ಯೆಹೆಜ್ಕೇಲನು 4:7 - ಪರಿಶುದ್ದ ಬೈಬಲ್7 ದೇವರು ಮತ್ತೆ ಹೇಳಿದ್ದೇನೆಂದರೆ: “ಈಗ ನೀನು ನಿನ್ನ ಬಟ್ಟೆಯ ತೋಳನ್ನು ಮೇಲಕ್ಕೆ ಮಡಿಚಿ ನಿನ್ನ ಕೈಯನ್ನು ಇಟ್ಟಿಗೆಯ ಮೇಲೆ ಚಾಚು. ಜೆರುಸಲೇಮ್ ನಗರದ ಮೇಲೆ ಯುದ್ಧ ಮಾಡುವವನಂತೆ ನಟಿಸು. ಪಟ್ಟಣದ ವಿರುದ್ಧವಾಗಿ ಪ್ರವಾದಿಸು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20197 ನಿನ್ನ ತೋಳಿಗೆ ಹೊದಿಕೆಯಿಲ್ಲದೆ, ಮುತ್ತಿಗೆಯಾದ ಯೆರೂಸಲೇಮಿನ ಕಡೆಗೆ ಮುಖವನ್ನು ತಿರುಗಿಸಿ, ಅದರ ವಿಷಯವಾಗಿ ಅಶುಭವನ್ನು ಪ್ರವಾದಿಸು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)7 “ನಿನ್ನ ತೋಳಿಗೆ ಹೊದಿಕೆಯಿಲ್ಲದೆ, ಮುತ್ತಿಗೆಯಾದ ಜೆರುಸಲೇಮಿನ ಕಡೆಗೆ ಮೋರೆ ತಿರುಗಿಸಿ, ಅದರ ವಿರುದ್ಧ ಅಶುಭವನ್ನು ಪ್ರವಾದಿಸು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)7 ನಿನ್ನ ತೋಳಿಗೆ ಹೊದಿಕೆಯಿಲ್ಲದೆ ಮುತ್ತಿಗೆಯಾದ ಯೆರೂಸಲೇವಿುನ ಕಡೆಗೆ ಮೋರೆ ತಿರುಗಿಸಿ ಅದರ ವಿಷಯವಾಗಿ ಅಶುಭವನ್ನು ಪ್ರಕಟಿಸು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ7 ನೀನು ಯೆರೂಸಲೇಮಿನ ಮುತ್ತಿಗೆಯ ಕಡೆಗೆ ನಿನ್ನ ಮುಖವನ್ನು ಇಡಬೇಕು. ನಿನ್ನ ಭುಜವನ್ನು ನೀನು ಬರಿದುಮಾಡಿಕೊಂಡು, ಅದಕ್ಕೆ ವಿರೋಧವಾಗಿ ಪ್ರವಾದಿಸಬೇಕು. ಅಧ್ಯಾಯವನ್ನು ನೋಡಿ |
ಆ ಬಳಿಕ ಒಂದು ಕಬ್ಬಿಣದ ರೊಟ್ಟಿ ಕಲ್ಲನ್ನು ನಿನಗೂ ನಗರಕ್ಕೂ ಮಧ್ಯೆ ಇಡು. ಅದು ನಿನಗೂ ನಗರಕ್ಕೂ ನಡುವೆ ಇರುವ ಕಬ್ಬಿಣದ ಗೋಡೆಯಂತಿರುವುದು. ಈ ರೀತಿಯಾಗಿ ನೀನು ಆ ನಗರಕ್ಕೆ ವಿರುದ್ಧವಾಗಿರುವಂತೆ ಕಂಡುಬರುವೆ. ನೀನು ಆ ನಗರಕ್ಕೆ ಮುತ್ತಿಗೆ ಹಾಕಿ ಅದರ ಮೇಲೆ ಯುದ್ಧ ಮಾಡುವಿ. ಯಾಕೆಂದರೆ, ಶೀಬ್ರದಲ್ಲೇ ಏನು ಸಂಭವಿಸುತ್ತದೆ ಎಂಬುದಕ್ಕೆ ಇಸ್ರೇಲ್ ಜನರಿಗೆ ಇದು ಸೂಚನೆಯಾಗಿದೆ.
ಉತ್ತರದ ರಾಜನು ತನ್ನ ಸರ್ವಶಕ್ತಿಯಿಂದ ದಕ್ಷಿಣದ ರಾಜನೊಂದಿಗೆ ಹೋರಾಡಲು ನಿರ್ಧರಿಸುವನು. ಅವನು ದಕ್ಷಿಣದ ರಾಜನೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಳ್ಳುವನು. ಉತ್ತರದ ರಾಜನು ತನ್ನ ಮಗಳನ್ನು ದಕ್ಷಿಣದ ರಾಜನಿಗೆ ಮದುವೆ ಮಾಡಿಕೊಡುವನು. ದಕ್ಷಿಣದ ರಾಜನನ್ನು ಸೋಲಿಸುವ ಉದ್ದೇಶದಿಂದ ಉತ್ತರದ ರಾಜನು ಹೀಗೆ ಮಾಡುವನು. ಆದರೆ ಅವನ ತಂತ್ರಗಳು ಯಶಸ್ವಿಯಾಗುವದಿಲ್ಲ. ಅವುಗಳಿಂದ ಅವನಿಗೆ ಸಹಾಯ ಸಿಕ್ಕುವದಿಲ್ಲ.