Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 41:25 - ಪರಿಶುದ್ದ ಬೈಬಲ್‌

25 ಅವುಗಳ ಮೇಲೆ ಕೆರೂಬಿದೂತರ ಮತ್ತು ಖರ್ಜೂರ ವೃಕ್ಷದ ಚಿತ್ರಗಳನ್ನು ಕೆತ್ತಲಾಗಿತ್ತು. ಗೋಡೆಗಳಲ್ಲಿ ಹೇಗೆ ಕೆತ್ತಲ್ಪಟ್ಟಿತ್ತೋ ಅದೇ ರೀತಿಯಲ್ಲಿ, ಕೈಸಾಲೆಯ ಮುಂದೆ ಒಂದು ಮರದಿಂದ ಮಾಡಿದ ಸೂರು ಇತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಆ ಬಾಗಿಲುಗಳಲ್ಲಿ ಅಂದರೆ ಪರಿಶುದ್ಧ ಸ್ಥಳದ ಬಾಗಿಲುಗಳಲ್ಲಿ ಕೆರೂಬಿಗಳ ಮತ್ತು ಖರ್ಜೂರ ಮರಗಳ ಚಿತ್ರಗಳು ಗೋಡೆಗಳಲ್ಲಿ ಚಿತ್ರಿಸಲ್ಪಟ್ಟ ಹಾಗೆಯೇ ಇದ್ದವು. ದ್ವಾರಮಂಟಪದ ಹೊರಗಡೆ ಮರದ ಹಲಗೆಗಳಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಆ ಕದಗಳಲ್ಲಿ, ಅಂದರೆ ಪರಿಶುದ್ಧ ಸ್ಥಳದ ಕದಗಳಲ್ಲಿ ಕೆರೂಬಿಗಳು ಹಾಗು ಖರ್ಜೂರ ವೃಕ್ಷಗಳು ಗೋಡೆಗಳಲ್ಲಿ ಚಿತ್ರಿತವಾಗಿದ್ದ ಹಾಗೆಯೇ ಚಿತ್ರಿತವಾಗಿದ್ದವು. ದ್ವಾರಮಂಟಪದ ಹೊರಗಡೆ ಮರದ ಸೂರು ಇತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಆ ಕದಗಳಲ್ಲಿ, ಅಂದರೆ ಪರಿಶುದ್ಧಸ್ಥಳದ ಕದಗಳಲ್ಲಿ ಕೆರೂಬಿಗಳೂ ಖರ್ಜೂರ ವೃಕ್ಷಗಳೂ ಗೋಡೆಗಳಲ್ಲಿ ಚಿತ್ರಿಸಲ್ಪಟ್ಟ ಹಾಗೆಯೇ ಚಿತ್ರಿತವಾಗಿದ್ದವು; ದ್ವಾರಮಂಟಪದ ಹೊರಗಡೆ ಮರದ ಸೂರು ಇತ್ತು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಆಲಯದ ಬಾಗಿಲುಗಳ ಮೇಲೆ ಕೆರೂಬಿಗಳೂ ಖರ್ಜೂರದ ಮರಗಳೂ ಗೋಡೆಗಳ ಮೇಲೆ ಚಿತ್ರಿತವಾಗುವ ಹಾಗೆಯೇ ಚಿತ್ರಿತವಾಗಿದ್ದವು. ದ್ವಾರಾಂಗಣದ ಮುಂದೆ ಹೊರಗಡೆಯಲ್ಲಿ ದಪ್ಪವಾದ ಹಲಗೆಗಳಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 41:25
4 ತಿಳಿವುಗಳ ಹೋಲಿಕೆ  

ಕೆರೂಬಿದೂತರ ಮತ್ತು ಖರ್ಜೂರ ವೃಕ್ಷಗಳ ಚಿತ್ರ ಬಿಡಿಸಲ್ಪಟ್ಟಿತ್ತು. ಎರಡು ಕೆರೂಬಿದೂತರ ನಡುವೆ ಒಂದು ಖರ್ಜೂರ ವೃಕ್ಷವಿತ್ತು. ಪ್ರತಿ ಕೆರೂಬಿದೂತರಿಗೆ ಎರಡು ಮುಖಗಳಿದ್ದವು.


ಸೊಲೊಮೋನನು, “ಕಂಬಮಂಟಪ”ವನ್ನು ಸಹ ಕಟ್ಟಿಸಿದನು. ಅದರ ಉದ್ದ ಎಪ್ಪತ್ತೈದು ಅಡಿ ಮತ್ತು ಅಗಲ ನಲವತ್ತೈದು ಅಡಿ. ಅದರ ಮುಂಭಾಗದಲ್ಲೂ ಕಂಬಗಳಿಂದ ಕೂಡಿದ ಪಡಸಾಲೆಯಿತ್ತು.


ಪ್ರತೀ ಕಾವಲು ಮನೆಯ ಮೇಲ್ಗಡೆ ಸಣ್ಣ ಕಿಟಕಿಗಳು, ಗೋಡೆ ಮತ್ತು ಜಗಲಿಗಳು ಇದ್ದವು. ಕಿಟಕಿಯ ಅಗಲದ ಭಾಗವು ಪ್ರವೇಶದ್ವಾರಕ್ಕೆ ಮುಖ ಮಾಡಿದ್ದವು. ಪ್ರವೇಶದ್ವಾರದ ಎರಡೂ ಪಕ್ಕದಲ್ಲಿದ್ದ ಗೋಡೆಗಳ ಮೇಲೆ ಖರ್ಜೂರ ವೃಕ್ಷದ ಚಿತ್ರವನ್ನು ಕೆತ್ತಲಾಗಿತ್ತು.


ಗೋಡೆಗಳಿಗೆ ಮರದ ಹಲಗೆಗಳು ಹೊದಿಸಲ್ಪಟ್ಟಿದ್ದವು. ಎಲ್ಲಾ ಕಿಟಕಿ ಬಾಗಿಲುಗಳಿಗೆ ಮರದ ಹೊದಿಕೆಯಿತ್ತು. ದ್ವಾರದ ಪಕ್ಕದಲ್ಲಿ ಆಲಯದ ಗೋಡೆಗೆ ನೆಲದಿಂದ ಹಿಡಿದು ಕಿಟಕಿಯ ತನಕ ಮರದ ಹಲಗೆಯ ಹೊದಿಕೆ ಇತ್ತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು