Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 17:13 - ಪರಿಶುದ್ದ ಬೈಬಲ್‌

13 ಆದರೆ ಸ್ವಲ್ಪ ಕಾಲದ ನಂತರ ಇಸ್ರೇಲರು ಬಲಶಾಲಿಗಳಾಗಿ ಕಾನಾನ್ಯರನ್ನು ತಮ್ಮ ಗುಲಾಮರನ್ನಾಗಿ ಮಾಡಿಕೊಂಡರು. ಆದರೆ ಅವರನ್ನು ಅಲ್ಲಿಂದ ಹೊರಗಟ್ಟಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಇಸ್ರಾಯೇಲ್ಯರು ಬಲಗೊಂಡ ಮೇಲೆ ಕಾನಾನ್ಯರನ್ನು ಹೊರಡಿಸದೇ ಅವರನ್ನು ದಾಸತ್ವಕ್ಕೆ ಹಚ್ಚಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಇಸ್ರಯೇಲರು ಬಲಗೊಂಡ ಮೇಲೂ ಕಾನಾನ್ಯರನ್ನು ಹೊರದೂಡದೆ ಅವರನ್ನು ಜೀತದಾರರನ್ನಾಗಿಸಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಇಸ್ರಾಯೇಲ್ಯರು ಬಲಗೊಂಡ ಮೇಲೆ ಕಾನಾನ್ಯರನ್ನು ಹೊರಡಿಸದೆ ಅವರನ್ನು ದಾಸತ್ವಕ್ಕೆ ಹಚ್ಚಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಆದರೆ ಇಸ್ರಾಯೇಲರು ಬಲಗೊಂಡಾಗ, ಕಾನಾನ್ಯರನ್ನು ಹೊರಡಿಸದೆ ಅವರನ್ನು ಜೀತದಾಳುಗಳನ್ನಾಗಿ ಮಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 17:13
13 ತಿಳಿವುಗಳ ಹೋಲಿಕೆ  

ಆದರೆ ಎಫ್ರಾಯೀಮಿನ ಜನರಿಗೆ ಗೆಜೆರಿನಲ್ಲಿದ್ದ ಕಾನಾನ್ಯರನ್ನು ಅಲ್ಲಿಂದ ಹೊರದೂಡುವುದು ಸಾಧ್ಯವಾಗಲಿಲ್ಲ. ಅದಕ್ಕಾಗಿ ಇಂದಿಗೂ ಕಾನಾನ್ಯರು ಎಫ್ರಾಯೀಮ್ ಜನರೊಂದಿಗೆ ಇರುತ್ತಾರೆ. ಆದರೆ ಕಾನಾನ್ಯರು ಎಫ್ರಾಯೀಮ್ ಜನರ ದಾಸರಾಗಿದ್ದಾರೆ.


ಕ್ರಿಸ್ತನ ಮೂಲಕ ನಾನು ಎಲ್ಲಾ ಕಾರ್ಯಗಳನ್ನು ಮಾಡಬಲ್ಲೆನು. ಏಕೆಂದರೆ ಆತನು ನನ್ನನ್ನು ಬಲಪಡಿಸುತ್ತಾನೆ.


ನಿಮ್ಮ ಪ್ರಭುವಾದ ಮತ್ತು ರಕ್ಷಕನಾದ ಯೇಸು ಕ್ರಿಸ್ತನ ಕೃಪೆಯಲ್ಲಿಯೂ ತಿಳುವಳಿಕೆಯಲ್ಲಿಯೂ ಬೆಳೆಯುತ್ತಲೇ ಇರಿ. ಆತನಿಗೆ ಈಗಲೂ ಎಂದೆಂದಿಗೂ ಮಹಿಮೆಯಾಗಲಿ! ಆಮೆನ್.


ಕಡೇ ಮಾತೇನೆಂದರೆ, ಪ್ರಭುವಿನಲ್ಲಿಯೂ ಆತನ ಮಹಾಶಕ್ತಿಯಲ್ಲಿಯೂ ಬಲವಾಗಿರಿ.


ಸೌಲನ ವಂಶದವರ ಮತ್ತು ದಾವೀದನ ವಂಶದವರ ಮಧ್ಯೆ ಬಹಳ ಕಾಲದವರೆಗೆ ಯುದ್ಧವು ನಡೆಯಿತು. ದಾವೀದನು ಬಲಗೊಳ್ಳುತ್ತಲೇ ಇದ್ದನು. ಸೌಲನ ವಂಶವು ದುರ್ಬಲಗೊಳ್ಳುತ್ತಲೇ ಇದ್ದಿತು.


ಅಮೋರಿಯರು ಹರ್‌ಹೆರೆಸ್ ಪರ್ವತ, ಅಯ್ಯಾಲೋನ್ ಮತ್ತು ಶಾಲ್ಬೀಮ್‌ಗಳಲ್ಲಿ ವಾಸಿಸಬೇಕೆಂದು ನಿರ್ಧರಿಸಿದರು. ತರುವಾಯ ಯೋಸೇಫ್ಯರು ಪ್ರಬಲರಾದರು. ಆಗ ಅವರು ಅಮೋರಿಯರನ್ನು ತಮ್ಮ ಗುಲಾಮರನ್ನಾಗಿ ಮಾಡಿಕೊಂಡರು.


ನಫ್ತಾಲ್ಯರಿಗೂ ಹೀಗೆಯೇ ಆಯಿತು. ನಫ್ತಾಲ್ಯರು ಅಲ್ಲಿಯ ಜನರನ್ನು ಬೇತ್‌ಷೆಮೆಷ್, ಬೇತನಾತ್ ನಗರಗಳಿಂದ ಹೊರದೂಡಲಿಲ್ಲ. ಹೀಗಾಗಿ ನಫ್ತಾಲ್ಯರು ಆ ನಗರಗಳ ಜನರೊಡನೆ ವಾಸಮಾಡ ತೊಡಗಿದರು. ಆ ಕಾನಾನ್ಯರು ನಫ್ತಾಲ್ಯರ ಗುಲಾಮರಾಗಿ ಕೆಲಸ ಮಾಡಿಕೊಂಡಿದ್ದರು.


ಜೆಬುಲೂನ್ಯರ ಸಂಗಡವೂ ಹೀಗೆಯೇ ಆಯಿತು. ಕಿಟ್ರೋನ್ ಮತ್ತು ನಹಲೋಲ್ ನಗರಗಳಲ್ಲಿ ಕೆಲವು ಕಾನಾನ್ಯರು ವಾಸಮಾಡಿಕೊಂಡಿದ್ದರು. ಜೆಬುಲೂನ್ಯರು ಅವರನ್ನು ಆ ಪ್ರದೇಶದಿಂದ ಹೊರದೂಡಲಿಲ್ಲ. ಆ ಕಾನಾನ್ಯರು ಅಲ್ಲಿಯೇ ಉಳಿದುಕೊಂಡು ಜೆಬುಲೂನ್ಯರೊಂದಿಗೆ ವಾಸಮಾಡಿದರು. ಆದರೆ ಜೆಬುಲೂನ್ಯರು ಅವರನ್ನು ತಮ್ಮ ಗುಲಾಮರಂತೆ ಕೆಲಸಮಾಡಲು ಹಚ್ಚಿದರು.


ಅನಂತರ ಇಸ್ರೇಲರು ಪ್ರಬಲರಾಗಿ ಬಲವಂತದಿಂದ ಕಾನಾನ್ಯರನ್ನು ತಮ್ಮ ಗುಲಾಮರನ್ನಾಗಿ ಮಾಡಿಕೊಂಡರು. ಆದರೆ ಎಲ್ಲಾ ಕಾನಾನ್ಯರನ್ನೂ ಅವರ ಮನೆಗಳಿಂದ ಹೊರಗಟ್ಟಲು ಇಸ್ರೇಲರಿಗೆ ಸಾಧ್ಯವಾಗಲಿಲ್ಲ.


ಅವನು ತನ್ನ ವಿಶ್ರಾಂತಿಗೆ ಅನುಕೂಲವಾಗಿರುವ ಮತ್ತು ಪ್ರಶಾಂತವಾಗಿರುವ ನಾಡನ್ನು ನೋಡುವನು. ಅವನು ಭಾರವಾದ ಹೊರೆಗಳನ್ನು ಹೊರುವುದಕ್ಕೂ ಗುಲಾಮನಂತೆ ದುಡಿಯುವುದಕ್ಕೂ ಒಪ್ಪಿಕೊಳ್ಳುವನು.”


ಇಸ್ರೇಲರು ಈ ಜನರನ್ನು ನಾಶಪಡಿಸಲು ಸಮರ್ಥರಾಗಿರಲಿಲ್ಲ. ಆದರೆ ಸೊಲೊಮೋನನು ಅವರನ್ನು ತನ್ನ ಕೆಲಸ ಮಾಡಲು ಗುಲಾಮರನ್ನಾಗಿ ಇಟ್ಟುಕೊಂಡನು; ಅವರು ಇಂದಿಗೂ ಗುಲಾಮರಾಗಿದ್ದಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು