Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 1:17 - ಪರಿಶುದ್ದ ಬೈಬಲ್‌

17 ನಾವು ಮೋಶೆಯ ಆಜ್ಞೆಗಳನ್ನೆಲ್ಲಾ ಪಾಲಿಸಿದೆವು. ಅದೇ ರೀತಿ ನಿನ್ನ ಆಜ್ಞೆಗಳನ್ನೆಲ್ಲಾ ಪಾಲಿಸುತ್ತೇವೆ. ನಿನ್ನ ದೇವರಾದ ಯೆಹೋವನು ಮೋಶೆಯ ಸಂಗಡ ಇದ್ದಂತೆ ನಿನ್ನ ಸಂಗಡವೂ ಇರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ನಾವು ಮೋಶೆಯ ಎಲ್ಲಾ ಮಾತುಗಳಿಗೆ ವಿಧೇಯರಾದ ಹಾಗೆ ನಿನ್ನ ಮಾತುಗಳಿಗೂ ವಿಧೇಯರಾಗುವೆವು. ನಿನ್ನ ದೇವರಾದ ಯೆಹೋವನು ಮೋಶೆಯ ಸಂಗಡ ಇದ್ದ ಹಾಗೆ ನಿನ್ನ ಸಂಗಡವೂ ಇರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಮೋಶೆಯ ಮಾತುಗಳನ್ನೆಲ್ಲ ಕೇಳಿದಂತೆ ನಿಮ್ಮ ಮಾತುಗಳನ್ನೂ ಕೇಳುತ್ತೇವೆ. ದೇವರಾದ ಸರ್ವೇಶ್ವರ ಮೋಶೆಯ ಸಂಗಡ ಇದ್ದ ಹಾಗೆ ನಿಮ್ಮ ಸಂಗಡವೂ ಇರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ನಾವು ಮೋಶೆಯ ಎಲ್ಲಾ ಮಾತುಗಳನ್ನು ಕೇಳಿದಂತೆ ನಿನ್ನ ಮಾತುಗಳನ್ನೂ ಕೇಳುವೆವು; ನಿನ್ನ ದೇವರಾದ ಯೆಹೋವನು ಮೋಶೆಯ ಸಂಗಡ ಇದ್ದಹಾಗೆ ನಿನ್ನ ಸಂಗಡಲೂ ಇರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ನಾವು ಮೋಶೆಯ ಎಲ್ಲಾ ಮಾತು ಕೇಳಿದ ಹಾಗೆಯೇ ನಿನ್ನ ಮಾತು ಕೇಳುವೆವು. ನಿನ್ನ ದೇವರಾದ ಯೆಹೋವ ದೇವರು ಮೋಶೆಯ ಸಂಗಡ ಇದ್ದ ಹಾಗೆ ನಿನ್ನ ಸಂಗಡವೂ ಇರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 1:17
19 ತಿಳಿವುಗಳ ಹೋಲಿಕೆ  

ನಾನು ಮೋಶೆಯ ಸಂಗಡ ಇದ್ದಂತೆ ನಿನ್ನ ಸಂಗಡವೂ ಇರುತ್ತೇನೆ. ನಿನ್ನ ಜೀವಮಾನದಲ್ಲೆಲ್ಲಾ ಯಾವನೂ ನಿನ್ನನ್ನು ತಡೆಯಲಾರನು. ನಾನು ನಿನ್ನನ್ನು ಕೈಬಿಡುವುದಿಲ್ಲ; ತೊರೆದುಬಿಡುವುದಿಲ್ಲ” ಎಂದು ಹೇಳಿದನು.


ನನ್ನ ಒಡೆಯನಾದ ರಾಜನೇ, ನಿನಗೆ ಯಾವಾಗಲೂ ಸಹಾಯಮಾಡಿದ ಯೆಹೋವನು ಸೊಲೊಮೋನನಿಗೂ ಸಹಾಯ ಮಾಡಲಿ. ನಿನ್ನ ರಾಜ್ಯಕ್ಕಿಂತಲೂ ಸೊಲೊಮೋನನ ರಾಜ್ಯವು ಹೆಚ್ಚು ಬಲಿಷ್ಠವಾಗಲಿ.” ಎಂದು ಉತ್ತರಿಸಿದನು.


ನೆನಪಿಡು, ನೀನು ಸ್ಥಿರಚಿತ್ತನಾಗಿರಬೇಕೆಂತಲೂ ಧೈರ್ಯಶಾಲಿಯಾಗಿರಬೇಕೆಂತಲೂ ನಾನು ನಿನಗೆ ಆಜ್ಞಾಪಿಸುತ್ತೇನೆ. ಆದ್ದರಿಂದ ಹೆದರಬೇಡ, ಯಾಕೆಂದರೆ ನೀನು ಹೋಗುವಲ್ಲೆಲ್ಲಾ ನಿನ್ನ ದೇವರಾದ ಯೆಹೋವನೇ ನಿನ್ನ ಸಂಗಡ ಇರುವನು” ಎಂದು ಹೇಳಿದನು.


ಕೆಲವರು ಯೇಸುವಿನ ಮುಂದೆ ನಡೆದು ಹೋಗುತ್ತಿದ್ದರು. ಕೆಲವರು ಯೇಸುವಿನ ಹಿಂದೆ ನಡೆದು ಬರುತ್ತಿದ್ದರು. ಜನರೆಲ್ಲರೂ ಹೀಗೆ ಆರ್ಭಟಿಸಿದರು: “ದಾವೀದನ ಕುಮಾರನನ್ನು ಕೊಂಡಾಡಿರಿ! ‘ಪ್ರಭುವಿನ ಹೆಸರಿನಲ್ಲಿ ಬರುವವನನ್ನು ದೇವರು ಆಶೀರ್ವದಿಸಲಿ!’ ಪರಲೋಕದ ದೇವರನ್ನು ಕೊಂಡಾಡಿರಿ!”


ಯಾಕೆಂದರೆ ಯೆಹೋವನು ತಾನು ಅಭಿಷೇಕಿಸಿದ ರಾಜನನ್ನು ರಕ್ಷಿಸಿದನು! ನಾವು ಸಹಾಯಕ್ಕಾಗಿ ಮೊರೆಯಿಟ್ಟಾಗ ಆತನು ಸದುತ್ತರವನ್ನು ದಯಪಾಲಿಸಿದನು.


ಆತನು ನಿನ್ನ ಬಯಕೆಗಳನ್ನು ಈಡೇರಿಸಲಿ. ನಿನ್ನ ಆಲೋಚನೆಗಳನ್ನೆಲ್ಲ ನೆರವೇರಿಸಲಿ.


ಇಕ್ಕಟ್ಟಿನಲ್ಲಿ ಯೆಹೋವನು ನಿನ್ನ ಮೊರೆಯನ್ನು ಕೇಳಲಿ. ಯಾಕೋಬನ ದೇವರು ನಿನ್ನ ಹೆಸರನ್ನು ಪ್ರಖ್ಯಾತಿಪಡಿಸಲಿ.


ದಾವೀದನು ತನ್ನ ಮಗನಾದ ಸೊಲೊಮೋನನಿಗೆ, “ಧೈರ್ಯವಾಗಿದ್ದು ಬಲಗೊಳ್ಳು ಮತ್ತು ಈ ಕಾರ್ಯವನ್ನು ಮಾಡಿ ಮುಗಿಸು. ನನ್ನ ದೇವರಾದ ಯೆಹೋವನು ನಿನ್ನ ಸಂಗಡ ಇರುವದರಿಂದ ನೀನು ಭಯಪಡುವ ಕಾರಣವೇ ಇಲ್ಲ. ಆತನು ನಿನ್ನೊಂದಿಗಿದ್ದು ಆಲಯವನ್ನು ಸಂಪೂರ್ಣ ಮಾಡುವಂತೆ ನಿನ್ನನ್ನು ನಡೆಸುತ್ತಾನೆ. ನೀನು ಯೆಹೋವನ ಆಲಯವನ್ನು ಕಟ್ಟುವೆ.


ನನ್ನ ತಂದೆಯು ನಿನಗೆ ಕೇಡುಮಾಡಬೇಕೆಂದಿದ್ದರೆ, ಅದನ್ನು ನಾನು ನಿನಗೆ ತಿಳಿಸಿ, ನೀನು ಸುರಕ್ಷಿತವಾಗಿರಲು ಅವಕಾಶ ಮಾಡಿಕೊಡುತ್ತೇನೆ. ಈ ಕಾರ್ಯವನ್ನು ನಾನು ಮಾಡದೆ ಹೋದರೆ ಯೆಹೋವನು ನನ್ನನ್ನು ದಂಡಿಸಲಿ. ಯೆಹೋವನು ನನ್ನ ತಂದೆಯ ಜೊತೆಯಲ್ಲಿದ್ದಂತೆ ನಿನ್ನ ಜೊತೆಯೂ ಇರಲಿ.


ಆಗ ಅವರು ಯೆಹೋಶುವನಿಗೆ, “ನೀನು ಆಜ್ಞಾಪಿಸಿದ್ದನ್ನೆಲ್ಲಾ ನಾವು ಮಾಡುತ್ತೇವೆ; ನೀನು ನಮ್ಮನ್ನು ಕಳಿಸಿದ್ದಲ್ಲಿಗೆಲ್ಲ ಹೋಗುತ್ತೇವೆ.


ಯಾರಾದರೂ ನಿನ್ನ ಆಜ್ಞೆಗಳನ್ನು ಉಲ್ಲಂಘಿಸಿದರೆ ಅಥವಾ ಯಾರಾದರೂ ನಿನ್ನನ್ನು ವಿರೋಧಿಸಿದರೆ ಅವನನ್ನು ಕೊಲ್ಲಲಾಗುವುದು. ನೀನು ಮಾತ್ರ ಸ್ಥಿರಚಿತ್ತನಾಗಿರು; ಧೈರ್ಯಶಾಲಿಯಾಗಿರು” ಎಂದು ಹೇಳಿದರು.


ಅದಕ್ಕೆ ಯೆಹೋವನು, “ನೂನನ ಮಗನಾದ ಯೆಹೋಶುವನು ಹೊಸ ನಾಯಕನಾಗಿರುವನು. ಅವನು ಧೈರ್ಯವಂತನು. ಅವನನ್ನು ಹೊಸ ನಾಯಕನನ್ನಾಗಿ ಮಾಡಲು ಅವನ ಮೇಲೆ ನಿನ್ನ ಕೈಯನ್ನು ಇಡು.


“ಇಸ್ರೇಲರ ಇಡೀ ಸಮುದಾಯವು ವಿಧೇಯರಾಗುವಂತೆ ನಿನ್ನ ಅಧಿಕಾರಗಳಲ್ಲಿ ಸ್ವಲ್ಪವನ್ನು ಅವನಿಗೆ ಕೊಡು.


ಮೋಶೆಯು ಯೆಹೋಶುವನ ಮೇಲೆ ತನ್ನ ಕೈಗಳನ್ನಿಟ್ಟು ಅವನನ್ನು ನಾಯಕನನ್ನಾಗಿ ನೇಮಿಸಿದನು. ಆಗ ನೂನನ ಮಗನಾದ ಯೆಹೋಶುವನು ಜ್ಞಾನದ ಆತ್ಮನಿಂದ ತುಂಬಲ್ಪಟ್ಟವನಾದನು. ಇಸ್ರೇಲಿನ ಜನರು ಯೆಹೋಶುವನಿಗೆ ವಿಧೇಯರಾದರು. ಯೆಹೋವನು ಮೋಶೆಗೆ ಆಜ್ಞಾಪಿಸಿದ್ದನ್ನೆಲ್ಲಾ ಇಸ್ರೇಲರು ಮಾಡಿದರು.


ಯೆಹೋವನು ಆ ದಿನ ಇಸ್ರೇಲಿನ ಎಲ್ಲಾ ಜನರ ದೃಷ್ಟಿಯಲ್ಲಿ ಯೆಹೋಶುವನನ್ನು ಘನವಂತನನ್ನಾಗಿ ಮಾಡಿದನು. ಆ ಹೊತ್ತಿನಿಂದ ಜನರು ಯೆಹೋಶುವನನ್ನು ಗೌರವಿಸತೊಡಗಿದರು. ಅವರು ಮೋಶೆಯನ್ನು ಗೌರವಿಸಿದಂತೆ ಯೆಹೋಶುವನನ್ನು ಅವನ ಜೀವಮಾನವೆಲ್ಲಾ ಗೌರವಿಸಿದರು.


ಯೆಹೋವನು ನನ್ನನ್ನು ಸಿಂಹದಿಂದಲೂ ಕರಡಿಯಿಂದಲೂ ರಕ್ಷಿಸಿದನು. ಯೆಹೋವನು ಈ ಗೊಲ್ಯಾತನಿಂದಲೂ ನನ್ನನ್ನು ರಕ್ಷಿಸುತ್ತಾನೆ” ಎಂದು ಹೇಳಿದನು. ಸೌಲನು ದಾವೀದನಿಗೆ, “ಹೋಗು, ಯೆಹೋವನು ನಿನ್ನೊಂದಿಗಿರಲಿ” ಎಂದು ಹೇಳಿದನು.


ರಾಜನಾದ ನನ್ನ ಒಡೆಯನ ಮಾತುಗಳು ನನಗೆ ವಿಶ್ರಾಂತಿಯನ್ನು ಕೊಡುತ್ತವೆ ಎಂದು ನನಗೆ ತಿಳಿದಿರುವುದರಿಂದ ನಿನ್ನ ಬಳಿಗೆ ಬಂದಿರುವೆನು. ಏಕೆಂದರೆ ನೀನು ದೇವದೂತನಂತಿರುವೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದು ನಿನಗೆ ತಿಳಿದಿದೆ. ನಿನ್ನ ದೇವರಾದ ಯೆಹೋವನು ನಿನ್ನೊಂದಿಗಿರುವನು” ಎಂದು ಹೇಳಿದಳು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು