Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 22:28 - ಪರಿಶುದ್ದ ಬೈಬಲ್‌

28 ಮುಂದಿನ ಕಾಲದಲ್ಲಿ ನಿಮ್ಮ ಮಕ್ಕಳಿಗೆ ‘ನೀವು ಇಸ್ರೇಲಿಗೆ ಸಂಬಂಧಪಟ್ಟವರಲ್ಲ’ ಎಂದು ಹೇಳಿದರೆ, ನಮ್ಮ ಮಕ್ಕಳು ‘ಇಲ್ಲಿ ನೋಡಿ! ಗತಿಸಿಹೋದ ನಮ್ಮ ಪೂರ್ವಿಕರು ಒಂದು ಯಜ್ಞವೇದಿಕೆಯನ್ನು ಕಟ್ಟಿದ್ದಾರೆ. ಆ ಯಜ್ಞವೇದಿಕೆಯು ಪವಿತ್ರ ಗುಡಾರದಲ್ಲಿರುವ ಯಜ್ಞವೇದಿಕೆಯಂತಿದೆ. ನಾವು ಈ ಯಜ್ಞವೇದಿಕೆಯನ್ನು ಸರ್ವಾಂಗಹೋಮಗಳಿಗಾಗಲಿ ಯಜ್ಞಗಳಿಗಾಗಲಿ ಬಳಸುವುದಿಲ್ಲ. ನಾವು ಇಸ್ರೇಲಿಗೆ ಸೇರಿದವರೆಂಬುದಕ್ಕೆ ಈ ಯಜ್ಞವೇದಿಕೆ ಸಾಕ್ಷಿಯಾಗಿದೆ’ ಎಂದು ಹೇಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ಅವರು ಮುಂದೆ ನಮಗಾಗಲಿ, ನಮ್ಮ ಸಂತಾನದವರಿಗಾಗಲಿ ಈ ರೀತಿಯಾಗಿ ಹೇಳಿದರೆ ನಾವು ಅವರಿಗೆ ‘ಯೆಹೋವನ ಯಜ್ಞವೇದಿಯ ಮಾದರಿಯನ್ನು ನೋಡಿರಿ: ನಮ್ಮ ಪೂರ್ವಿಕರು ಇದನ್ನು ಸರ್ವಾಂಗಹೋಮ ಯಜ್ಞಗಳನ್ನು ಸಮರ್ಪಿಸುವುದಕ್ಕೋಸ್ಕರ ಕಟ್ಟಲಿಲ್ಲ; ಇದು ನಮ್ಮ ನಿಮ್ಮ ಮಧ್ಯದಲ್ಲಿ ಒಂದು ಸಾಕ್ಷಿಯಾಗಿದೆಯಷ್ಟೆ’ ಎಂದು ಹೇಳುವೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

28 ಒಂದು ವೇಳೆ ಅವರು ಮುಂದೆ ನಮಗಾಗಲಿ, ನಮ್ಮ ಸಂತಾನದವರಿಗಾಗಲಿ ಈ ಪ್ರಕಾರ ಹೇಳಿದ್ದೇ ಆದರೆ ನಾವು ಅವರಿಗೆ ‘ಸರ್ವೇಶ್ವರನ ಬಲಿಪೀಠವನ್ನು ಹೋಲುವ ಈ ವೇದಿಕೆಯನ್ನು ನೋಡಿ: ನಮ್ಮ ಪೂರ್ವಜರು ಇದನ್ನು ದಹನಬಲಿ, ಸಮರ್ಪಣ ಬಲಿಗಳನ್ನು ಅರ್ಪಿಸುವುದಕ್ಕಾಗಿ ಕಟ್ಟಲಿಲ್ಲ; ಇದು ನಮಗೂ ನಿಮಗೂ ಮಧ್ಯೆ ಸಾಕ್ಷಿಯಾಗಿದೆಯಷ್ಟೆ,’ ಎಂದು ಹೇಳುವೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ಅವರು ಮುಂದೆ ನಮಗಾಗಲಿ ನಮ್ಮ ಸಂತಾನದವರಿಗಾಗಲಿ ಈ ಪ್ರಕಾರ ಹೇಳಿದರೆ ನಾವು ಅವರಿಗೆ - ಈ ಯೆಹೋವವೇದಿಯ ಮಾದರಿಯನ್ನು ನೋಡಿರಿ; ನಮ್ಮ ಪಿತೃಗಳು ಇದನ್ನು ಸರ್ವಾಂಗಹೋಮಯಜ್ಞಗಳನ್ನು ಸಮರ್ಪಿಸುವದಕ್ಕೋಸ್ಕರ ಕಟ್ಟಲಿಲ್ಲ; ಇದು ನಮಗೂ ನಿಮಗೂ ಮಧ್ಯದಲ್ಲಿ ಸಾಕ್ಷಿಯಾಗಿರುತ್ತದೆಯಷ್ಟೆ ಎಂದು ಹೇಳುವೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 “ಇದಲ್ಲದೆ ನಾವು, ‘ಒಂದು ವೇಳೆ ಅವರು ಮುಂದೆ ನಮಗಾಗಲಿ, ನಮ್ಮ ಸಂತತಿಯವರಿಗಾಗಲಿ ಈ ಪ್ರಕಾರ ಹೇಳಿದ್ದೇ ಆದರೆ ನಾವು ಅವರಿಗೆ: ಯೆಹೋವ ದೇವರ ಬಲಿಪೀಠವನ್ನು ಹೋಲುವ ಈ ವೇದಿಕೆಯನ್ನು ನೋಡಿರಿ, ನಮ್ಮ ಪೂರ್ವಜರು ಇದನ್ನು ದಹನಬಲಿ, ಸಮರ್ಪಣ ಬಲಿಗಳನ್ನು ಅರ್ಪಿಸುವುದಕ್ಕಾಗಿ ಕಟ್ಟಲಿಲ್ಲ. ಇದು ನಮಗೂ ನಿಮಗೂ ಮಧ್ಯೆ ಸಾಕ್ಷಿಯಾಗಿದೆಯಷ್ಟೆ,’ ಎಂದು ಹೇಳುವೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 22:28
9 ತಿಳಿವುಗಳ ಹೋಲಿಕೆ  

ಈ ಯಾಜಕರು ಮಾಡುವ ಕಾರ್ಯಗಳು ಪರಲೋಕದಲ್ಲಿನ ಕಾರ್ಯಗಳ ನಿಜವಾದ ಪ್ರತಿರೂಪಗಳೂ ಛಾಯೆಗಳೂ ಆಗಿವೆ. ಮೋಶೆಯು ದೇವದರ್ಶನ ಗುಡಾರವನ್ನು ನಿರ್ಮಿಸಲು ಸಿದ್ಧನಾದಾಗ ದೇವರು ಅವನಿಗೆ, “ನಾನು ಬೆಟ್ಟದಲ್ಲಿ ನಿನಗೆ ತೋರಿಸಿದ ಮಾದರಿಯ ಪ್ರಕಾರವೇ ಎಲ್ಲವನ್ನೂ ಎಚ್ಚರಿಕೆಯಿಂದ ನಿರ್ಮಿಸಬೇಕು” ಎಂದು ಹೇಳಿದ್ದು ಈ ಕಾರಣದಿಂದಲೇ.


ನಾನು ನಿನಗೆ ಬೆಟ್ಟದ ಮೇಲೆ ತೋರಿಸಿದ ಮಾದರಿಯಂತೆಯೇ ಪ್ರತಿಯೊಂದನ್ನು ಮಾಡಬೇಕು” ಎಂದು ಹೇಳಿದನು.


ರಾಜನಾದ ಅಹಾಜನು ಅಶ್ಶೂರದ ರಾಜನಾದ ತಿಗ್ಲತ್ಪಿಲೆಸರನನ್ನು ಭೇಟಿಮಾಡಲು ದಮಸ್ಕಕ್ಕೆ ಹೋದನು. ಅಹಾಜನು ದಮಸ್ಕದಲ್ಲಿದ್ದ ಯಜ್ಞವೇದಿಕೆಯನ್ನು ನೋಡಿದನು. ರಾಜನಾದ ಅಹಾಜನು ಯಜ್ಞವೇದಿಕೆಯ ವಿನ್ಯಾಸವನ್ನು ಮತ್ತು ಮಾದರಿಯನ್ನು ಯಾಜಕನಾದ ಊರೀಯನಿಗೆ ಕಳುಹಿಸಿದನು.


ನೀವು ಆರಾಧಿಸುವ ದೇವರನ್ನೇ ನಾವೂ ಆರಾಧಿಸುತ್ತೇವೆಂಬುದನ್ನು ನಮ್ಮ ಜನರಿಗೆ ತೋರಿಸಿಕೊಡುವುದೇ ಈ ಯಜ್ಞವೇದಿಕೆಯ ನಿಜವಾದ ಉದ್ದೇಶವಾಗಿದೆ. ನಾವು ಯೆಹೋವನನ್ನು ಆರಾಧಿಸುತ್ತೇವೆ. ನಾವು ಸರ್ವಾಂಗಹೋಮಗಳನ್ನು, ಸಮಾಧಾನಯಜ್ಞಗಳನ್ನು ಯೆಹೋವನ ಸಾನ್ನಿಧ್ಯದಲ್ಲಿ ಸಮರ್ಪಿಸುತ್ತೇವೆ ಎಂಬುದಕ್ಕೆ ಈ ಯಜ್ಞವೇದಿಕೆಯು ನಿಮಗೂ ನಮಗೂ ಮತ್ತು ನಮ್ಮ ಮುಂದಿನ ಪೀಳಿಗೆಗಳಿಗೂ ಸಾಕ್ಷಿಯಾಗಿರುತ್ತದೆ. ನಾವು ಸಹ ನಿಮ್ಮಂತೆಯೇ ಇಸ್ರೇಲಿನ ಜನರೆಂಬುದನ್ನು ದೊಡ್ಡವರಾದ ಮೇಲೆ ನಿಮ್ಮ ಮಕ್ಕಳಿಗೆ ತಿಳಿದಿರಲಿ ಎಂಬುದು ನಮ್ಮ ಇಚ್ಛೆ.


“ಯೆಹೋವನಿಗೆ ವಿರೋಧಿಗಳಾಗಲು ನಮಗೆ ನಿಜವಾಗಿಯೂ ಇಷ್ಟವಿಲ್ಲ. ಆತನಿಗೆ ಅವಿಧೇಯರಾಗುವುದಕ್ಕೂ ಇಷ್ಟವಿಲ್ಲ. ನಿಜವಾದ ಯಜ್ಞವೇದಿಕೆಯು ಪವಿತ್ರಗುಡಾರದ ಎದುರಿಗೆ ಮಾತ್ರ ಇದೆ. ಆ ಯಜ್ಞವೇದಿಕೆಯು ನಮ್ಮ ದೇವರಾದ ಯೆಹೋವನದು ಎಂಬುದನ್ನು ನಾವು ಬಲ್ಲೆವು” ಎಂಬುದಾಗಿ ಉತ್ತರಕೊಟ್ಟರು.


ಲಾಬಾನನು ಯಾಕೋಬನಿಗೆ, “ಈ ಕಲ್ಲುಗಳ ಕುಪ್ಪೆಯು ನಮ್ಮಿಬ್ಬರಿಗೂ ನಮ್ಮ ಒಪ್ಪಂದವನ್ನು ಜ್ಞಾಪಕಕ್ಕೆ ತರುತ್ತದೆ” ಎಂದು ಹೇಳಿದನು. ಆದಕಾರಣ ಯಾಕೋಬನು ಆ ಸ್ಥಳಕ್ಕೆ ಗಲೀದ್ ಎಂದು ಹೆಸರಿಟ್ಟನು.


ಆಗ ಯೆಹೋಶುವನು ಜನರೆಲ್ಲರಿಗೆ, “ನಾವು ಇಂದು ಹೇಳಿದ ಎಲ್ಲವನ್ನು ಜ್ಞಾಪಕದಲ್ಲಿಟ್ಟುಕೊಳ್ಳಲು ಈ ಕಲ್ಲು ನಿಮಗೆ ಸಾಕ್ಷಿಯಾಗಿರುವುದು. ಇಂದು ಯೆಹೋವನು ನಮ್ಮೊಡನೆ ಮಾತನಾಡುತ್ತಿದ್ದಾಗ ಈ ಕಲ್ಲು ಇಲ್ಲಿಯೇ ಇತ್ತು. ಅದಕ್ಕಾಗಿ ಈ ಕಲ್ಲು ಇಂದು ನಡೆದ ಸಂಗತಿಯನ್ನು ನೆನಪಿನಲ್ಲಿಡಲು ನಮಗೆ ಸಹಾಯಕವಾಗುವುದು. ನೀವು ನಿಮ್ಮ ದೇವರಾದ ಯೆಹೋವನಿಗೆ ವಿಮುಖರಾದರೆ ಈ ಕಲ್ಲೇ ನಿಮಗೆ ವಿರೋಧವಾಗಿ ಸಾಕ್ಷಿ ಹೇಳುವುದು” ಎಂದು ಹೇಳಿದನು.


ಆ ಸಮಯದಲ್ಲಿ ಈಜಿಪ್ಟಿನ ಮಧ್ಯದಲ್ಲಿ ಯೆಹೋವನಿಗಾಗಿ ಒಂದು ವೇದಿಕೆ ಇರುವದು. ಈಜಿಪ್ಟಿನ ಗಡಿಯಲ್ಲಿ ಯೆಹೋವನ ಗೌರವಾರ್ಥವಾಗಿ ಸ್ಮಾರಕಸ್ತಂಭ ಇರುವದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು