ಯೆಹೆಜ್ಕೇಲನು 8:1 - ಪರಿಶುದ್ದ ಬೈಬಲ್1 ಒಂದು ದಿವಸ ನಾನು ನನ್ನ ಮನೆಯಲ್ಲಿ ಕುಳಿತುಕೊಂಡಿದ್ದೆನು. ಯೆಹೂದದ ನಾಯಕರು ನನ್ನ ಮುಂದೆ ಕುಳಿತಿದ್ದರು. ಇದು ಸೆರೆಹಿಡಿದ ಆರನೇ ವರ್ಷದ, ಆರನೆಯ ತಿಂಗಳಿನ, ಐದನೇ ದಿವಸವಾಗಿತ್ತು. ಫಕ್ಕನೆ ನನ್ನ ಒಡೆಯನಾದ ಯೆಹೋವನ ಆತ್ಮನಿಂದ ನಾನು ಪರವಶನಾದೆನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಯೆಹೋಯಾಖೀನನು ಸೆರೆಯಾದ ಆರನೆಯ ವರ್ಷದ, ಆರನೆಯ ತಿಂಗಳಿನ, ಐದನೆಯ ದಿನದಲ್ಲಿ ನಾನೂ ಮತ್ತು ಯೆಹೂದದ ಹಿರಿಯರೂ ನನ್ನ ಮನೆಯೊಳಗೆ ಎದುರಾಗಿ ಕುಳಿತಿರಲು ಕರ್ತನಾದ ಯೆಹೋವನ ಹಸ್ತಸ್ಪರ್ಶದಿಂದ ನಾನು ಪರವಶನಾದೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1 ಅದು ಆರನೆಯ ವರ್ಷದ ಆರನೆಯ ತಿಂಗಳಿನ ಐದನೆಯ ದಿನ. ನಾನೂ ಯೆಹೂದದ ಹಿರಿಯರೂ ನನ್ನ ಮನೆಯೊಳಗೆ ಎದುರುಬದುರಾಗಿ ಕುಳಿತಿದ್ದೆವು. ಸರ್ವೇಶ್ವರನಾದ ದೇವರ ಹಸ್ತಸ್ಪರ್ಶದಿಂದ ನಾನು ಪರವಶನಾದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 [ಯೆಹೋಯಾಖೀನನು ಸೆರೆಯಾದ] ಆರನೆಯ ವರುಷದ ಆರನೆಯ ತಿಂಗಳಿನ ಐದನೆಯ ದಿನದಲ್ಲಿ ನಾನೂ ಯೆಹೂದದ ಹಿರಿಯರೂ ನನ್ನ ಮನೆಯೊಳಗೆ ಎದುರುಬದುರಾಗಿ ಕೂತಿರಲು ಕರ್ತನಾದ ಯೆಹೋವನ ಹಸ್ತಸ್ಪರ್ಶದಿಂದ ನಾನು ಪರವಶನಾದೆನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ1 ಆರನೆಯ ವರ್ಷದ ಆರನೆಯ ತಿಂಗಳಿನ, ಐದನೆಯ ದಿನದಲ್ಲಿ ನಾನೂ, ಯೆಹೂದದ ಹಿರಿಯರೂ ನನ್ನ ಮನೆಯಲ್ಲಿ ಕುಳಿತುಕೊಂಡಿರುವಾಗ, ಅಲ್ಲಿ ಸಾರ್ವಭೌಮ ಯೆಹೋವ ದೇವರ ಹಸ್ತ ನನ್ನ ಮೇಲೆ ಸ್ಪರ್ಶವಾಯಿತು. ಅಧ್ಯಾಯವನ್ನು ನೋಡಿ |
ಆದರೆ ನಾನು ಅವರಿಗೆ ಉತ್ತರಕೊಡುವೆನು. ಅವರಿಗೆ ನೀನು ಹೀಗೆ ಹೇಳಬೇಕು: ‘ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ: ಇಸ್ರೇಲರಲ್ಲಿ ಯಾರಾದರೂ ಪ್ರವಾದಿಯ ಬಳಿಗೆ ಬಂದು ನನ್ನ ಸಲಹೆಯನ್ನು ಕೇಳಿದರೆ, ನಾನೇ ಆ ಮನುಷ್ಯನಿಗೆ ಉತ್ತರ ಕೊಡುವೆನು. ಅವನ ಬಳಿಯಲ್ಲಿ ಹೊಲಸು ವಿಗ್ರಹಗಳಿದ್ದರೂ, ಅವನನ್ನು ಪಾಪದಲ್ಲಿ ಬೀಳುವಂತೆ ಮಾಡಿದ ವಸ್ತುಗಳನ್ನು ಅವನು ಇಟ್ಟುಕೊಂಡಿದ್ದರೂ, ಅವನು ಆ ವಿಗ್ರಹಗಳನ್ನು ಇನ್ನೂ ಪೂಜೆ ಮಾಡುತ್ತಿದ್ದರೂ ನಾನು ಅವನೊಂದಿಗೆ ಮಾತನಾಡುವೆನು. ಅವನ ವಿಗ್ರಹಾರಾಧನೆಗೆ ತಕ್ಕ ಉತ್ತರವನ್ನೇ ಕೊಡುವೆನು.
ರಾಜನು ಎಲೀಷನ ಬಳಿಗೆ ಒಬ್ಬ ಸಂದೇಶಕನನ್ನು ಕಳುಹಿಸಿದನು. ಎಲೀಷನು ತನ್ನ ಮನೆಯಲ್ಲಿ ಕುಳಿತಿದ್ದನು; ಹಿರಿಯರು ಅವನೊಂದಿಗೆ ಕುಳಿತಿದ್ದರು. ಸಂದೇಶಕನು ಬರುವುದಕ್ಕೆ ಮುಂಚೆಯೇ ಎಲೀಷನು ಹಿರಿಯರಿಗೆ, “ನೋಡಿ, ನನ್ನ ತಲೆಯನ್ನು ಕತ್ತರಿಸಿಹಾಕಲು ಕೊಲೆಗಾರನ (ಇಸ್ರೇಲಿನ ರಾಜ) ಮಗ ಜನರನ್ನು ಕಳುಹಿಸಿದ್ದಾನೆ! ಆ ಸಂದೇಶಕನು ಬಂದಾಗ ಬಾಗಿಲನ್ನು ಮುಚ್ಚಿಬಿಡಿ! ಅವನು ಒಳಗೆ ಪ್ರವೇಶಿಸದಂತೆ ಬಾಗಿಲನ್ನು ಹಿಡಿದುಕೊಳ್ಳಿ! ಅವನ ಹಿಂದೆ ಬರುತ್ತಿರುವ ಅವನ ಒಡೆಯನ ಕಾಲ ಸಪ್ಪಳವು ನನಗೆ ಕೇಳಿಸುತ್ತಿದೆ!” ಎಂದು ಹೇಳಿದನು.