ಯೆಹೋಶುವ 13:16 - ಪರಿಶುದ್ದ ಬೈಬಲ್16 ಅರ್ನೋನ್ ತಗ್ಗಿನ ಸಮೀಪದಲ್ಲಿದ್ದ ಅರೋಯೇರ್‌ನಿಂದ ಮೇದೆಬದವರೆಗಿರುವ ಪ್ರದೇಶ. ಇದು ಇಡೀ ತಪ್ಪಲ ಪ್ರದೇಶವನ್ನು ಮತ್ತು ಆ ತಗ್ಗು ಪ್ರದೇಶದ ಮಧ್ಯದಲ್ಲಿದ್ದ ಊರುಗಳನ್ನು ಒಳಗೊಂಡಿತ್ತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201916 ಅರ್ನೋನ್ ಕಣಿವೆಯ ಅಂಚಿನಲ್ಲಿದ್ದ ಅರೋಯೇರ್ ಪಟ್ಟಣ; ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)16 ಅರ್ನೋನ್ ಕಣಿವೆಯ ಅಂಚಿನಲ್ಲಿದ್ದ ಅರೋಯೇರ್ ನಗರ, ಅದೇ ಕಣಿವೆಯ ಮಧ್ಯೆಯಿದ್ದ ನಗರ; ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)16 ಅರ್ನೋನ್ ತಗ್ಗಿನ ಅಂಚಿನಲ್ಲಿದ್ದ ಅರೋಯೇರ್ ಪಟ್ಟಣ, ಆ ತಗ್ಗಿನ ಮಧ್ಯದಲ್ಲಿದ್ದ ಪಟ್ಟಣ ಇವುಗಳೂ ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ16 ಅರ್ನೋನ್ ಕಣಿವೆಯ ಅಂಚಿನಲ್ಲಿದ್ದ ಅರೋಯೇರ್ ಪಟ್ಟಣವು ಮೊದಲುಗೊಂಡು, ಮೇದೆಬಾದ ಬಳಿಯಲ್ಲಿರುವ ಸಕಲ ಸಮನಾದ ಭೂಮಿಯೂ, ಅಧ್ಯಾಯವನ್ನು ನೋಡಿ |
“ನಾವು ಗೆದ್ದುಕೊಂಡಿದ್ದ ಆ ದೇಶಗಳನ್ನು ನಮ್ಮದಾಗಿ ಮಾಡಿಕೊಂಡೆವು. ಇದರ ಒಂದು ಭಾಗವನ್ನು ನಾನು ರೂಬೇನ್ ಮತ್ತು ಗಾದ್ ಕುಲದವರಿಗೆ ಹಂಚಿಕೊಟ್ಟೆನು. ಅದು ಅರೋಯೇರ್‌ನಿಂದ ಹಿಡಿದು ಗಿಲ್ಯಾದ್ ಪ್ರದೇಶದವರೆಗೆ ಅಂದರೆ ಅರ್ನೋನ್ ಕಣಿವೆಯಲ್ಲಿರುವ ಅರೋಯೇರ್‌ನಿಂದ ಮೊದಲುಗೊಂಡು ಗಿಲ್ಯಾದ್ ಬೆಟ್ಟಪ್ರದೇಶದವರೆಗೂ ಅದರ ಎಲ್ಲಾ ಪಟ್ಟಣಗಳ ಸಮೇತವಾಗಿ ನಾನು ಕೊಟ್ಟೆನು. ಬೆಟ್ಟಪ್ರದೇಶವಾದ ಗಿಲ್ಯಾದಿನಲ್ಲಿ ಅರ್ಧಭಾಗ ಅವರಿಗೆ ದೊರೆಯಿತು.