ಯೆಹೋಶುವ 19:1 - ಪರಿಶುದ್ದ ಬೈಬಲ್1 ಅನಂತರ ಯೆಹೋಶುವನು ಸಿಮೆಯೋನ್ ಕುಲದ ಎಲ್ಲ ಗೋತ್ರಗಳಿಗೆ ಅವರ ಪಾಲಿನ ಭೂಮಿಯನ್ನು ಕೊಟ್ಟನು. ಅವರಿಗೆ ಸಿಕ್ಕ ಭೂಮಿಯು ಯೆಹೂದ ಕುಲದವರಿಗೆ ಸೇರಿದ ಭೂಭಾಗದ ಮಧ್ಯದಲ್ಲಿತ್ತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಚೀಟು ಎರಡನೆಯ ಸಾರಿ ಸಿಮೆಯೋನನ ಕುಲದವರಿಗೆ ಬಿದ್ದಿತು. ಸಿಮೆಯೋನನ ಕುಲದ ಗೋತ್ರಗಳ ಸ್ವತ್ತು ಯೆಹೂದ ಕುಲದವರ ಸ್ವತ್ತಿನ ಮಧ್ಯದಲ್ಲಿತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1 ಎರಡನೇ ಸಾರಿಯ ಚೀಟು ಸಿಮೆಯೋನ್ ಕುಲದವರಿಗೆ ಬಿದ್ದಿತು. ಈ ಸಿಮೆಯೋನ್ ಕುಲದ ಗೋತ್ರಗಳ ಸೊತ್ತು ಯೂದಕುಲದವರ ಸೊತ್ತಿನ ಮಧ್ಯದಲ್ಲಿತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 ಚೀಟು ಎರಡನೆಯ ಸಾರಿ ಸಿಮೆಯೋನ್ ಕುಲದವರಿಗೆ ಬಿದ್ದಿತು. ಸಿಮೆಯೋನ್ ಕುಲದ ಗೋತ್ರಗಳ ಸ್ವಾಸ್ತ್ಯವು ಯೆಹೂದಕುಲದವರ ಸ್ವಾಸ್ತ್ಯದ ಮಧ್ಯದಲ್ಲಿತ್ತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ1 ಎರಡನೆಯ ಚೀಟು ಬಿದ್ದ ಭಾಗವು ಸಿಮೆಯೋನನ ಗೋತ್ರದವರದಾಗಿತ್ತು. ಸಿಮೆಯೋನನ ಗೋತ್ರದವರಿಗೆ ಅವರ ಕುಟುಂಬಗಳ ಪ್ರಕಾರ ದೊರೆಯಿತು. ಅವರ ಸೊತ್ತು ಯೆಹೂದ ಗೋತ್ರದ ಸೊತ್ತಿನ ಮಧ್ಯದಲ್ಲಿತ್ತು. ಅಧ್ಯಾಯವನ್ನು ನೋಡಿ |