ಯೆಹೆಜ್ಕೇಲನು 40:6 - ಪರಿಶುದ್ದ ಬೈಬಲ್6 ಅವನು ಪೂರ್ವದ ದ್ವಾರಕ್ಕೆ ಹೋದನು. ಅವನು ಅದರ ಮೆಟ್ಟಿಲುಗಳ ಬಳಿಗೆ ಹೋಗಿ ದ್ವಾರದ ಅಗಲವನ್ನು ಅಳತೆಮಾಡಿದನು. ಅದು ಒಂದು ಅಳತೆಕೋಲು ಅಗಲವಾಗಿತ್ತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20196 ಆಮೇಲೆ ಅವನು ಪೂರ್ವದಿಕ್ಕಿನ ಹೆಬ್ಬಾಗಿಲಿಗೆ ಬಂದು, ಮೆಟ್ಟಿಲುಗಳನ್ನು ಹತ್ತಿ, ಹೊಸ್ತಿಲಿನ ಅಗಲವನ್ನು ಅಳೆದನು. ಅದು ಒಂದೇ ಕೋಲು ಅಗಲವಾಗಿತ್ತು. ಅಗಲವಾದ ಹೊಸ್ತಿಲಿನ ಬಾಗಿಲೂ ಅಲ್ಲಿ ಇತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)6 ಆಮೇಲೆ ಅವನು ಪೂರ್ವದಿಕ್ಕಿನ ಹೆಬ್ಬಾಗಿಲಿಗೆ ಬಂದು ಮೆಟ್ಟಲುಗಳನ್ನು ಹತ್ತಿ ಹೊಸ್ತಿಲಿನ ಅಗಲವನ್ನು ಅಳೆದನು. ಒಂದೊಂದು ಹೊಸ್ತಿಲಿನ ಅಗಲವು ಮೂರು ಮೀಟರ್ ಇತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)6 ಆಮೇಲೆ ಅವನು ಮೂಡಣ ಹೆಬ್ಬಾಗಿಲಿಗೆ ಬಂದು ಮೆಟ್ಲುಗಳನ್ನು ಹತ್ತಿ ಹೊಸ್ತಲಿನ ಅಗಲವನ್ನು ಒಂದು ಕೋಲಳೆದನು. ಒಂದೊಂದು ಹೊಸ್ತಲಿನ ಅಗಲವು ಒಂದೊಂದು ಕೋಲಿತ್ತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ6 ಆಮೇಲೆ ಅವನು ಪೂರ್ವದಿಕ್ಕಿಗೆ ಅಭಿಮುಖವಾಗಿರುವ ಬಾಗಿಲಿಗೆ ಬಂದು, ಅದರ ಮೆಟ್ಟಲುಗಳನ್ನು ಹತ್ತಿ ಆ ಬಾಗಿಲಿನ ಹೊಸ್ತಿಲನ್ನು ಅಳೆದನು, ಅದು ಒಂದೇ ಕೋಲು ಅಗಲವಾಗಿತ್ತು. ಅಗಲವಾದ ಹೊಸ್ತಿಲಿನ ಬಾಗಿಲೂ ಅಲ್ಲಿ ಇತ್ತು. ಅಧ್ಯಾಯವನ್ನು ನೋಡಿ |
ಅವರ ಹೊಸ್ತಿಲನ್ನು ನನ್ನ ಹೊಸ್ತಿಲ ಬಳಿಯಲ್ಲಿ ಇಡುವದರಿಂದ ಅವರ ನಿಲುವುಗಳನ್ನು ನನ್ನ ನಿಲುವುಗಳ ಬಳಿಯಲ್ಲಿ ಇಡುವದರಿಂದ ಅವರು ನನ್ನ ಹೆಸರಿಗೆ ಅವಮಾನ ಮಾಡುವದಿಲ್ಲ. ಹಿಂದಿನ ಕಾಲದಲ್ಲಿ, ಕೇವಲ ಒಂದೇ ಗೋಡೆಯು ಅವರಿಂದ ನನ್ನನ್ನು ಪ್ರತ್ಯೇಕಿಸಿತ್ತು. ಆದ್ದರಿಂದ ಪ್ರತಿಯೊಂದು ಸಲ ಅವರು ಪಾಪ ಮಾಡಿದಾಗ ಮತ್ತು ಆ ಭಯಂಕರ ಕೃತ್ಯಗಳನ್ನು ಮಾಡಿದಾಗ ನನ್ನ ಹೆಸರಿಗೆ ಅವಮಾನವಾಯಿತು. ಆದ್ದರಿಂದ ನಾನು ಕೋಪಗೊಂಡು ಅವರನ್ನು ನಾಶಮಾಡಿದೆನು.