನ್ನು ಜನರ ಮಧ್ಯದಿಂದ ಓಡಿಸಲಾಯಿತು. ಅವನ ಬುದ್ಧಿಯು ಮೃಗಬುದ್ಧಿಯಂತಾಯಿತು. ಅವನು ಕಾಡುಕತ್ತೆಗಳ ಜೊತೆ ವಾಸಿಸಿದನು; ಹಸುಗಳಂತೆ ಹುಲ್ಲು ತಿಂದನು; ಮಂಜಿನಲ್ಲಿ ನೆನೆದನು. ಅವನಿಗೆ ಸರಿಯಾದ ಬುದ್ಧಿ ಬರುವತನಕ ಅವನು ಆ ಸ್ಥಿತಿಯಲ್ಲಿದ್ದನು. ಆಗ ಅವನು ಮಹೋನ್ನತನಾದ ದೇವರೇ ಮಾನವರ ಸಾಮ್ರಾಜ್ಯವನ್ನು ಆಳುತ್ತಾನೆ ಮತ್ತು ಆ ಸಾಮ್ರಾಜ್ಯಕ್ಕೆ ತನಗೆ ಬೇಕಾದವರನ್ನು ಅರಸರನ್ನಾಗಿ ನೇಮಿಸುತ್ತಾನೆ ಎಂಬುದನ್ನು ತಿಳಿದುಕೊಂಡನು.