ಸೊಲೊಮೋನನು ಹತ್ತು ಗಂಗಾಳಗಳನ್ನು ಮಾಡಿಸಿದನು. ಐದು ಗಂಗಾಳಗಳನ್ನು ತಾಮ್ರದ ನೀರಿನ ತೊಟ್ಟಿಯ ಬಲಗಡೆಯಲ್ಲಿಡಿಸಿದನು. ಉಳಿದ ಐದು ಗಂಗಾಳಗಳನ್ನು ಪಾತ್ರೆಯ ಎಡಗಡೆಯಲ್ಲಿಡಿಸಿದನು. ಈ ಗಂಗಾಳಗಳ ನೀರನ್ನು ಯಜ್ಞ ಮಾಡಲಿಕ್ಕಿರುವ ಪದಾರ್ಥಗಳನ್ನು ತೊಳೆಯುವದಕ್ಕಾಗಿ ಉಪಯೋಗಿಸಿದರು. ಯಾಜಕರು ಯಜ್ಞಗಳನ್ನು ಅರ್ಪಿಸುವ ಮೊದಲು ತಮ್ಮನ್ನು ಶುದ್ಧ ಮಾಡಿಕೊಳ್ಳುವದಕ್ಕಾಗಿ ದೊಡ್ಡ ತಾಮ್ರದ ಪಾತ್ರೆಯ ನೀರನ್ನು ಉಪಯೋಗಿಸುತ್ತಿದ್ದರು.
ನಾವು ತೊಳೆಯಲ್ಪಟ್ಟವರಾಗಿದ್ದು ಕೆಟ್ಟ ಮನಸ್ಸಾಕ್ಷಿಯಿಂದ ಬಿಡುಗಡೆ ಹೊಂದಿದ್ದೇವೆ. ನಮ್ಮ ದೇಹಗಳನ್ನು ಶುದ್ಧವಾದ ನೀರಿನಿಂದ ತೊಳೆಯಲಾಗಿದೆ. ಆದ್ದರಿಂದ ಪೂರ್ಣನಂಬಿಕೆಯಿಂದಲೂ ಶುದ್ಧವಾದ ಹೃದಯದಿಂದಲೂ ದೇವರ ಬಳಿಗೆ ಬರೋಣ.
ಅವನು ನನಗೆ ಹೀಗೆ ಹೇಳಿದನು, “ನಿಯಮಿತ ಇಕ್ಕಟ್ಟಾದ ಸ್ಥಳದ ಬಳಿಯಲ್ಲಿ ಇರುವ ಉತ್ತರದ ಮತ್ತು ದಕ್ಷಿಣದ ಕೋಣೆಗಳು ಪವಿತ್ರವಾದವುಗಳು. ಅವು ಯೆಹೋವನಿಗೆ ಯಜ್ಞ ಸಮರ್ಪಿಸುವ ಯಾಜಕರಿಗಾಗಿ ಇವೆ. ಅಲ್ಲಿ ಯಾಜಕರು ಅತಿ ಪವಿತ್ರ ಕಾಣಿಕೆಪದಾರ್ಥಗಳನ್ನು ತಿನ್ನುವರು. ಮತ್ತು ಅಲ್ಲಿ ಅತಿ ಪವಿತ್ರ ಕಾಣಿಕೆಗಳನ್ನಿಡುವರು. ಯಾಕೆಂದರೆ ಆ ಸ್ಥಳವು ಪವಿತ್ರವಾದದ್ದು. ಅತಿ ಪವಿತ್ರ ಕಾಣಿಕೆ ಯಾವುವೆಂದರೆ, ಧಾನ್ಯಸಮರ್ಪಣೆ, ಪಾಪಪರಿಹಾರಕಯಜ್ಞ, ದೋಷಪರಿಹಾರಕಯಜ್ಞ, ಸಮಾಧಾನಯಜ್ಞದ ಕಾಣಿಕೆ.
ಆಮೇಲೆ ಅವನು ನನ್ನನ್ನು ಹೊರಗಿನ ಪ್ರಾಕಾರಕ್ಕೆ ಕರೆದುಕೊಂಡು ಹೋದನು. ಆ ಪ್ರಾಕಾರದ ಸುತ್ತಲೂ ಮೂವತ್ತು ಕೋಣೆಗಳೂ ನೆಲಗಟ್ಟೂ ಇದ್ದವು. ಆ ಕೋಣೆಗಳು ಗೋಡೆಗೆ ತಾಗಿ ನೆಲಗಟ್ಟಿಗೆ ಮುಖ ಮಾಡಿದ್ದವು.
ಕೆಳಅಂತಸ್ತಿನ ಕೊಠಡಿಗಳ ಪ್ರವೇಶವು ದೇವಾಲಯದ ದಕ್ಷಿಣದ ಕಡೆಗಿತ್ತು. ಎರಡನೆಯ ಅಂತಸ್ತಿನ ಕೊಠಡಿಗಳಿಗೆ ಹೋಗುವ ಮೆಟ್ಟಿಲುಗಳು ಒಳಗಡೆಯಿದ್ದು, ಅಲ್ಲಿಂದ ಮೂರನೆಯ ಅಂತಸ್ತಿನ ಕೊಠಡಿಗಳಿಗೂ ಹೋಗಬಹುದಾಗಿತ್ತು.
ಯಾಜಕನು ಪಶುವಿನ ಕಾಲುಗಳನ್ನು ಮತ್ತು ಒಳಗಿನ ಭಾಗಗಳನ್ನು ನೀರಿನಿಂದ ತೊಳೆದು ಈ ಎಲ್ಲಾ ಭಾಗಗಳನ್ನು ವೇದಿಕೆಯ ಮೇಲೆ ಹೋಮಮಾಡಬೇಕು. ಈ ಸರ್ವಾಂಗಹೋಮದ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ.
ದೇವಾಲಯದ ಪ್ರತಿಯೊಂದು ಭಾಗದ ನಕ್ಷೆಯನ್ನು ದಾವೀದನು ತಯಾರಿಸಿದ್ದನು. ದೇವಾಲಯದ ಸುತ್ತಣ ಅಂಗಳಗಳ ನಕ್ಷೆ ಮತ್ತು ಸುತ್ತಲೂ ಇರುವ ಕೋಣೆಗಳ ನಕ್ಷೆಯನ್ನು ದೇವಾಲಯದ ಪವಿತ್ರ ವಸ್ತುಗಳನ್ನು ಇಡುವ ಕೋಣೆಗಳ ಯೋಜನೆಯನ್ನು ಮತ್ತು ನಕ್ಷೆಗಳನ್ನು ಸೊಲೊಮೋನನಿಗೆ ಕೊಟ್ಟನು.
ಅನಂತರ ನಾನು ರೇಕಾಬ ವಂಶದವರನ್ನು ಯೆಹೋವನ ಆಲಯದಲ್ಲಿ ಕರೆತಂದೆನು. ನಾವು ಹಾನಾನನ ಮಕ್ಕಳ ಕೋಣೆ ಎಂದು ಕರೆಯಲ್ಪಡುವ ಕೋಣೆಯೊಳಕ್ಕೆ ಹೋದೆವು. ಹಾನಾನನು ಇಗ್ದಲ್ಯನೆಂಬವನ ಮಗನು. ಹಾನಾನನು ದೇವರ ಮನುಷ್ಯ. ಈ ಕೋಣೆಯು ಯೆಹೂದದ ರಾಜಕುಮಾರರ ಕೋಣೆಯ ಪಕ್ಕದಲ್ಲಿತ್ತು. ಇದು ಶಲ್ಲೂಮನ ಮಗನಾದ ಮಾಸೇಯನ ಕೋಣೆಯ ಮೇಲ್ಗಡೆ ಇತ್ತು. ಮಾಸೇಯನು ಆಲಯದ ದ್ವಾರಪಾಲಕನಾಗಿದ್ದನು.
ಆ ಸಂದರ್ಭದಲ್ಲಿ ಯೆರೆಮೀಯನು ಹೇಳಿದ ಆ ಸಂದೇಶವನ್ನು ಬಾರೂಕನು ಓದಿದನು. ಅವನು ಯೆಹೋವನ ಆಲಯದಲ್ಲಿ ಆ ಸುರುಳಿಯನ್ನು ಓದಿದನು. ಯೆಹೋವನ ಆಲಯದಲ್ಲಿದ್ದ ಎಲ್ಲಾ ಜನರು ಕೇಳುವಂತೆ ಬಾರೂಕನು ಆ ಸುರುಳಿಯನ್ನು ಓದಿದನು. ಆ ಸುರುಳಿಯನ್ನು ಓದುವಾಗ ಬಾರೂಕನು ಮೇಲಿನ ಪ್ರಾಕಾರದಲ್ಲಿದ್ದ ಗೆಮರ್ಯನ ಕೋಣೆಯಲ್ಲಿದ್ದನು. ಆ ಕೋಣೆಯು ಪವಿತ್ರ ಆಲಯದ ಹೊಸ ಬಾಗಿಲಿನ ಹತ್ತಿರ ಇತ್ತು. ಗೆಮರ್ಯನು ಶಾಫಾನನ ಮಗನಾಗಿದ್ದನು. ಗೆಮರ್ಯನು ಯೆಹೋವನ ಆಲಯದಲ್ಲಿ ಯೆಹೂದ್ಯ ಧರ್ಮಶಾಸ್ತ್ರಜ್ಞನಾಗಿದ್ದನು.
ಒಳಗಿನ ಪ್ರಾಕಾರದಲ್ಲಿ ಎರಡು ಕೋಣೆಗಳಿದ್ದವು. ಒಂದು ಉತ್ತರದ ದ್ವಾರದ ಬಳಿಯಲ್ಲಿ ದಕ್ಷಿಣಕ್ಕೆ ಅಭಿಮುಖವಾಗಿತ್ತು. ಇನ್ನೊಂದು ದಕ್ಷಿಣದ ದ್ವಾರದ ಬಳಿಯಲ್ಲಿದ್ದು ಉತ್ತರಕ್ಕೆ ಅಭಿಮುಖವಾಗಿತ್ತು.
ಆದರೆ ಉತ್ತರಕ್ಕೆ ಅಭಿಮುಖವಾಗಿರುವ ಕೋಣೆಯು ಯಜ್ಞವೇದಿಯಲ್ಲಿ ಕಾರ್ಯವಹಿಸುತ್ತಿರುವ ಯಾಜಕರಿಗಾಗಿ, ಯಾಜಕರೆಲ್ಲರೂ ಲೇವಿ ಕುಲದವರಾಗಿದ್ದಾರೆ. ಎರಡನೇ ಗುಂಪಿನ ಯಾಜಕರು ಚಾದೋಕನ ಸಂತತಿಯವರಾಗಿದ್ದರು. ಅವರು ಮಾತ್ರವೇ ಯಜ್ಞವೇದಿಯಲ್ಲಿ ಯಜ್ಞಾರ್ಪಣೆ ಮಾಡಬಹುದು” ಎಂದು ಹೇಳಿದನು.
ಯಾಜಕನು ಪಶುವಿನ ಕಾಲುಗಳನ್ನೂ ಒಳಗಿನ ಭಾಗಗಳನ್ನೂ ನೀರಿನಿಂದ ತೊಳೆಯಬೇಕು. ಬಳಿಕ ಯಾಜಕನು ಪಶುವಿನ ಈ ಎಲ್ಲಾ ಭಾಗಗಳನ್ನೂ ವೇದಿಕೆಯ ಮೇಲೆ ಹೋಮಮಾಡಬೇಕು. ಅದು ಅಗ್ನಿಯ ಮೂಲಕ ಸಮರ್ಪಿಸಲ್ಪಟ್ಟ ಸರ್ವಾಂಗಹೋಮವಾಗಿರುತ್ತದೆ. ಅದರ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ.