ಯೆಹೆಜ್ಕೇಲನು 45:15 - ಪರಿಶುದ್ದ ಬೈಬಲ್15 ಇಸ್ರೇಲಿನ ನೀರಾವರಿಯ ಹುಲ್ಲುಗಾವಲಿನ ಇನ್ನೂರು ಕುರಿಗಳಲ್ಲಿ ಒಂದು ಕುರಿಯನ್ನು ಕೊಡಬೇಕು. “ಧಾನ್ಯನೈವೇದ್ಯಗಳಿಗೂ, ಸರ್ವಾಂಗಹೋಮಗಳಿಗೂ ಸಮಾಧಾನಯಜ್ಞಗಳಿಗೂ ಈ ಕಾಣಿಕೆಗಳನ್ನು ಕೊಡಬೇಕು. ಈ ಕಾಣಿಕೆಗಳು ಜನರನ್ನು ಶುದ್ಧಮಾಡುವವು.” ನನ್ನ ಒಡೆಯನಾದ ಯೆಹೋವನ ನುಡಿಗಳಿವು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201915 ಇನ್ನೂರು ಕುರಿಗಳಲ್ಲಿ ಇಸ್ರಾಯೇಲಿನ ನೀರಾವರಿಯ ಹುಲ್ಗಾವಲಿನ ಒಂದು ಕುರಿ; ಇವುಗಳನ್ನು ದೇಶದ ಸಕಲ ಜನರು ಇಸ್ರಾಯೇಲಿನ ಅರಸನಿಗೆ ಸರ್ವಾಂಗಹೋಮ ಮತ್ತು ಸಮಾಧಾನಬಲಿಯಾಗಿ ಒಪ್ಪಿಸಬೇಕು” ಇದು ಕರ್ತನಾದ ಯೆಹೋವನ ನುಡಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)15 ಇನ್ನೂರು ಕುರಿಗಳಲ್ಲಿ ಇಸ್ರಯೇಲಿನ ನೀರಾವರಿಯ ಹುಲ್ಲುಗಾವಲಿನ ಒಂದು ಕುರಿ; ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)15 ಇನ್ನೂರು ಕುರಿಗಳಲ್ಲಿ ಇಸ್ರಾಯೇಲಿನ ನೀರಾವರಿಯ ಹುಲ್ಗಾವಲಿನ ಒಂದು ಕುರಿ; ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ15 ಇಸ್ರಾಯೇಲಿನ ನೀರಿರುವ ಹುಲ್ಲುಗಾವಲುಗಳಿಂದ ಇನ್ನೂರು ಮಂದಿಯ ಹಿಂಡಿನಿಂದ ಒಂದು ಕುರಿಯನ್ನು ತೆಗೆದುಕೊಳ್ಳಬೇಕು. ಇವುಗಳನ್ನು ಜನರಿಗಾಗಿ ಪ್ರಾಯಶ್ಚಿತ್ತವನ್ನು ಮಾಡಲು ಧಾನ್ಯಯಜ್ಞಗಳು, ದಹನಬಲಿಗಳು ಮತ್ತು ಸಮಾಧಾನದ ಅರ್ಪಣೆಗಳಿಗಾಗಿ ಬಳಸಲಾಗುವುದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. ಅಧ್ಯಾಯವನ್ನು ನೋಡಿ |
ನಿಮ್ಮಲ್ಲಿ ಕೆಲವರಲ್ಲಿ ಯಜ್ಞಕ್ಕೆ ಬೇಕಾಗಿರುವ ಒಳ್ಳೆಯ ಗಂಡು ಪಶುಗಳು ಇದ್ದಾಗ್ಯೂ ಅವರು ನನಗೆ ಅವುಗಳನ್ನು ಸಮರ್ಪಿಸುವದಿಲ್ಲ. ಕೆಲವರು ಕಳಂಕವಿಲ್ಲದ ಪಶುಗಳನ್ನು ನನಗೆ ತರುತ್ತಾರೆ. ಅವರು ಅಂಥಾ ಆರೋಗ್ಯಕರ ಪಶುಗಳನ್ನು ನನಗೆ ಸಮರ್ಪಿಸಲು ವಾಗ್ದಾನ ಮಾಡುವರು. ಆದರೆ ಗುಪ್ತವಾಗಿ ಅವರು ಆ ಪಶುವನ್ನು ಬದಲಿಸಿ ನನಗೆ ರೋಗಿಯಾದ ಪಶುಗಳನ್ನು ಕೊಡುತ್ತಾರೆ. ಅವರಿಗೆ ದುರ್ದೆಶೆ ಸಂಭವಿಸಲಿರುವದು. ನಾನು ದೊಡ್ಡ ಅರಸನು. ನೀವು ನನ್ನನ್ನು ಗೌರವಿಸಬೇಕು. ಭೂಲೋಕದ ಸರ್ವಜನರು ನನ್ನನ್ನು ಸನ್ಮಾನಿಸುವರು.” ಇವು ಸರ್ವಶಕ್ತನಾದ ಯೆಹೋವನ ನುಡಿಗಳು.
ನೀವು ಕುರುಡು ಪ್ರಾಣಿಗಳನ್ನು ಯಜ್ಞಕ್ಕಾಗಿ ತರುತ್ತೀರಿ. ಅದು ತಪ್ಪಲ್ಲವೇ? ಕುಂಟು, ರೋಗಪೀಡಿತ ಪಶುಗಳನ್ನು ಯಜ್ಞಾರ್ಪಣೆಗಾಗಿ ತರುತ್ತೀರಿ. ಅದು ತಪ್ಪಲ್ಲವೇ? ನಿಮ್ಮ ರಾಜ್ಯಪಾಲನಿಗೆ ನೀವು ಅಂಥಾ ಪ್ರಾಣಿಗಳನ್ನು ಕಾಣಿಕೆಯಾಗಿ ಕೊಟ್ಟರೆ ಅವನು ಅದನ್ನು ಸ್ವೀಕರಿಸುವನೋ? ಇಲ್ಲ, ಅಂಥಾ ಕಾಣಿಕೆಯನ್ನು ಅವನು ಸ್ವೀಕರಿಸುವದೇ ಇಲ್ಲ” ಸರ್ವಶಕ್ತನಾದ ಯೆಹೋವನು ಇದನ್ನು ಹೇಳುತ್ತಿದ್ದಾನೆ.
“ದಾನಿಯೇಲನೇ, ನಿಮ್ಮ ಜನರಿಗೆ ಮತ್ತು ನಿಮ್ಮ ಪವಿತ್ರ ನಗರಕ್ಕೆ ದೇವರು ಎಪ್ಪತ್ತು ವಾರಗಳ ಅವಧಿಯನ್ನು ಗೊತ್ತುಮಾಡಿದ್ದಾನೆ. ಅಧರ್ಮವನ್ನು ಕೊನೆಗಾಣಿಸುವದು, ಪಾಪಗಳನ್ನು ತಡೆಯುವುದು, ಅಪರಾಧಗಳನ್ನು ನಿವಾರಿಸುವುದು, ಜನರನ್ನು ಪರಿಶುದ್ಧಗೊಳಿಸುವುದು, ಎಂದೆಂದಿಗೂ ಉಳಿಯುವ ಧರ್ಮವನ್ನು ಸ್ಥಾಪಿಸುವುದು, ದರ್ಶನಗಳಿಗೆ ಮತ್ತು ಪ್ರವಾದಿಯ ನುಡಿಗಳಿಗೆ ಮುದ್ರೆಹಾಕಿ ಕಾರ್ಯರೂಪಕ್ಕೆ ತರುವುದು, ಪವಿತ್ರ ಸ್ಥಳವನ್ನು ಪ್ರತಿಷ್ಠಿಸುವುದು, ಇವೆಲ್ಲವುಗಳಿಗಾಗಿ ಈ ಎಪ್ಪತ್ತು ವಾರಗಳ ಅವಧಿಯನ್ನು ಗೊತ್ತು ಮಾಡಲಾಗಿದೆ.
ಆದರೆ ವಿಶೇಷವಾದ ಹಬ್ಬದ ಆಚರಣೆಗಳಿಗಾಗಿ ಅಧಿಪತಿಯು ಕಾಣಿಕೆಗಳನ್ನು ಕೊಡಲೇಬೇಕು. ಅಧಿಪತಿಯು ಪಾಪಪರಿಹಾರಕಯಜ್ಞಗಳನ್ನೂ ಧಾನ್ಯಾರ್ಪಣೆಗಳನ್ನೂ ಪಾನದ್ರವ್ಯಾರ್ಪಣೆಗಳನ್ನೂ ಕೊಡಬೇಕು. ಈ ಕಾಣಿಕೆಗಳನ್ನು ಪ್ರತಿಯೊಂದು ಹಬ್ಬದ ದಿನದಲ್ಲಿಯೂ ಅಮಾವಾಸ್ಯೆಯಲ್ಲಿಯೂ ಸಬ್ಬತ್ ದಿನದಲ್ಲಿಯೂ ಇಸ್ರೇಲ್ ಜನಾಂಗದ ಎಲ್ಲಾ ವಿಶೇಷ ಹಬ್ಬಗಳಲ್ಲಿಯೂ ಅರ್ಪಿಸಬೇಕು. ಇಸ್ರೇಲ್ ಸಂತತಿಯ ಜನರನ್ನು ಶುದ್ಧೀಕರಿಸುವುದಕ್ಕಾಗಿ ಅಧಿಪತಿಯು ಈ ಕಾಣಿಕೆಗಳನ್ನು ಕೊಡಬೇಕು.”