ಯೆಹೋಶುವ 3:5 - ಪರಿಶುದ್ದ ಬೈಬಲ್5 “ನಿಮ್ಮನ್ನು ನೀವು ಶುದ್ಧೀಕರಿಸಿಕೊಳ್ಳಿರಿ. ನಾಳೆ ನಿಮ್ಮ ದೇವರಾದ ಯೆಹೋವನು ನಿಮ್ಮ ಮಧ್ಯದಲ್ಲಿ ಅದ್ಭುತಗಳನ್ನು ಮಾಡುತ್ತಾನೆ” ಎಂದು ಯೆಹೋಶುವನು ಜನರಿಗೆ ತಿಳಿಸಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ಇದಲ್ಲದೆ ಯೆಹೋಶುವನು ಜನರಿಗೆ “ನಿಮ್ಮನ್ನು ಶುದ್ಧಮಾಡಿಕೊಳ್ಳಿರಿ; ಯೆಹೋವನು ನಾಳೆ ನಿಮ್ಮ ಮಧ್ಯದಲ್ಲಿ ಅದ್ಭುತಗಳನ್ನು ನಡಿಸುವನು” ಎಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5 ಇದಲ್ಲದೆ, ಯೆಹೋಶುವನು ಜನರಿಗೆ, “ಸರ್ವೇಶ್ವರ ನಾಳೆ ನಿಮ್ಮ ಮಧ್ಯೆ ಅದ್ಭುತಗಳನ್ನು ಮಾಡಲಿದ್ದಾರೆ. ಆದುದರಿಂದ ನಿಮ್ಮನ್ನೇ ಶುದ್ಧೀಕರಿಸಿಕೊಳ್ಳಿ,” ಎಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ಇದಲ್ಲದೆ ಯೆಹೋಶುವನು ಜನರಿಗೆ - ನಿಮ್ಮನ್ನು ಶುದ್ಧಮಾಡಿಕೊಳ್ಳಿರಿ; ಯೆಹೋವನು ನಾಳೆ ನಿಮ್ಮ ಮಧ್ಯದಲ್ಲಿ ಅದ್ಭುತಗಳನ್ನು ನಡಿಸುವನು ಎಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ5 ಯೆಹೋಶುವನು ಜನರಿಗೆ, “ಇಂದು ನಿಮ್ಮನ್ನು ಶುದ್ಧಮಾಡಿಕೊಳ್ಳಿರಿ, ನಾಳೆ ಯೆಹೋವ ದೇವರು ನಿಮ್ಮ ಮಧ್ಯದಲ್ಲಿ ಅದ್ಭುತಗಳನ್ನು ಮಾಡುವರು,” ಎಂದನು. ಅಧ್ಯಾಯವನ್ನು ನೋಡಿ |
ಪ್ರತಿಯೊಂದು ಔತಣಕೂಟದ ದಿನಗಳು ಮುಗಿದ ಮೇಲೆ ಯೋಬನು ಅವರನ್ನು ಶುದ್ಧೀಕರಿಸುತ್ತಿದ್ದನು. ಅದಕ್ಕಾಗಿ ಅವನು ಮುಂಜಾನೆಯಲ್ಲಿಯೇ ಎದ್ದು ತನ್ನ ಪ್ರತಿಯೊಬ್ಬ ಮಕ್ಕಳ ಹೆಸರಿನಲ್ಲಿ ಒಂದೊಂದು ಸರ್ವಾಂಗಹೋಮವನ್ನು ಅರ್ಪಿಸುತ್ತಿದ್ದನು. ಯಾಕೆಂದರೆ, “ಒಂದುವೇಳೆ ನನ್ನ ಮಕ್ಕಳು ಹೃದಯದಲ್ಲಿ ದೇವರನ್ನು ದೂಷಿಸಿ ಪಾಪಮಾಡಿರಬಹುದು” ಎಂಬುದು ಯೋಬನ ಆಲೋಚನೆಯಾಗಿತ್ತು. ತನ್ನ ಮಕ್ಕಳ ಪಾಪಕ್ಷಮೆಗಾಗಿ ಯೋಬನು ಯಾವಾಗಲೂ ಹೀಗೆ ಮಾಡುತ್ತಿದ್ದನು.