ಯೆಹೋಶುವ 13:2 - ಪರಿಶುದ್ದ ಬೈಬಲ್2 ನೀನು ಗೆಷೂರ ಪ್ರದೇಶವನ್ನು ಮತ್ತು ಫಿಲಿಷ್ಟಿಯರ ಪ್ರದೇಶವನ್ನು ಇನ್ನೂ ವಶಪಡಿಸಿಕೊಂಡಿಲ್ಲ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20192 ಅವುಗಳು ಯಾವುವೆಂದರೆ: ಐಗುಪ್ತದ ಈಚೆಯಲ್ಲಿರುವ ಶೀಹೋರ್ ಹಳ್ಳ ಮೊದಲುಗೊಂಡು ಕಾನಾನ್ಯರಿಗೆ ಸೇರಿರುವ ಉತ್ತರ ಮೇರೆಯಾದ ಎಕ್ರೋನಿನವರೆಗಿರುವ ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)2-3 ಅವು ಯಾವುವೆಂದರೆ - ಈಜಿಪ್ಟಿನ ಈಚೆಯಿರುವ ಶೀಹೋರ್ ನದಿಯಿಂದ ಕಾನಾನ್ಯರಿಗೆ ಸೇರಿದ ಉತ್ತರ ಮೇರೆಯಾದ ಎಕ್ರೋನಿನವರೆಗಿರುವ ಗಾಜಾ, ಅಷ್ಡೋದ್, ಅಷ್ಕೆಲೋನ್, ಗತೂರ್, ಎಕ್ರೋನ್ ಎಂಬ ನಗರಗಳ ಐದು ಮಂದಿ ಫಿಲಿಷ್ಟಿಯ ಪ್ರಭುಗಳ ಸ್ವಾಧೀನದಲ್ಲಿದ್ದಂಥ ಫಿಲಿಷ್ಟಿಯ ಪ್ರಾಂತ್ಯ; ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)2-3 ಅವು ಯಾವವಂದರೆ - ಐಗುಪ್ತದ ಈಚೆಯಲ್ಲಿರುವ ಶೀಹೋರ್ ಹಳ್ಳ ಮೊದಲುಗೊಂಡು ಕಾನಾನ್ಯರಿಗೆ ಸೇರಿದ್ದ ಉತ್ತರ ಮೇರೆಯಾದ ಎಕ್ರೋನಿನವರೆಗಿದ್ದು ಗಾಜಾ, ಅಷ್ಡೋದ್, ಅಷ್ಕೆಲೋನ್, ಗತೂರು, ಎಕ್ರೋನ್ ಎಂಬ ಪಟ್ಟಣಗಳ ಐದು ಮಂದಿ ಫಿಲಿಷ್ಟಿಯ ಪ್ರಭುಗಳ ಸ್ವಾಧೀನದಲ್ಲಿದ್ದಂಥ ಫಿಲಿಷ್ಟಿಯ ಪ್ರಾಂತ್ಯವು, ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ2 “ಅವು ಯಾವುವೆಂದರೆ: “ಫಿಲಿಷ್ಟಿಯರ ಮತ್ತು ಗೆಷೂರ್ಯರ ದೇಶವೆಲ್ಲಾ ಅಂದರೆ, ಅಧ್ಯಾಯವನ್ನು ನೋಡಿ |
ಇಸ್ರೇಲರ ಪ್ರದೇಶವನ್ನು ಬಿಟ್ಟುಹೋಗುವಂತೆ ಯೆಹೋವನು ಉಳಿದೆಲ್ಲ ಜನಾಂಗದವರನ್ನು ಒತ್ತಾಯಪಡಿಸಲಿಲ್ಲ. ಯೆಹೋವನು ಇಸ್ರೇಲರನ್ನು ಪರೀಕ್ಷಿಸಬೇಕೆಂದಿದ್ದನು. ಈಗ ಬದುಕಿದ್ದ ಇಸ್ರೇಲರಲ್ಲಿ ಯಾರೂ ಕಾನಾನ್ಯರ ಭೂಮಿಯನ್ನು ತೆಗೆದುಕೊಳ್ಳುವುದಕ್ಕಾಗಿ ಯುದ್ಧ ಮಾಡಿರಲಿಲ್ಲ. ಅದಕ್ಕಾಗಿ ಯೆಹೋವನು ಆ ಬೇರೆ ಜನಾಂಗದವರನ್ನು ಅವರ ದೇಶದಲ್ಲಿ ವಾಸಿಸಲು ಬಿಟ್ಟನು. (ಆ ಯುದ್ಧಗಳಲ್ಲಿ ಭಾಗವಹಿಸದ ಈ ಇಸ್ರೇಲರಿಗೆ ಯುದ್ಧ ಮಾಡುವುದನ್ನು ಕಲಿತುಕೊಳ್ಳಲು ಒಂದು ಅವಕಾಶ ದೊರೆಯುವಂತೆ ಯೆಹೋವನು ಹೀಗೆ ಮಾಡಿದ್ದನು.) ಯೆಹೋವನು ಆ ಭೂಮಿಯಲ್ಲಿ ವಾಸಿಸಲು ಬಿಟ್ಟ ಜನಾಂಗಗಳ ಹೆಸರುಗಳು ಇಂತಿವೆ: