Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 16:5 - ಪರಿಶುದ್ದ ಬೈಬಲ್‌

5 ಎಫ್ರಾಯೀಮ್ ಕುಲದವರಿಗೆ ಕೊಟ್ಟ ಸ್ವಾಸ್ತ್ಯವು ಇಂತಿದೆ: ಅವರ ಸ್ವಾಸ್ತ್ಯದ ಪೂರ್ವದಿಕ್ಕಿನ ಸೀಮೆಯು ಮೇಲಿನ ಬೇತ್‌ಹೋರೋನಿನ ಹತ್ತಿರ ಇದ್ದ ಅಟಾರೋತದ್ದಾರಿನಿಂದ ಆರಂಭವಾಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಎಫ್ರಾಯೀಮ್ ಗೋತ್ರಗಳ ದೇಶದ ದಕ್ಷಿಣ ದಿಕ್ಕಿನ ಮೇರೆಯು ಅಟಾರೋತದ್ದಾರಿನ ಪೂರ್ವ ದಿಕ್ಕಿನಿಂದ ಬೇತ್ ಹೋರೋನಿನ ಮೇಲೆ ಸಮುದ್ರತೀರಕ್ಕೆ ಹೋಗಿ ಅಲ್ಲಿ ಮುಕ್ತಾಯಗೊಳ್ಳುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಎಫ್ರಯಿಮ್ ಗೋತ್ರಗಳ ನಾಡಿನ ದಕ್ಷಿಣ ದಿಕ್ಕಿನ ಎಲ್ಲೆ ಆಟಾರೋತದ್ದಾರಿನ ಪೂರ್ವ ದಿಕ್ಕಿನಿಂದ ತೊಡಗಿ ಮೇಲಿನ ಬೇತ್ ಹೋರೋನಿನ ಮೇಲೆ ಸಮುದ್ರ ತೀರಕ್ಕೆ ಹೋಗಿ ಅಲ್ಲಿ ಮುಕ್ತಾಯಗೊಳ್ಳುತ್ತದೆ. ಅದರ ಉತ್ತರ ದಿಕ್ಕಿನ ಎಲ್ಲೆ ಮಿಕ್ಮೆತಾತ್ ಎಂಬಲ್ಲಿ ತೊಡಗಿ ಪೂರ್ವಕ್ಕೆ ತಿರುಗಿಕೊಂಡು ತಾನತ್ ಶೀಲೋ ಎಂಬಲ್ಲಿಗೆ ಹೋಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಎಫ್ರಾಯೀಮ್ ಗೋತ್ರಗಳ ದೇಶದ [ದಕ್ಷಿಣ ದಿಕ್ಕಿನ] ಮೇರೆಯು ಅಟಾರೋತದ್ದಾರಿನ ಪೂರ್ವದಿಕ್ಕಿನಿಂದ ತೊಡಗಿ ಮೇಲಿನ ಬೇತ್‍ಹೋರೋನಿನ ಮೇಲೆ ಸಮುದ್ರತೀರಕ್ಕೆ ಹೋಗಿ ಅಲ್ಲಿ ಮುಗಿಯುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಅವರ ಕುಟುಂಬಗಳ ಪ್ರಕಾರ ಎಫ್ರಾಯೀಮ್ ಗೋತ್ರದ ಪ್ರದೇಶ ಹೀಗಿತ್ತು: ಪೂರ್ವದಿಕ್ಕಿನ ಅಟಾರೋತ್ ಅದ್ದಾರಿನಿಂದ ಪ್ರಾರಂಭಿಸಿ, ಮೇಲಿನ ಬೇತ್ ಹೋರೋನಿನವರೆಗೂ ಇತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 16:5
7 ತಿಳಿವುಗಳ ಹೋಲಿಕೆ  

ದಕ್ಷಿಣದಲ್ಲಿರುವ ಬೇತೇಲ್ ಎಂಬ ಲೂಜಿಗೆ ಹೋಗುತ್ತದೆ. ಅಲ್ಲಿಂದ ಇಳಿದು ಅಟಾರೋತದ್ದಾರ್‌ಗೆ ಹೋಗುತ್ತದೆ. ಅಟಾರೋತದ್ದಾರ್ ಕೆಳಗಿನ ಬೇತ್‌ಹೋರೋನಿನ ದಕ್ಷಿಣದಲ್ಲಿರುವ ಬೆಟ್ಟದ ಮೇಲೆ ಇದೆ.


ಲೂಜ್ ಎಂದು ಕರೆಯುವ ಬೇತೇಲಿನಿಂದ ಅಟಾರೋತಿನಲ್ಲಿ ಅರ್ಕೀಯರ ಸೀಮೆಗೆ ಹೋಗುತ್ತದೆ.


ಇಸ್ರೇಲರು ಧಾಳಿಮಾಡಿದಾಗ ಯೆಹೋವನು ಆ ಶತ್ರು ಸೈನ್ಯವನ್ನು ಗಾಬರಿಗೊಳಿಸಿದನು. ಆದ್ದರಿಂದ ಇಸ್ರೇಲಿನ ಸೈನಿಕರು ಅವರನ್ನು ಸೋಲಿಸಿ ಮಹಾವಿಜಯವನ್ನು ಸಾಧಿಸಿದರು. ಇಸ್ರೇಲರು ಶತ್ರುಗಳನ್ನು ಗಿಬ್ಯೋನಿನಿಂದ ಬೇತ್‌ಹೋರೋನಿಗೆ ಹೋಗುವ ದಾರಿಯವರೆಗೂ ಬೆನ್ನಟ್ಟಿದರು. ಇಸ್ರೇಲರು ಅಜೇಕ ಮತ್ತು ಮಕ್ಕೇದದವರೆಗೆ ಅವರನ್ನು ಕೊಂದರು.


ಎಫ್ರಾಯೀಮನ ಮಗಳ ಹೆಸರು ಶೇರ. ಅವಳು ಕೆಳಗಿನ ಬೇತ್‌ಹೋರೋನ್ ಮತ್ತು ಮೇಲಿನ ಬೇತ್‌ಹೋರೋನ್ ಮತ್ತು ಕೆಳಗಿನ ಉಜ್ಜೇನ್‌ಶೇರ ಮತ್ತು ಮೇಲಿನ ಉಜ್ಜೇನ್‌ಶೇರ ಪಟ್ಟಣಗಳನ್ನು ಕಟ್ಟಿಸಿದಳು.


ಆ ಸ್ಥಳದಲ್ಲಿ ಅಬ್ನೇರನು ಈಷ್ಬೋಶೆತನನ್ನು ಗಿಲ್ಯಾದ್, ಆಶೇರ್, ಇಜ್ರೇಲ್, ಎಫ್ರಾಯೀಮ್ ಮತ್ತು ಬೆನ್ಯಾಮೀನ್ ಜನರ ಮೇಲೆಯೂ ಮತ್ತು ಇಸ್ರೇಲಿಗೆಲ್ಲ ರಾಜನನ್ನಾಗಿ ಮಾಡಿದನು.


ಎಫ್ರಾಯೀಮನ ಸಂತತಿಯವರು ವಾಸಿಸಿದ ಪಟ್ಟಣಗಳು ಯಾವುವೆಂದರೆ: ಬೇತೇಲ್ ಮತ್ತು ಅದರ ಪಕ್ಕದಲ್ಲಿದ್ದ ಹಳ್ಳಿಗಳು; ಪೂರ್ವದಲ್ಲಿ ನಾರಾನ್; ಪಶ್ಚಿಮದಲ್ಲಿ ಗೆಜೆರ್ ಪಟ್ಟಣ ಮತ್ತು ಅದರ ಪಕ್ಕದಲ್ಲಿದ್ದ ಹಳ್ಳಿಗಳು; ಶೆಕೆಮ್ ಪಟ್ಟಣ ಮತ್ತು ಅದರ ಸಮೀಪದಲ್ಲಿದ್ದ ಹಳ್ಳಿಗಳು, ಅಯ್ಯಾ ಪಟ್ಟಣ ಮತ್ತು ಅದರ ಸಮೀಪದಲ್ಲಿದ್ದ ಹಳ್ಳಿಗಳು;


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು