ಯೆಹೋಶುವ 10:32 - ಪರಿಶುದ್ದ ಬೈಬಲ್32 ಇಸ್ರೇಲರ ಜನರು ಲಾಕೀಷ್ ಪಟ್ಟಣವನ್ನು ವಶಪಡಿಸಿಕೊಳ್ಳುವಂತೆ ಯೆಹೋವನು ಮಾಡಿದನು. ಅವರು ಎರಡನೆಯ ದಿನ ಪಟ್ಟಣವನ್ನು ಸ್ವಾಧೀನಪಡಿಸಿಕೊಂಡರು. ಇಸ್ರೇಲರು ಆ ಪಟ್ಟಣದಲ್ಲಿದ್ದವರನ್ನೆಲ್ಲಾ ಕೊಂದುಹಾಕಿದರು. ಅವರು ಲಿಬ್ನ ಪಟ್ಟಣಕ್ಕೆ ಮಾಡಿದಂತೆ ಇದಕ್ಕೂ ಮಾಡಿದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201932 ಯೆಹೋವನು ಅದನ್ನು ಇಸ್ರಾಯೇಲ್ಯರ ಕೈಗೆ ಒಪ್ಪಿಸಿದ್ದರಿಂದ, ಅವರು ಅದನ್ನು ಎರಡನೆಯ ದಿನದಲ್ಲಿ ಸ್ವಾಧೀನಮಾಡಿಕೊಂಡು ಅದನ್ನೂ ಅದರ ಜನರನ್ನೂ ಸಂಹರಿಸಿಬಿಟ್ಟರು. ಲಿಬ್ನದವರಿಗಾದ ಗತಿಯೇ ಇವರಿಗೂ ಆಯಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)32 ಸರ್ವೇಶ್ವರ ಇದನ್ನೂ ಇಸ್ರಯೇಲರ ಕೈಗೊಪ್ಪಿಸಿದರು. ಎಂದೇ ಅವರು ಅದನ್ನು ಎರಡನೆಯ ದಿನದಲ್ಲಿ ಸ್ವಾಧೀನಮಾಡಿಕೊಂಡು ಅದನ್ನೂ ಅದರ ಜನರನ್ನೂ ಸಂಹರಿಸಿಬಿಟ್ಟರು. ಲಿಬ್ನದವರಿಗಾದ ಗತಿಯೇ ಇವರಿಗೂ ಆಯಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)32 ಯೆಹೋವನು ಅದನ್ನು ಇಸ್ರಾಯೇಲ್ಯರ ಕೈಗೆ ಒಪ್ಪಿಸಿದದರಿಂದ ಅವರು ಅದನ್ನು ಎರಡನೆಯ ದಿನದಲ್ಲಿ ಸ್ವಾಧೀನಮಾಡಿಕೊಂಡು ಅದನ್ನೂ ಅದರ ಜನರನ್ನೂ ಸಂಹರಿಸಿಬಿಟ್ಟರು. ಲಿಬ್ನದವರಿಗಾದ ಗತಿಯೇ ಇವರಿಗೂ ಆಯಿತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ32 ಯೆಹೋವ ದೇವರು ಲಾಕೀಷನ್ನು ಇಸ್ರಾಯೇಲರ ಕೈಗೆ ಒಪ್ಪಿಸಿಕೊಟ್ಟರು. ಅವರು ಅದನ್ನು ಎರಡನೆಯ ದಿವಸದಲ್ಲಿ ಹಿಡಿದು ಲಿಬ್ನಕ್ಕೆ ಮಾಡಿದಂತೆ ಸರಿಯಾಗಿ ಅದನ್ನೂ ಅದರಲ್ಲಿರುವ ಎಲ್ಲರನ್ನು ಖಡ್ಗದಿಂದ ಹೊಡೆದರು. ಅಧ್ಯಾಯವನ್ನು ನೋಡಿ |
ಅಶ್ಶೂರದ ಅರಸನಿಗೆ ಒಂದು ಸಂದೇಶವು ಬಂದು ತಲುಪಿತು. ಅದರಲ್ಲಿ, “ಇಥಿಯೋಪ್ಯದ ಅರಸನಾದ ತಿರ್ಹಾಕನು ನಿನ್ನೊಂದಿಗೆ ಯುದ್ಧಮಾಡಲು ಬರುತ್ತಿದ್ದಾನೆ” ಎಂದು ಬರೆದಿತ್ತು. ಅದನ್ನು ಕೇಳಿ ಅಶ್ಶೂರದ ಅರಸನು ಲಾಕೀಷನ್ನು ಬಿಟ್ಟು ಲಿಬ್ನಕ್ಕೆ ಹೋದನು. ಸೇನಾದಂಡನಾಯಕನಿಗೆ ಈ ಸಮಾಚಾರ ಮುಟ್ಟಿದ ಕೂಡಲೇ ಅವನು ತನ್ನ ಅರಸನು ಯುದ್ಧಮಾಡುತ್ತಿದ್ದ ಲಿಬ್ನ ಪಟ್ಟಣಕ್ಕೆ ಹೋದನು. ಅಲ್ಲಿಂದ ಅವನು ಹಿಜ್ಕೀಯನ ಬಳಿಗೆ ತನ್ನ ದೂತರನ್ನು ಕಳುಹಿಸಿ,