Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 15:3 - ಪರಿಶುದ್ದ ಬೈಬಲ್‌

3 ಆ ಸೀಮೆಯು ದಕ್ಷಿಣದಲ್ಲಿ ಸ್ಕಾರ್ಪಿಯನ್ ಎಂಬ ಇಕ್ಕಟ್ಟಾದ ಮಾರ್ಗದಿಂದ ಮುನ್ನಡೆದು ಚಿನ್ ಮರುಭೂಮಿಯವರೆಗೆ ಹೋಗಿತ್ತು. ಅಲ್ಲಿಂದ ಅದು ದಕ್ಷಿಣದಲ್ಲಿ ಕಾದೇಶ್‌ಬರ್ನೇಯದವರೆಗೂ ಹೆಚ್ರೋನ್‌ನಿಂದ ಅದ್ದಾರವರೆಗೂ ಮುಂದುವರಿದು ಅಲ್ಲಿ ತಿರುಗಿಕೊಂಡು ಕರ್ಕದವರೆಗೆ ವಿಸ್ತರಿಸಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಅಕ್ರಬ್ಬೀಮ್ ಕಣಿವೆಯ ದಕ್ಷಿಣ ಮಾರ್ಗವಾಗಿ ಚಿನಿಗೆ ಹೋಗುತ್ತದೆ. ಅಲ್ಲಿಂದ ಕಾದೇಶ್ ಬರ್ನೇಯದ ದಕ್ಷಿಣ ಮಾರ್ಗವಾಗಿ ಹೆಚ್ರೋನಿಗೂ ಅಲ್ಲಿಂದ ಏರುತ್ತಾ ಅದ್ದಾರಿಗೂ ಹೋಗಿ ಕರ್ಕದ ಕಡೆಗೆ ತಿರುಗಿಕೊಳ್ಳುತ್ತದೆ ಅಚ್ಮೋನಿನ ಮೇಲೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಅಕ್ರಬ್ಬೀಮ್ ಎಂಬ ಕೊಲ್ಲಿಯ ದಕ್ಷಿಣ ಮಾರ್ಗವಾಗಿ ಚಿನ್ ಗೆ ಹೋಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಅಕ್ರಬ್ಬೀಮೆಂಬ ಕಣಿವೆಯ ದಕ್ಷಿಣಮಾರ್ಗವಾಗಿ ಚಿನಿಗೆ ಹೋಗುವದು. ಅಲ್ಲಿಂದ ಕಾದೇಶ್‍ಬರ್ನೇಯದ ದಕ್ಷಿಣಮಾರ್ಗವಾಗಿ ಹೆಚ್ರೋನಿಗೂ ಅಲ್ಲಿಂದ ಏರುತ್ತಾ ಅದ್ದಾರಿಗೂ ಹೋಗಿ ಕರ್ಕದ ಕಡೆಗೆ ತಿರುಗಿಕೊಂಡು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಅಕ್ರಬ್ಬೀಮ್ ಎಂಬ ಕಣಿವೆಯ ದಕ್ಷಿಣಮಾರ್ಗವಾಗಿ ಚಿನಿಗೆ ಹೋಗುವದು. ಅಲ್ಲಿಂದ ದಕ್ಷಿಣದಲ್ಲಿರುವ ಕಾದೇಶ್ ಬರ್ನೇಯಕ್ಕೂ ಅಲ್ಲಿಂದ ಹೆಚ್ರೋನನಿಂದ ಅದ್ದಾರವರೆಗೂ ಮುಂದುವರೆದು ಅಲ್ಲಿ ತಿರಿಗಿಕೊಂಡು ಕರ್ಕದವರೆಗೂ ವಿಸ್ತರಿಸಿಕೊಂಡಿತ್ತು,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 15:3
7 ತಿಳಿವುಗಳ ಹೋಲಿಕೆ  

ಅಲ್ಲಿಂದ ಅದು ಅಕ್ರಬ್ಬೀಮ್ ಕಣಿವೆಗೆ ತಿರುಗಿಕೊಂಡು ಚಿನಿಗೆ ಮುಂದುವರಿಯುವುದು. ಅದರ ಪರಿಮಿತಿ ದಕ್ಷಿಣ ಕಾದೇಶ್ ಬರ್ನೇಯಾ. ಅಲ್ಲಿಂದ ಅದು ಹಚರದ್ದಾರ್‌ಗೆ ಹೋಗಿ ಅಚ್ಮೋನಿಗೆ ಮುಂದುವರಿಯುತ್ತದೆ.


ಅಮೋರಿಯರ ಪ್ರದೇಶವು ಸ್ಕಾರ್ಪಿಯನ್ ಕಣಿವೆಯಿಂದ ಸೇಲಾದವರೆಗೆ ಮತ್ತು ಸೇಲಾದಿಂದ ಮುಂದೆ ಬೆಟ್ಟಪ್ರದೇಶಗಳವರೆಗೆ ಹಬ್ಬಿತ್ತು.


ಆ ದೇಶವನ್ನು ನೋಡಿಕೊಂಡು ಬರುವುದಕ್ಕೆ ನಾನು ಕಾದೇಶ್ ಬರ್ನೇಯದಿಂದ ನಿಮ್ಮ ಪೂರ್ವಿಕರನ್ನು ಗೂಢಚಾರರನ್ನಾಗಿ ಕಳುಹಿಸಿದಾಗ ಅವರೂ ಹಾಗೆಯೇ ಮಾಡಿದರಲ್ಲಾ.


ಮೊದಲನೆಯ ತಿಂಗಳಲ್ಲಿ ಇಡೀ ಇಸ್ರೇಲ್ ಸಮುದಾಯವು ಚಿನ್ ಮರುಭೂಮಿಗೆ ಬಂದಿತು. ಅವರು ಕಾದೇಶಿನಲ್ಲಿ ಇಳಿದುಕೊಂಡರು. ಅಲ್ಲಿ ಮಿರ್ಯಾಮಳು ಸತ್ತಳು. ಆಕೆಯ ಶವವನ್ನು ಅಲ್ಲಿ ಸಮಾಧಿ ಮಾಡಲಾಯಿತು.


ಆ ಬಳಿಕ ರಾಜ ಕೆದೊರ್ಲಗೋಮರನು ಉತ್ತರದ ಕಡೆಗೆ ತಿರುಗಿ ಕಾದೇಶ್ ಎನ್ನುವ ಎನ್ಮಿಷ್ಪಾಟಿಗೆ ಬಂದು ಎಲ್ಲಾ ಅಮಾಲೇಕ್ಯರನ್ನು ಸೋಲಿಸಿದನು. ಇದಲ್ಲದೆ ಅವನು ಹಚಚೋನ್‌ತಾಮರಿನಲ್ಲಿ ವಾಸವಾಗಿದ್ದ ಅಮೋರಿಯರನ್ನು ಸೋಲಿಸಿದನು.


ಯೆಹೂದ್ಯರ ಸ್ವಾಸ್ತ್ಯವು ಲವಣಸಮುದ್ರದ ದಕ್ಷಿಣ ತೀರದಿಂದ ಆರಂಭವಾಗಿತ್ತು.


ಆ ಸೀಮೆಯು ಈಜಿಪ್ಟಿನ ಅಚ್ಮೋನಿನ ಹಳ್ಳಕ್ಕೆ ಮುಂದುವರೆದು ಮೆಡಿಟರೆನಿಯನ್ ಸಮುದ್ರದವರೆಗೆ ಹಬ್ಬಿತ್ತು. ಈ ಭೂಮಿಯೆಲ್ಲಾ ಅವರ ದಕ್ಷಿಣ ಸೀಮೆಯಲ್ಲಿತ್ತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು