Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 21:10 - ಪರಿಶುದ್ದ ಬೈಬಲ್‌

10 ಪಟ್ಟಣಗಳನ್ನು ಆರಿಸಿಕೊಳ್ಳುವ ಮೊದಲ ಅಧಿಕಾರವನ್ನು ಕೆಹಾತ್ಯ ಗೋತ್ರದ ಲೇವಿಯರಿಗೆ ಕೊಡಲಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಆದ್ದರಿಂದ ಇಸ್ರಾಯೇಲ್ಯರು ಅವರಿಗೆ ಯೆಹೂದ ಸಿಮೆಯೋನ್ ಕುಲಗಳಿಂದ ಕೆಳಗೆ ಹೇಳಿರುವ ಪಟ್ಟಣಗಳನ್ನು ಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಆದ್ದರಿಂದ ಇಸ್ರಯೇಲರು ಅವರಿಗೆ ಯೆಹೂದ ಮತ್ತು ಸಿಮೆಯೋನ್ ಕುಲಗಳಿಂದ ಕೆಳಗೆ ಹೇಳಿರುವ ನಗರಗಳನ್ನು ಕೊಟ್ಟರು:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಇಸ್ರಾಯೇಲ್ಯರು ಅವರಿಗೆ ಯೆಹೂದ ಸಿಮೆಯೋನ್ ಕುಲಗಳಿಂದ ಕೆಳಗೆ ಹೇಳಿರುವ ಪಟ್ಟಣಗಳನ್ನು ಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಲೇವಿಯರಿಗೆ ಮೊದಲನೆಯ ಚೀಟು ಬಿದ್ದ ಕಾರಣ, ಲೇವಿ ಗೋತ್ರಕ್ಕೆ ಸೇರಿದ ಕೊಹಾತ್ಯರಾದ ಆರೋನನ ಸಂತತಿಯರಿಗೆ ಯೆಹೂದ ಗೋತ್ರದಲ್ಲಿಯೂ, ಸಿಮೆಯೋನನ ಗೋತ್ರದಲ್ಲಿಯೂ ಕೂಡಲಾದ ಪಟ್ಟಣಗಳ ವಿವರ:

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 21:10
10 ತಿಳಿವುಗಳ ಹೋಲಿಕೆ  

ಕೆಹಾತ್ಯರ ಒಂದು ಭಾಗಕ್ಕೆ ಯೆಹೂದ, ಸಿಮೆಯೋನ್ ಮತ್ತು ಬೆನ್ಯಾಮೀನ್ ಕುಲಗಳ ಭೂಭಾಗದಿಂದ ಹದಿಮೂರು ಪಟ್ಟಣಗಳನ್ನು ಕೊಡಲಾಯಿತು, ಕೆಹಾತ್ಯರು ಲೇವಿ ಕುಲದವನೂ ಯಾಜಕನೂ ಆದ ಆರೋನನ ಸಂತತಿಯವರಾಗಿದ್ದರು.


“ಕೆಹಾತ್ ಗೋತ್ರದ ಪುರುಷರನ್ನು ಲೆಕ್ಕಿಸು. (ಕೆಹಾತ್ಯರು ಲೇವಿ ವಂಶದವರಾಗಿದ್ದಾರೆ.)


ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್ ಗೋತ್ರಗಳವರು ಕೆಹಾತನ ಕುಲದವರಾಗಿದ್ದರು.


ಕೆಹಾತನ ಗೋತ್ರಗಳು: ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್.


ಕೆಹಾತನು ನೂರಮೂವತ್ತು ಮೂರು ವರ್ಷ ಜೀವಿಸಿದನು. ಕೆಹಾತನ ಗಂಡುಮಕ್ಕಳು: ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್.


ಯೆಹೂದ ಮತ್ತು ಸಿಮೆಯೋನ್ ಕುಲದವರ ಪ್ರದೇಶಗಳಲ್ಲಿ ಬರುವ ಪಟ್ಟಣಗಳ ಹೆಸರುಗಳು ಇಂತಿವೆ:


ಅವರಿಗೆ ಹೆಬ್ರೋನ್ ಎಂಬ ಕಿರ್ಯತರ್ಬನಗರ (ಇದಕ್ಕೆ ಅನಾಕನ ತಂದೆಯಾದ ಅರ್ಬನ ಹೆಸರಿಡಲಾಗಿತ್ತು.) ಮತ್ತು ಅವರ ಪಶುಗಳಿಗಾಗಿ ಆ ನಗರದ ಹತ್ತಿರದ ಸ್ವಲ್ಪ ಭೂಮಿಯನ್ನು ಕೊಡಲಾಯಿತು.


ಈ ಸ್ಥಳಗಳಲ್ಲಿ ಆರೋನನ ಸಂತತಿಯವರು ವಾಸಿಸಿದರು. ಅವರು ತಮಗೆ ಕೊಟ್ಟಿದ್ದ ಪ್ರದೇಶದಲ್ಲಿ ಪಾಳೆಯಗಳಲ್ಲಿ ವಾಸಮಾಡಿದರು. ಲೇವಿಯರಿಗೆ ಕೊಟ್ಟಿರುವ ಪ್ರಾಂತ್ಯದ ಮೊದಲನೆಯ ಪಾಲು ಕೆಹಾತ್ಯರಿಗೆ ಕೊಡಲ್ಪಟ್ಟಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು