ಯೋನನು 1:7 - ಪರಿಶುದ್ದ ಬೈಬಲ್7 ಆಗ ಪ್ರಯಾಣಿಕರು, “ಯಾರ ನಿಮಿತ್ತ ನಮಗೆ ಈ ಆಪತ್ತು ಬಂತೆಂದು ತಿಳಿದುಕೊಳ್ಳಲು ಚೀಟು ಹಾಕೋಣ” ಅಂದರು. ಅವರು ಚೀಟು ಹಾಕಿದಾಗ ಆ ಚೀಟು ಯೋನನಿಗೆ ಬಂದಿತು; ಅವನೇ ಅವರ ಸಂಕಟಗಳಿಗೆ ಕಾರಣನೆಂಬುದು ನಿಶ್ಚಯವಾಯಿತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20197 ಅನಂತರ ನಾವಿಕರೆಲ್ಲರು “ಈ ಕೇಡು ನಮಗೆ ಸಂಭವಿಸಿದ್ದಕ್ಕೆ ಯಾರು ಕಾರಣರೆಂದು ನಮಗೆ ತಿಳಿಯುವ ಹಾಗೆ ಚೀಟು ಹಾಕೋಣ ಬನ್ನಿರಿ” ಎಂಬುದಾಗಿ ಮಾತನಾಡಿಕೊಂಡು ಚೀಟುಹಾಕಲು ಚೀಟು ಯೋನನ ಹೆಸರಿಗೆ ಬಂದಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)7 ಆಗ ನಾವಿಕರು: “ನಮಗೆ ಸಂಭವಿಸಿರುವ ಈ ದುರಂತಕ್ಕೆ ಕಾರಣ ಯಾರಿರಬಹುದು? ಬನ್ನಿ, ಚೀಟುಹಾಕಿ ನೋಡೋಣ” ಎಂದು ತಮ್ಮ ತಮ್ಮಲ್ಲೇ ಮಾತನಾಡಿಕೊಂಡರು. ಹಾಗೆ ಮಾಡಿದಾಗ ಚೀಟು ಯೋನನ ಹೆಸರಿಗೆ ಬಂತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)7 ಅನಂತರ ನಾವಿಕರೆಲ್ಲರು - ಈ ಕೇಡು ನಮಗೆ ಸಂಭವಿಸಿದ್ದಕ್ಕೆ ಯಾರು ಕಾರಣವೆಂದು ನಮಗೆ ತಿಳಿಯುವ ಹಾಗೆ ಚೀಟು ಹಾಕೋಣ ಬನ್ನಿರಿ ಎಂಬದಾಗಿ ಮಾತಾಡಿಕೊಂಡು ಚೀಟುಹಾಕಲು ಚೀಟು ಯೋನನಿಗೆ ಬಂತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ7 ಆಗ ನಾವಿಕರು ಒಬ್ಬರಿಗೊಬ್ಬರು, “ಬನ್ನಿ, ಚೀಟುಗಳನ್ನು ಹಾಕೋಣ. ಯಾವನ ನಿಮಿತ್ತ ಈ ಕೇಡು ನಮಗೆ ಬಂತೋ ತಿಳಿಯೋಣ,” ಎಂದು ಹೇಳಿಕೊಂಡರು. ಹಾಗೆಯೇ ಅವರು ಚೀಟುಗಳನ್ನು ಹಾಕಿದಾಗ, ಯೋನನ ಮೇಲೆ ಚೀಟು ಬಿತ್ತು. ಅಧ್ಯಾಯವನ್ನು ನೋಡಿ |