ಯೆಹೆಜ್ಕೇಲನು 40:48 - ಪರಿಶುದ್ದ ಬೈಬಲ್48 ಆಮೇಲೆ ಅವನು ಆಲಯದ ಕೈಸಾಲೆಗೆ ನನ್ನನ್ನು ಕರೆದುಕೊಂಡು ಹೋದನು. ಅದರ ಇಕ್ಕೆಡೆಗಳಲ್ಲಿಯೂ ಇರುವ ಗೋಡೆಗಳನ್ನು ಅವನು ಅಳತೆ ಮಾಡಲಾಗಿ ಗೋಡೆಯು ಐದು ಮೊಳ ದಪ್ಪ, ಮೂರು ಮೊಳ ಅಗಲವಾಗಿತ್ತು. ಅದರ ಮಧ್ಯದ ಸ್ಥಳ ಹದಿನಾಲ್ಕು ಮೊಳವಿತ್ತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201948 ಕೂಡಲೆ ಅವನು ನನ್ನನ್ನು ದೇವಸ್ಥಾನದ ದ್ವಾರಮಂಟಪಕ್ಕೆ ಕರೆ ತಂದನು. ಅದನ್ನು ಅಳೆಯಲು, ಅದರ ಎದುರುಬದುರಿನ ಕಂಬಗಳ ಅಗಲ ಐದೈದು ಮೊಳ, ಬಾಗಿಲಿನ ಎರಡು ಪಕ್ಕದ ಗೋಡೆಗಳ ಅಗಲ ಮೂರು ಮೂರು ಮೊಳವಾಗಿತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)48 ಕೂಡಲೆ ಆ ಪುರುಷ ನನ್ನನ್ನು ದೇವಸ್ಥಾನದ ದ್ವಾರಮಂಟಪಕ್ಕೆ ಕರೆದುತಂದು ಅದನ್ನು ಅಳೆದನು. ಅದರ ಎದುರುಬದುರಿನ ನಿಲವುಕಂಬಗಳ ಅಗಲ ಎರಡುವರೆ ಮೀಟರುಗಳು, ಬಾಗಿಲಿನ ಎರಡು ಪಕ್ಕದ ಗೋಡೆಗಳ ಅಗಲ ಅರ್ಧರ್ಧ ಮೀಟರ್, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)48 ಕೂಡಲೆ ಅವನು ನನ್ನನ್ನು ದೇವಸ್ಥಾನದ ದ್ವಾರಮಂಟಪಕ್ಕೆ ಕರತಂದು ಅದನ್ನು ಅಳೆಯಲು ಅದರ ಎದುರುಬದುರಿನ ನಿಲವು ಕಂಬಗಳ ಅಗಲ ಐದೈದು ಮೊಳ, ಬಾಗಿಲಿನ ಎರಡು ಪಕ್ಕದ [ಗೋಡೆಗಳ] ಅಗಲ ಮೂರು ಮೂರು ಮೊಳ, ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ48 ಅವನು ನನ್ನನ್ನು ಮನೆಯ ದ್ವಾರಮಂಟಪಕ್ಕೆ ಕರೆದುಕೊಂಡು ಹೋಗಿ, ದ್ವಾರಮಂಟಪ ಪ್ರತಿಯೊಂದು ಕಂಬವನ್ನೂ ಅಳೆದನು. ದ್ವಾರಮಂಟಪ ಅಗಲವು ಸುಮಾರು ಏಳು ಮೀಟರ್ ಮತ್ತು ಪಕ್ಕದ ಗೋಡೆಗಳ ಅಗಲವು ಎರಡೂ ಬದಿಗಳಲ್ಲಿ ಸುಮಾರು ಒಂದೂವರೆ ಮೀಟರ್ ಆಗಿತ್ತು. ಅಧ್ಯಾಯವನ್ನು ನೋಡಿ |