ಯೆಹೋಶುವ 22:25 - ಪರಿಶುದ್ದ ಬೈಬಲ್25 ದೇವರು ನಮಗೆ ಜೋರ್ಡನ್ ನದಿಯ ಮತ್ತೊಂದು ದಡದಲ್ಲಿ ಭೂಮಿಯನ್ನು ಕೊಟ್ಟಿದ್ದಾನೆ. ಅಂದರೆ ಜೋರ್ಡನ್ ನದಿಯು ನಮ್ಮನ್ನು ಬೇರ್ಪಡಿಸುತ್ತದೆ. ನಿಮ್ಮ ಮಕ್ಕಳು ದೊಡ್ಡವರಾಗಿ ನಿಮ್ಮ ಭೂಮಿಯನ್ನು ಆಳುವಾಗ, ನಾವು ನಿಮ್ಮ ಜನರೆಂಬುದನ್ನು ಮರೆತುಬಿಡಬಹುದು. ‘ರೂಬೇನ್ಯರು, ಗಾದ್ಯರು ಆದ ನೀವು ಇಸ್ರೇಲಿನ ಅಂಗವಾಗಿಲ್ಲ’ ಎಂದು ಹೇಳಿ ನಮ್ಮ ಮಕ್ಕಳು ಯೆಹೋವನನ್ನು ಆರಾಧಿಸದಂತೆ ನಿಮ್ಮ ಮಕ್ಕಳು ತಡೆಯಬಹುದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201925 ರೂಬೇನ್ಯರೇ, ಗಾದ್ಯರೇ, ಯೆಹೋವನು ನಿಮಗೂ ನಮಗೂ ನಡುವೆ ಈ ಯೊರ್ದನ್ ನದಿಯನ್ನು ಮೇರೆಯಾಗಿ ಇಟ್ಟಿದ್ದಾನೆ. ಯೆಹೋವನಲ್ಲಿ ನಿಮಗೆ ಯಾವ ಪಾಲೂ ಇಲ್ಲ ಎಂದು ಹೇಳಿ ನಿಮ್ಮ ಮಕ್ಕಳು ನಮ್ಮ ಮಕ್ಕಳನ್ನು ದೈವಭಕ್ತಿಯಿಂದ ಬೇರ್ಪಡಿಸಿಯಾರೆಂದು ಭಯಪಟ್ಟೆವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)25 ರೂಬೇನ್ಯರೇ, ಗಾದ್ಯರೇ, ಸರ್ವೇಶ್ವರ ನಿಮಗೂ ನಮಗೂ ನಡುವೆ ಈ ಜೋರ್ಡನ್ ನದಿಯನ್ನು ಸರಹದ್ದಾಗಿ ಇಟ್ಟಿದ್ದಾರೆ. ಸರ್ವೇಶ್ವರನಲ್ಲಿ ನಿಮಗೆ ಯಾವ ಪಾಲೂ ಇಲ್ಲ, ಎಂದು ಹೇಳಿ ನಿಮ್ಮ ಮಕ್ಕಳು ನಮ್ಮ ಮಕ್ಕಳನ್ನು ದೇವಭಕ್ತಿಯಿಂದ ಬೇರ್ಪಡಿಸಿಯಾರೆಂದು ಭಯಪಟ್ಟೆವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)25 ರೂಬೇನ್ಯರೇ, ಗಾದ್ಯರೇ, ಯೆಹೋವನು ನಮಗೂ ನಿಮಗೂ ನಡುವೆ ಯೊರ್ದನ್ ಹೊಳೆಯನ್ನು ಮೇರೆಯಾಗಿಟ್ಟಿದ್ದಾನೆ. ಆತನಲ್ಲಿ ನಿಮಗೇನೂ ಪಾಲಿಲ್ಲ ಎಂದು ಹೇಳಿ ಅವರನ್ನು ದೇವಭಕ್ತಿಯಿಂದ ತೊಲಗಿಸಿ ಬಿಟ್ಟಾರು ಎಂಬ ಭಯದಿಂದ ನಾವು - ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ25 ರೂಬೇನ್ಯರೇ, ಗಾದ್ಯರೇ ಯೆಹೋವ ದೇವರು ನಿಮಗೂ ನಮಗೂ ನಡುವೆ ಯೊರ್ದನ್ ನದಿಯನ್ನು ಮೇರೆಯಾಗಿ ಇಟ್ಟಿದ್ದರಿಂದ ಯೆಹೋವ ದೇವರ ಕಾರ್ಯಗಳಲ್ಲಿ ನಿಮಗೆ ಭಾಗವು ಇಲ್ಲ,’ ಎಂದು ಹೇಳಿ, ನಮ್ಮ ಮಕ್ಕಳನ್ನು ಯೆಹೋವ ದೇವರಿಗೆ ಭಯಪಡದ ಹಾಗೆ ಮಾಡುವರೆಂದು ಅಂಜಿಕೊಂಡು ಇದನ್ನು ಮಾಡಿದೆವು. ಅಧ್ಯಾಯವನ್ನು ನೋಡಿ |
ನಾನು ಅವರಿಗೆ, “ಪರಲೋಕದ ದೇವರು ನಮ್ಮ ಕಾರ್ಯವನ್ನು ಸಫಲಪಡಿಸುವನು. ನಾವು ಆತನ ಸೇವಕರು ಮತ್ತು ನಾವು ಈ ಪಟ್ಟಣವನ್ನು ತಿರಿಗಿ ಕಟ್ಟುತ್ತೇವೆ. ನೀವು ನಮ್ಮ ಸಹಾಯಕ್ಕಾಗಿ ಬರುವುದು ಬೇಡ. ನಿಮ್ಮಲ್ಲಿ ಯಾರ ಕುಟುಂಬಗಳವರೂ ಈ ಜೆರುಸಲೇಮಿನಲ್ಲಿ ವಾಸಿಸಲಿಲ್ಲ ಮತ್ತು ಈ ಪ್ರಾಂತ್ಯದಲ್ಲಿ ನಿಮಗೆ ಸ್ವಂತ ಭೂಮಿಯೂ ಇಲ್ಲ. ಆದ್ದರಿಂದ ನಿಮಗೆ ಈ ಪ್ರಾಂತ್ಯದಲ್ಲಿ ಯಾವ ಹಕ್ಕೂ ಇಲ್ಲ” ಎಂದು ಹೇಳಿದೆನು.
ಇಸ್ರೇಲಿನ ಜನರೆಲ್ಲರೂ ಹೊಸರಾಜನು ತಮ್ಮ ಮಾತಿಗೆ ಕಿವಿಗೊಡಲಿಲ್ಲವೆಂಬುದನ್ನು ನೋಡಿದರು. ಆದ್ದರಿಂದ ಜನರೆಲ್ಲರೂ ರಾಜನಿಗೆ, “ದಾವೀದನ ಕುಟುಂಬದಲ್ಲಿ ನಾವೆಲ್ಲರೂ ಭಾಗಿಗಳೇ? ಇಲ್ಲ! ಇಷಯನ ಭೂಮಿಯಲ್ಲಿ ನಮಗೇನಾದರೂ ಪಾಲು ಸಿಕ್ಕುತ್ತದೆಯೇ? ಇಲ್ಲ! ಇಸ್ರೇಲರೇ, ನಮ್ಮ ಮನೆಗಳಿಗೆ ನಾವು ಹೋಗೋಣ ನಡೆಯಿರಿ. ದಾವೀದನ ಮಗನು ತನ್ನ ಜನರನ್ನು ತಾನೇ ಆಳಲಿ!” ಎಂದು ಹೇಳಿದರು. ಇಸ್ರೇಲಿನ ಜನರೆಲ್ಲರೂ ಮನೆಗಳಿಗೆ ಹೋದರು.
ನನ್ನ ಒಡೆಯನೇ, ನನ್ನ ರಾಜನೇ, ನನ್ನ ಮಾತುಗಳನ್ನು ಆಲಿಸು! ನೀನು ನನ್ನ ಮೇಲೆ ಕೋಪಗೊಳ್ಳುವಂತೆ ಯೆಹೋವನು ಮಾಡಿರುವುದಾದರೆ ಆತನಿಗೆ ನೈವೇದ್ಯವನ್ನು ಅರ್ಪಿಸೋಣ. ಆದರೆ ನೀನು ನನ್ನ ಮೇಲೆ ಕೋಪಗೊಳ್ಳುವಂತೆ ಜನರು ಮಾಡಿದ್ದರೆ, ಅವರಿಗೆ ಯೆಹೋವನು ಕೇಡಾಗುವಂತೆ ಮಾಡಲಿ. ನನಗೆ ಯೆಹೋವನು ನೀಡಿದ ಭೂಮಿಯನ್ನು ನಾನು ಬಿಡುವಂತೆ ಜನರು ಬಲವಂತಪಡಿಸಿದರು. ‘ಹೋಗು, ಹೊರದೇಶೀಯರೊಂದಿಗೆ ನೆಲೆಸು. ಹೋಗು, ಇತರ ದೇವರುಗಳನ್ನು ಆರಾಧಿಸು’ ಎಂದು ಜನರು ನನಗೆ ಹೇಳಿದರು.
ನೀವು ಆರಾಧಿಸುವ ದೇವರನ್ನೇ ನಾವೂ ಆರಾಧಿಸುತ್ತೇವೆಂಬುದನ್ನು ನಮ್ಮ ಜನರಿಗೆ ತೋರಿಸಿಕೊಡುವುದೇ ಈ ಯಜ್ಞವೇದಿಕೆಯ ನಿಜವಾದ ಉದ್ದೇಶವಾಗಿದೆ. ನಾವು ಯೆಹೋವನನ್ನು ಆರಾಧಿಸುತ್ತೇವೆ. ನಾವು ಸರ್ವಾಂಗಹೋಮಗಳನ್ನು, ಸಮಾಧಾನಯಜ್ಞಗಳನ್ನು ಯೆಹೋವನ ಸಾನ್ನಿಧ್ಯದಲ್ಲಿ ಸಮರ್ಪಿಸುತ್ತೇವೆ ಎಂಬುದಕ್ಕೆ ಈ ಯಜ್ಞವೇದಿಕೆಯು ನಿಮಗೂ ನಮಗೂ ಮತ್ತು ನಮ್ಮ ಮುಂದಿನ ಪೀಳಿಗೆಗಳಿಗೂ ಸಾಕ್ಷಿಯಾಗಿರುತ್ತದೆ. ನಾವು ಸಹ ನಿಮ್ಮಂತೆಯೇ ಇಸ್ರೇಲಿನ ಜನರೆಂಬುದನ್ನು ದೊಡ್ಡವರಾದ ಮೇಲೆ ನಿಮ್ಮ ಮಕ್ಕಳಿಗೆ ತಿಳಿದಿರಲಿ ಎಂಬುದು ನಮ್ಮ ಇಚ್ಛೆ.
ನಾವು ಈ ಯಜ್ಞವೇದಿಕೆಯನ್ನು ಸರ್ವಾಂಗಹೋಮ, ಸಮಾಧಾನಯಜ್ಞ, ಧಾನ್ಯಸಮರ್ಪಣೆ ಇವುಗಳನ್ನು ಸಮರ್ಪಿಸುವುದಕ್ಕೋಸ್ಕರ ಕಟ್ಟಿದ್ದೇವೆ ಎಂದು ನೀವು ತಿಳಿದಿರುವಿರೇನು? ಇಲ್ಲ! ನಾವು ಆ ಕಾರಣಕ್ಕಾಗಿ ಇದನ್ನು ಕಟ್ಟಲಿಲ್ಲ. ನಾವು ಈ ಯಜ್ಞವೇದಿಕೆಯನ್ನು ಕಟ್ಟಿರುವುದಕ್ಕೆ ಕಾರಣವೇನೆಂದರೆ ಮುಂದಿನ ಕಾಲದಲ್ಲಿ ನಿಮ್ಮ ಜನರು ನಮ್ಮನ್ನು ತಮ್ಮ ಜನಾಂಗದ ಒಂದು ಭಾಗವೆಂದು ಸ್ವೀಕರಿಸದೆ ಇಸ್ರೇಲಿನ ದೇವರಾದ ಯೆಹೋವನನ್ನು ಆರಾಧಿಸಲು ಅವಕಾಶಕೊಡದಿರಬಹುದು ಎಂಬ ಭಯ ನಮಗಿತ್ತು.