ಯೆಹೋಶುವ 11:1 - ಪರಿಶುದ್ದ ಬೈಬಲ್1 ಹಾಚೋರಿನ ಅರಸನಾದ ಯಾಬೀನನು ನಡೆದ ಎಲ್ಲ ಸಂಗತಿಗಳ ಬಗ್ಗೆ ಕೇಳಿದನು. ಅದಕ್ಕಾಗಿ ಅವನು ಅನೇಕ ಅರಸರ ಸೈನ್ಯಗಳನ್ನು ಒಟ್ಟಿಗೆ ಸೇರಿಸುವ ನಿರ್ಧಾರವನ್ನು ಮಾಡಿದನು. ಮಾದೋನಿನ ಅರಸನಾದ ಯೋಬಾಬನಿಗೆ, ಶಿಮ್ರೋನಿನ ಅರಸನಿಗೆ, ಅಕ್ಷಾಫಿನ ಅರಸನಿಗೆ ಯಾಬೀನನು ಸಂದೇಶವನ್ನು ಕಳುಹಿಸಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಹಾಚೋರಿನ ಅರಸನಾದ ಯಾಬೀನನು ಇದನ್ನೆಲ್ಲಾ ಕೇಳಿ ಯೋಬಾಬನೆಂಬ ಮಾದೋನಿನ ಅರಸನು ಶಿಮ್ರೋನಿನ ಅರಸನನ್ನು ಅಕ್ಷಾಫಿನ ಅರಸನನ್ನು, ಉತ್ತರ ದಿಕ್ಕಿನ ಪರ್ವತ ಪ್ರದೇಶ, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1 ಹಾಚೋರಿನ ಅರಸ ಯಾಬೀನನು ಇದನ್ನೆಲ್ಲಾ ಕೇಳಿ ಯೋಬಾಬನೆಂಬ ಮದೋನಿನ ಅರಸನಿಗೂ ಶಿಮ್ರೋನಿನ ಅರಸನಿಗೂ ಹಾಗು ಅಕ್ಷಾಫಿನ ಅರಸನಿಗೂ ಕರೆಕಳಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 ಹಾಚೋರಿನ ಅರಸನಾದ ಯಾಬೀನನು ಇದನ್ನೆಲ್ಲಾ ಕೇಳಿ ಯೋಬಾಬನೆಂಬ ಮಾದೋನಿನ ಅರಸನು, ಶಿಮ್ರೋನಿನ ಅರಸನು, ಅಕ್ಷಾಫಿನ ಅರಸನು ಇವರನ್ನೂ ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ1 ಹಾಚೋರಿನ ಅರಸನಾದ ಯಾಬೀನನು ಇವುಗಳನ್ನು ಕೇಳಿದಾಗ, ಸಮೀಪ ರಾಜ್ಯಗಳ ಅರಸರಿಗೆ ಒಂದು ಸಂದೇಶವನ್ನು ಕಳುಹಿಸಿದನು: ಎಂದರೆ ಮಾದೋನಿನ ಅರಸನಾದ ಯೋಬಾಬನಿಗೂ ಶಿಮ್ರೋನಿನ ಅರಸನಿಗೂ ಅಕ್ಷಾಫಿನ ಅರಸನಿಗೂ ಅಧ್ಯಾಯವನ್ನು ನೋಡಿ |
ರಾಜನಾದ ಸೊಲೊಮೋನನು ತಾನು ನಿರ್ಮಿಸಿದ್ದ ಆಲಯದ ಮತ್ತು ಅರಮನೆಯ ಕೆಲಸಗಳನ್ನು ಮಾಡಲು ಗುಲಾಮರನ್ನು ಬಲಾತ್ಕರಿಸಿದನು. ರಾಜನಾದ ಸೊಲೊಮೋನನು ಇತರ ಅನೇಕ ಕಟ್ಟಡಗಳ ನಿರ್ಮಾಣಕ್ಕೆ ಬಿಟ್ಟಿಕೆಲಸದವರನ್ನು ಉಪಯೋಗಿಸಿಕೊಂಡನು. ಅವನು ಮಿಲ್ಲೋ ಕೋಟೆಯನ್ನು ನಿರ್ಮಿಸಿದನು; ಜೆರುಸಲೇಮಿನ ಸುತ್ತಲೂ ನಗರದ ಗೋಡೆಯನ್ನು ಕಟ್ಟಿಸಿದನು; ಅಲ್ಲದೆ ಅವನು ಹಾಚೋರ್, ಮೆಗಿದ್ದೋ ಮತ್ತು ಗೆಜೆರ್ ನಗರಗಳನ್ನು ಕಟ್ಟಿಸಿದನು.
ಅಶ್ಶೂರದ ರಾಜನಾದ ತಿಗ್ಲತ್ಪಿಲೆಸರನೆಂಬವನು ಇಸ್ರೇಲಿನ ವಿರುದ್ಧ ಯುದ್ಧಕ್ಕೆ ಬಂದನು. ಪೆಕಹನು ಇಸ್ರೇಲಿನ ರಾಜನಾಗಿದ್ದ ಸಂದರ್ಭದಲ್ಲಿ ಇದು ಸಂಭವಿಸಿತು. ತಿಗ್ಲತ್ಪಿಲೆಸರನು ಇಯ್ಯೋನ್, ಅಬೇಲ್ಬೇತ್ಮಾಕಾ, ಯಾನೋಹ, ಕದೆಷ್, ಹಾಚೋರ್, ಗಿಲ್ಯಾದ್, ಗಲಿಲಾಯ ಮತ್ತು ನಫ್ತಾಲಿಯ ಪ್ರಾಂತ್ಯಗಳನ್ನೆಲ್ಲ ಸ್ವಾಧೀನಪಡಿಸಿಕೊಂಡನು. ತಿಗ್ಲತ್ಪಿಲೆಸರನು ಈ ಸ್ಥಳಗಳಲ್ಲಿದ್ದ ಜನರನ್ನು ಸೆರೆಯಾಳುಗಳನ್ನಾಗಿಸಿ ಅಶ್ಶೂರಿಗೆ ಕೊಂಡೊಯ್ದನು.