ಯೆಹೆಜ್ಕೇಲನು 41:4 - ಪರಿಶುದ್ದ ಬೈಬಲ್4 ಆಮೇಲೆ ಆ ಪುರುಷನು ಕೋಣೆಯ ಉದ್ದವನ್ನು ಅಳತೆ ಮಾಡಿದನು. ಅದು ಇಪ್ಪತ್ತು ಮೊಳ ಉದ್ದ, ಇಪ್ಪತ್ತು ಮೊಳ ಅಗಲವಾಗಿತ್ತು. “ಇದು ಮಹಾ ಪವಿತ್ರಸ್ಥಳ” ಎಂದು ಅವನು ನನಗೆ ತಿಳಿಸಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ಅದರ ಕೋಣೆಗಳ ಉದ್ದವು ಇಪ್ಪತ್ತು ಮೊಳಗಳೂ, ಅಗಲವು ಇಪ್ಪತ್ತು ಮೊಳಗಳೂ ಇದ್ದವು. ಆಗ ಅವನು ನನಗೆ, “ಇದು ಮಹಾಪರಿಶುದ್ಧ ಸ್ಥಳ” ಎಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 ದ್ವಾರದ ಪಕ್ಕದ ಗೋಡೆಗಳ ಅಗಲ ಮೂರುವರೆ ಮೂರುವರೆ ಮೀಟರ್, ಗರ್ಭ ಗೃಹದ ಉದ್ದ ಹತ್ತು ಮೀಟರ್, ಅಗಲ ಹತ್ತು ಮೀಟರ್ ಇದ್ದವು. ಆಗ ಅವನು ನನಗೆ, “ಇದು ಮಹಾಪರಿಶುದ್ಧ ಸ್ಥಳ,” ಎಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)4 ದ್ವಾರದ ಪಕ್ಕದ ಗೋಡೆಗಳ ಅಗಲ ಏಳೇಳು ಮೊಳ, ಗರ್ಭಗೃಹದ ಉದ್ದ ಇಪ್ಪತ್ತು ಮೊಳ, ಅಗಲ ಇಪ್ಪತ್ತು ಮೊಳ ಇದ್ದವು; ಆಗ ಅವನು ನನಗೆ - ಇದು ಮಹಾಪರಿಶುದ್ಧಸ್ಥಳವೆಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ4 ಅವನು ಒಳಗಿನ ಪರಿಶುದ್ಧಸ್ಥಳದ ಉದ್ದವನ್ನು ಅಳೆದನು; ಅದು ಸುಮಾರು ಹತ್ತು ಮೀಟರ್ ಆಗಿತ್ತು; ಅದರ ಅಗಲವು ಮುಖ್ಯ ಸಭಾಂಗಣದ ಕೊನೆಯವರೆಗೂ ಸುಮಾರು ಹತ್ತು ಮೀಟರ್ ಆಗಿತ್ತು. ಅವನು ನನಗೆ, “ಇದು ಅತ್ಯಂತ ಪವಿತ್ರ ಸ್ಥಳವಾಗಿದೆ” ಎಂದು ಹೇಳಿದನು. ಅಧ್ಯಾಯವನ್ನು ನೋಡಿ |