ಯೆಹೋಶುವ 22:7 - ಪರಿಶುದ್ದ ಬೈಬಲ್7 ಮೋಶೆಯು ಮನಸ್ಸೆಕುಲದ ಅರ್ಧಜನರಿಗೆ ಬಾಷಾನ್ ಪ್ರದೇಶವನ್ನು ಕೊಟ್ಟಿದ್ದನು. ಯೆಹೋಶುವನು ಮನಸ್ಸೆಕುಲದ ಉಳಿದರ್ಧ ಜನರಿಗೆ ಜೋರ್ಡನ್ ನದಿಯ ಪಶ್ಚಿಮಕ್ಕೆ ಭೂಮಿಯನ್ನು ಕೊಟ್ಟನು. ಯೆಹೋಶುವನು ಅವರನ್ನು ಆಶೀರ್ವದಿಸಿ ಮನೆಗೆ ಕಳುಹಿಸಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20197 ಮೋಶೆಯು ಮನಸ್ಸೆ ಕುಲದ ಅರ್ಧ ಜನರಿಗೆ ಬಾಷಾನಿನಲ್ಲಿ ಸ್ವತ್ತನ್ನು ಕೊಟ್ಟಿದ್ದನು. ಉಳಿದ ಅರ್ಧಜನರಿಗೆ ಯೆಹೋಶುವನು ಯೊರ್ದನಿನ ಪಶ್ಚಿಮದಲ್ಲಿ ಬೇರೆ ಕುಲದವರೊಂದಿಗೆ ಪಾಲುಕೊಟ್ಟಿದ್ದನು. ಇದಲ್ಲದೆ ಯೆಹೋಶುವನು ಅವರನ್ನು ಹೀಗೆ ಆಶೀರ್ವದಿಸಿ ತಮ್ಮ ಸ್ವಂತ ಸ್ಥಳಗಳಿಗೆ ಕಳುಹಿಸುವಾಗ ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)7 (ಮೋಶೆ ಮನಸ್ಸೆಕುಲದ ಅರ್ಧಜನರಿಗೆ ಬಾಷಾನಿನಲ್ಲಿ ಪಾಲನ್ನು ಕೊಟ್ಟಿದ್ದನು. ಉಳಿದ ಅರ್ಧಜನರಿಗೆ ಯೆಹೋಶುವನು ಜೋರ್ಡನಿನ ಪಶ್ಚಿಮದಲ್ಲಿ ಬೇರೆ ಕುಲದವರೊಂದಿಗೆ ಪಾಲುಕೊಟ್ಟಿದ್ದನು). ಯೆಹೋಶುವ ಅವರನ್ನು ಹೀಗೆ ಆಶೀರ್ವದಿಸಿ ತಮ್ಮ ಸ್ವಂತ ಸ್ಥಳಗಳಿಗೆ ಕಳಿಸುವಾಗ ಅವರಿಗೆ, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)7 ಅವರು ತಮ್ಮ ನಿವಾಸಗಳಿಗೆ ಹೋದರು. (ಮೋಶೆಯು ಮನಸ್ಸೆಕುಲದ ಅರ್ಧಜನರಿಗೆ ಬಾಷಾನಿನಲ್ಲಿ ಸ್ವಾಸ್ತ್ಯವನ್ನು ಕೊಟ್ಟಿದ್ದನು. ಉಳಿದ ಅರ್ಧಜನರಿಗೆ ಯೆಹೋಶುವನು ಯೊರ್ದನಿನ ಪಶ್ಚಿಮದಲ್ಲಿ ಬೇರೆ ಕುಲದವರೊಂದಿಗೆ ಪಾಲುಕೊಟ್ಟನು.) ಇದಲ್ಲದೆ ಯೆಹೋಶುವನು ಅವರನ್ನು ಆಶೀರ್ವದಿಸಿ ಸ್ವಸ್ಥಳಗಳಿಗೆ ಕಳುಹಿಸುವಾಗ ಅವರಿಗೆ - ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ7 ಮನಸ್ಸೆಯ ಅರ್ಧ ಗೋತ್ರಕ್ಕೆ ಮೋಶೆಯು ಬಾಷಾನಿನಲ್ಲಿ ಸೊತ್ತನ್ನು ಕೊಟ್ಟಿದ್ದನು. ಇದಲ್ಲದೆ ಅವರ ಅರ್ಧ ಗೋತ್ರಕ್ಕೆ ಯೆಹೋಶುವನು ಸಹ ಯೊರ್ದನ್ ನದಿ ಪಶ್ಚಿಮಕ್ಕೆ ಅವರ ಸಹೋದರರ ನಡುವೆ ಸೊತ್ತನ್ನು ಕೊಟ್ಟಿದ್ದನು. ಇದಲ್ಲದೆ ಯೆಹೋಶುವನು ಅವರನ್ನು ಅವರ ಗುಡಾರಗಳಿಗೆ ಕಳುಹಿಸುವಾಗ ಅವರನ್ನು ಆಶೀರ್ವದಿಸಿ ಅವರಿಗೆ, ಅಧ್ಯಾಯವನ್ನು ನೋಡಿ |