ಯೆಹೋಶುವ 1:1 - ಪರಿಶುದ್ದ ಬೈಬಲ್1 ಮೋಶೆಯು ಯೆಹೋವನ ಸೇವಕನಾಗಿದ್ದನು. ನೂನನ ಮಗನಾದ ಯೆಹೋಶುವನು ಮೋಶೆಯ ಸಹಾಯಕನಾಗಿದ್ದನು. ಮೋಶೆಯ ಮರಣಾನಂತರ ಯೆಹೋವನು ಯೆಹೋಶುವನೊಡನೆ ಮಾತನಾಡಿ, ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಯೆಹೋವನ ಸೇವಕನಾದ ಮೋಶೆಯ ಮರಣದ ನಂತರ ಯೆಹೋವನು ಮೋಶೆಯ ಸೇವಕನಾದ ನೂನನ ಮಗನಾದ ಯೆಹೋಶುವನಿಗೆ ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1 ಸರ್ವೇಶ್ವರಸ್ವಾಮಿ, ತಮ್ಮ ದಾಸ ಮೋಶೆ ಮರಣಹೊಂದಿದ ಮೇಲೆ ಅವನ ಶಿಷ್ಯನಾದ ನೂನನ ಮಗ ಯೆಹೋಶುವನಿಗೆ ಹೀಗೆಂದು ಆಜ್ಞಾಪಿಸಿದರು: ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 ಯೆಹೋವನ ಸೇವಕನಾದ ಮೋಶೆಯು ಸತ್ತ ಮೇಲೆ ಯೆಹೋವನು ಅವನ ಶಿಷ್ಯನಾದ ನೂನನ ಮಗ ಯೆಹೋಶುವನಿಗೆ - ನನ್ನ ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ1 ಯೆಹೋವ ದೇವರ ಸೇವಕನಾದ ಮೋಶೆಯ ಮರಣದ ತರುವಾಯ, ನೂನನ ಮಗ ಮತ್ತು ಮೋಶೆಯ ಸೇವಕ ಆಗಿರುವ ಯೆಹೋಶುವನಿಗೆ ಯೆಹೋವ ದೇವರು: ಅಧ್ಯಾಯವನ್ನು ನೋಡಿ |
ತರುವಾಯ ಇತರ ಜನಾಂಗಗಳ ನಾಡುಗಳನ್ನು ವಶಪಡಿಸಿಕೊಳ್ಳುವುದಕ್ಕಾಗಿ ಯೆಹೋಶುವನು ನಮ್ಮ ಪಿತೃಗಳನ್ನು ಮುನ್ನಡೆಸಿದನು. ನಮ್ಮ ಜನರು ಆ ದೇಶದೊಳಗೆ ಹೋದಾಗ, ದೇವರು ಇತರ ಜನರನ್ನು ಅಲ್ಲಿಂದ ಹೊರಡಿಸಿಬಿಟ್ಟನು. ನಮ್ಮ ಜನರು ಆ ಹೊಸ ದೇಶದೊಳಗೆ ಹೋದಾಗ ಈ ಗುಡಾರವನ್ನು ತಮ್ಮೊಂದಿಗೆ ತೆಗೆದುಕೊಂಡು ಹೋದರು. ನಮ್ಮ ಜನರು ಈ ಗುಡಾರವನ್ನು ತಮ್ಮ ಪಿತೃಗಳಿಂದ ಸ್ವೀಕರಿಸಿಕೊಂಡು ದಾವೀದನ ಕಾಲದವರೆಗೂ ಅದನ್ನು ಇಟ್ಟುಕೊಂಡಿದ್ದರು.
ಯೆಹೋವನು ನಿಮ್ಮ ವಿಶ್ರಾಂತಿಗಾಗಿ ಒಂದು ಸ್ಥಳವನ್ನು ಕೊಟ್ಟಿದ್ದಾನೆ. ಯೆಹೋವನು ನಿಮ್ಮ ಸಹೋದರರಿಗಾಗಿಯೂ ಒಂದು ಸ್ಥಳವನ್ನು ಕೊಡುತ್ತಾನೆ. ಆದರೆ ನಿಮ್ಮ ದೇವರಾದ ಯೆಹೋವನು ಅವರಿಗೆ ಕೊಡುವ ದೇಶವನ್ನು ಅವರು ಪಡೆದುಕೊಳ್ಳುವವರೆಗೆ ನೀವು ನಿಮ್ಮ ಸಹೋದರರಿಗೆ ಸಹಾಯ ಮಾಡಬೇಕು. ಆಮೇಲೆ ನೀವು ಜೋರ್ಡನ್ ನದಿಯ ಪೂರ್ವದಿಕ್ಕಿನಲ್ಲಿರುವ ನಿಮ್ಮ ದೇಶಕ್ಕೆ ಹೋಗಬಹುದು. ಯೆಹೋವನ ಸೇವಕನಾದ ಮೋಶೆಯು ನಿಮಗೆ ಕೊಟ್ಟ ದೇಶವು ಅದೇ ಆಗಿದೆ” ಎಂದನು.