ಯೆಹೋಶುವ 24:22 - ಪರಿಶುದ್ದ ಬೈಬಲ್22 ಅದಕ್ಕೆ ಯೆಹೋಶುವನು, “ನೀವು ನಿಮ್ಮನ್ನೂ ನಿಮ್ಮ ಸುತ್ತಲಿರುವ ಜನರನ್ನೂ ನೋಡಿರಿ. ನೀವು ಯೆಹೋವನ ಸೇವೆಯನ್ನೇ ಆರಿಸಿಕೊಂಡಿದ್ದೀರಿ ಎಂಬುದು ನಿಮ್ಮೆಲ್ಲರಿಗೆ ಗೊತ್ತು ಮತ್ತು ಅದಕ್ಕೆ ನೀವು ಒಪ್ಪಿದ್ದೀರಿ. ನೀವೆಲ್ಲರೂ ಇದಕ್ಕೆ ಸಾಕ್ಷಿಯಾಗಿರುವಿರಾ?” ಎಂದು ಕೇಳಿದನು. ಜನರು, “ಹೌದು, ಇದು ನಿಜ! ನಾವೆಲ್ಲರು ಯೆಹೋವನ ಸೇವೆಯನ್ನೇ ಆರಿಸಿಕೊಂಡಿದ್ದೇವೆ” ಎಂದು ಉತ್ತರಿಸಿದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201922 ಯೆಹೋಶುವನು ಅವರಿಗೆ, “ನೀವು ಯೆಹೋವನ ಸೇವೆಯನ್ನು ಆರಿಸಿಕೊಂಡಿರುವುದಕ್ಕೆ ನೀವೇ ಸಾಕ್ಷಿಗಳು ಅನ್ನಲು ಅವರು ಹೌದು ನಾವೇ ಸಾಕ್ಷಿಗಳು” ಎಂದರು ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)22 ಯೆಹೋಶುವ ಅವರಿಗೆ, “ನೀವು ಸರ್ವೇಶ್ವರನಿಗೇ ಸೇವೆಸಲ್ಲಿಸುವುದನ್ನು ಆರಿಸಿಕೊಂಡಿರುವುದಕ್ಕೆ ನೀವೇ ಸಾಕ್ಷಿಗಳು,” ಎನ್ನಲು ಅವರು, “ಹೌದು, ನಾವೇ ಸಾಕ್ಷಿಗಳು,” ಎಂದು ಉತ್ತರಕೊಟ್ಟರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)22 ಅವನು ಅವರಿಗೆ - ನೀವು ಯೆಹೋವನ ಸೇವೆಯನ್ನು ಆರಿಸಿಕೊಂಡಿರುವದಕ್ಕೆ ನೀವೇ ಸಾಕ್ಷಿಗಳು ಎನ್ನಲು ಅವರು - ಹೌದು, ನಾವೇ ಸಾಕ್ಷಿಗಳು ಅಂದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ22 ಅದಕ್ಕೆ ಯೆಹೋಶುವನು ಜನರಿಗೆ, “ನೀವು ಯೆಹೋವ ದೇವರನ್ನು ಸೇವಿಸುವುದಕ್ಕೆ ಅವರನ್ನು ಆಯ್ದುಕೊಂಡಿರುವಿರೆಂದು ನಿಮಗೆ ನೀವೇ ಸಾಕ್ಷಿಗಳಾಗಿದ್ದೀರಿ,” ಎಂದನು. ಅದಕ್ಕವರು, “ಹೌದು, ನಾವೇ ಸಾಕ್ಷಿಗಳಾಗಿದ್ದೇವೆ,” ಎಂದರು. ಅಧ್ಯಾಯವನ್ನು ನೋಡಿ |