ಯೆಹೋಶುವ 13:32 - ಪರಿಶುದ್ದ ಬೈಬಲ್32 ಮೋಶೆಯು ಈ ಪ್ರದೇಶಗಳನ್ನೆಲ್ಲ ಆಯಾ ಕುಲಗಳಿಗೆ ಮೋವಾಬ್ ಬಯಲಿನಲ್ಲಿ ಇಳಿದುಕೊಂಡಿದ್ದಾಗ ಹಂಚಿಕೊಟ್ಟನು. ಮೋವಾಬ್ ಬಯಲು ಜೆರಿಕೊ ನಗರಕ್ಕೆ ಪೂರ್ವದಲ್ಲಿಯೂ ಜೋರ್ಡನ್ ನದಿಯ ಆಚೆದಡದಲ್ಲೂ ಇತ್ತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201932 ಮೋಶೆಯು ಯೊರ್ದನಿನ ಆಚೆ ಯೆರಿಕೋವಿನ ಎದುರಿನಲ್ಲಿರುವ ಮೋವಾಬ್ಯರ ಬಯಲಿನಲ್ಲಿದ್ದಾಗ ಇವುಗಳನ್ನು ಅವರಿಗೆ ಸ್ವತ್ತಾಗಿ ಕೊಟ್ಟನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)32 ಮೋಶೆ ಜೋರ್ಡನಿನ ಆಚೆ ಜೆರಿಕೋವಿನ ಎದುರಿನಲ್ಲಿರುವ ಮೋವಾಬ್ಯರ ಬಯಲು ಪ್ರದೇಶದಲ್ಲಿದ್ದಾಗ ಇವುಗಳನ್ನು ಅವರಿಗೆ ಸ್ವಂತ ಆಸ್ತಿಯಾಗಿ ಕೊಟ್ಟನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)32 ಮೋಶೆಯು ಯೊರ್ದನಿನ ಆಚೆ ಯೆರಿಕೋವಿನ ಎದುರಿನಲ್ಲಿರುವ ಮೋವಾಬ್ಯರ ಬೈಲಿನಲ್ಲಿದ್ದಾಗ ಇವುಗಳನ್ನು ಅವರಿಗೆ ಸ್ವಾಸ್ತ್ಯವಾಗಿ ಕೊಟ್ಟನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ32 ಹೀಗೆಯೇ ಮೋಶೆಯು ಯೊರ್ದನ್ ನದಿಗೆ ಆಚೆ ಯೆರಿಕೋವಿನ ಪೂರ್ವದಿಕ್ಕಿನಲ್ಲಿರುವ ಮೋವಾಬ್ಯರ ಬಯಲುಗಳಲ್ಲಿ ಬಾಧ್ಯತೆಯಾಗಿ ಹಂಚಿದ ದೇಶಗಳು ಇವೆ. ಅಧ್ಯಾಯವನ್ನು ನೋಡಿ |