Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 40:43 - ಪರಿಶುದ್ದ ಬೈಬಲ್‌

43 ಈ ಸ್ಥಳದ ಗೋಡೆಯಲ್ಲಿ ಸುತ್ತಲೂ ಮೂರು ಇಂಚು ಉದ್ದದ ಮಾಂಸವನ್ನು ಸಿಕ್ಕಿಸುವ ಕೊಂಡಿಗಳಿದ್ದವು. ಯಜ್ಞದ ಮಾಂಸವು ಈ ಮೇಜುಗಳ ಮೇಲಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

43 ಒಳಗೆ, ಸುತ್ತಲು ಕೈ ಅಗಲದಷ್ಟು ಕೊಂಡಿಗಳು ಜಡಿಯಲ್ಪಟ್ಟಿದ್ದವು. ನೈವೇದ್ಯ ಮಾಂಸವು ಪೀಠಗಳ ಮೇಲಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

43 ಅಂಚಿನಲ್ಲಿ ಎಪ್ಪತ್ತೈದು ಮಿಲಿಮೀಟರ್ ದಿಂಡು ಕಟ್ಟಿತ್ತು; ನೈವೇದ್ಯ ಮಾಂಸವು ಪೀಠಗಳ ಮೇಲಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

43 ಅಂಚಿನಲ್ಲಿ ಹಿಡಿಯೆತ್ತರ ದಿಂಡುಕಟ್ಟಿತ್ತು; ನೈವೇದ್ಯಮಾಂಸವು ಪೀಠಗಳ ಮೇಲಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

43 ಒಳಗೆ ಸುತ್ತಲಾಗಿ ಅಂಗೈ ಅಗಲದಷ್ಟು ಕೊಂಡಿಗಳು ಜಡಿಯಲಾಗಿದ್ದವು. ಮೇಜುಗಳ ಮೇಲೆ ಬಲಿಯ ಮಾಂಸವಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 40:43
5 ತಿಳಿವುಗಳ ಹೋಲಿಕೆ  

ಮೋಶೆಯು ಟಗರನ್ನು ತುಂಡುತುಂಡಾಗಿ ಕಡಿದು ಅದರ ಒಳಗಿನ ಭಾಗಗಳನ್ನು ಮತ್ತು ಕಾಲುಗಳನ್ನು ನೀರಿನಿಂದ ತೊಳೆದನು; ಇಡೀ ಟಗರನ್ನು ವೇದಿಕೆಯ ಮೇಲೆ ಹೋಮಮಾಡಿದನು. ಮೋಶೆಯು ಅದರ ತಲೆ, ತುಂಡುಗಳು ಮತ್ತು ಕೊಬ್ಬನ್ನು ಹೋಮಮಾಡಿದನು. ಅದು ಯೆಹೋವನಿಗೆ ಅಗ್ನಿಯ ಮೂಲಕ ಅರ್ಪಿಸಲ್ಪಟ್ಟ ಸುಗಂಧಕರವಾದ ಸರ್ವಾಂಗಹೋಮವಾಗಿದೆ. ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆ ಮಾಡಿದನು.


ಆರೋನನ ವಂಶದವರಾದ ಯಾಜಕರು ವೇದಿಕೆಯ ಮೇಲೆ ಬೆಂಕಿಯಲ್ಲಿರುವ ಕಟ್ಟಿಗೆಯ ಮೇಲೆ ಪಶುವಿನ ತುಂಡುಗಳನ್ನೂ ತಲೆ ಮತ್ತು ಕೊಬ್ಬನ್ನೂ ಇಡಬೇಕು.


ಯಾಜಕನು ಆ ಪಶುವಿನ ಚರ್ಮವನ್ನು ಸುಲಿದು, ಪಶುವನ್ನು ತುಂಡುತುಂಡುಗಳಾಗಿ ಕಡಿಯಬೇಕು.


ಸರ್ವಾಂಗಹೋಮಕ್ಕಾಗಿ ಕಲ್ಲಿನಿಂದ ಮಾಡಿದ ನಾಲ್ಕು ಮೇಜುಗಳಿದ್ದವು. ಈ ಮೇಜುಗಳು ಒಂದೂವರೆ ಮೊಳ ಉದ್ದ, ಒಂದೂವರೆ ಮೊಳ ಅಗಲ, ಒಂದು ಮೊಳ ಎತ್ತರ. ಈ ಮೇಜುಗಳ ಮೇಲೆ ಪಶುಗಳನ್ನು ವಧಿಸಲು ಉಪಯೋಗಿಸುವ ಉಪಕರಣಗಳನ್ನು ಯಾಜಕರು ಇಡುತ್ತಿದ್ದರು.


ಒಳಗಿನ ಪ್ರಾಕಾರದಲ್ಲಿ ಎರಡು ಕೋಣೆಗಳಿದ್ದವು. ಒಂದು ಉತ್ತರದ ದ್ವಾರದ ಬಳಿಯಲ್ಲಿ ದಕ್ಷಿಣಕ್ಕೆ ಅಭಿಮುಖವಾಗಿತ್ತು. ಇನ್ನೊಂದು ದಕ್ಷಿಣದ ದ್ವಾರದ ಬಳಿಯಲ್ಲಿದ್ದು ಉತ್ತರಕ್ಕೆ ಅಭಿಮುಖವಾಗಿತ್ತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು