ಯೆಹೆಜ್ಕೇಲನು 44:9 - ಪರಿಶುದ್ದ ಬೈಬಲ್9 ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ಇಸ್ರೇಲರೊಂದಿಗೆ ವಾಸವಾಗಿರುವ ಅನ್ಯಜನರೊಳಗೆ ತನುಮನಗಳಲ್ಲಿ ಸುನ್ನತಿಯಾಗಿಲ್ಲದವನು ನನ್ನ ಪವಿತ್ರಾಲಯವನ್ನು ಪ್ರವೇಶಿಸಕೂಡದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಇಸ್ರಾಯೇಲರಲ್ಲಿ ಸೇರಿಕೊಂಡಿರುವ ಮ್ಲೇಚ್ಛರೊಳಗೆ ಹೃದಯದಲ್ಲಿಯೂ, ಶರೀರದಲ್ಲಿಯೂ ಸುನ್ನತಿಹೀನನಾದ ಯಾರೂ ನನ್ನ ಪವಿತ್ರಾಲಯವನ್ನು ಪ್ರವೇಶಿಸಬಾರದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 “ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ಇಸ್ರಯೇಲರಲ್ಲಿ ಸೇರಿಕೊಂಡಿರುವ ಮ್ಲೇಚ್ಛರೊಳಗೆ ತನುಮನಗಳಲ್ಲಿ ಸುನ್ನತಿಹೀನನಾದ ಯಾವನೂ ನನ್ನ ಪವಿತ್ರಾಲಯವನ್ನು ಪ್ರವೇಶಿಸಕೂಡದು.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಇಸ್ರಾಯೇಲ್ಯರಲ್ಲಿ ಸೇರಿಕೊಂಡಿರುವ ಮ್ಲೇಚ್ಫರೊಳಗೆ ತನುಮನಗಳಲ್ಲಿ ಸುನ್ನತಿಹೀನನಾದ ಯಾವನೂ ನನ್ನ ಪವಿತ್ರಾಲಯವನ್ನು ಪ್ರವೇಶಿಸಕೂಡದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಹೃದಯದಲ್ಲಿಯೂ ಶರೀರದಲ್ಲಿಯೂ ಸುನ್ನತಿಯಿಲ್ಲದ ಯಾವೊಬ್ಬ ಪರಕೀಯನೂ ಇಸ್ರಾಯೇಲರೊಳಗಿರುವ ಯಾವೊಬ್ಬ ಅಪರಿಚಿತನೂ ನನ್ನ ಪರಿಶುದ್ಧ ಸ್ಥಳದೊಳಗೆ ಪ್ರವೇಶಿಸಬಾರದು. ಅಧ್ಯಾಯವನ್ನು ನೋಡಿ |
ನೀವು ನನ್ನ ಆಲಯದೊಳಗೆ ಅನ್ಯರನ್ನು ತಂದಿರುತ್ತೀರಿ. ಅವರು ಸುನ್ನತಿಯಾದವರಾಗಿರಲಿಲ್ಲ. ಅವರು ಸಂಪೂರ್ಣವಾಗಿ ನನ್ನನ್ನು ನಂಬಿರಲಿಲ್ಲ. ಈ ರೀತಿಯಾಗಿ ನೀವು ನನ್ನ ಆಲಯವನ್ನು ಹೊಲೆ ಮಾಡಿರುತ್ತೀರಿ. ನೀವು ನಾವು ಮಾಡಿಕೊಂಡ ಒಡಂಬಡಿಕೆಯನ್ನು ಮುರಿದುಬಿಟ್ಟಿರಿ. ಭಯಂಕರ ಕೃತ್ಯಗಳನ್ನು ಮಾಡಿ ಆಮೇಲೆ ನನಗೆ ರೊಟ್ಟಿ, ಕೊಬ್ಬು, ರಕ್ತಗಳ ಕಾಣಿಕೆ ಅರ್ಪಿಸುತ್ತೀರಿ. ಆದರೆ ಇವೆಲ್ಲಾ ನನ್ನ ಆಲಯವನ್ನು ಅಶುದ್ಧಗೊಳಿಸುತ್ತಿವೆ.