Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 38:6 - ಪರಿಶುದ್ದ ಬೈಬಲ್‌

6 ಅಲ್ಲಿ ಗೋಮೆರ್ಯ ರಾಜ್ಯವು ತನ್ನ ಎಲ್ಲಾ ಸಿಪಾಯಿಗಳೊಂದಿಗೆ ಇರುವುದು. ಬಹು ದೂರದ ಉತ್ತರ ದಿಕ್ಕಿನಲ್ಲಿರುವ ತೋಗರ್ಮ ರಾಜ್ಯವೂ ಇದರಲ್ಲಿ ಸೇರಿರುವದು. ಈ ಕೈದಿಗಳ ಸಾಲಿನಲ್ಲಿ ಅನೇಕಾನೇಕ ಮಂದಿ ಇರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಉತ್ತರದಿಕ್ಕಿನ ಕಟ್ಟಕಡೆಯಿಂದ ಬಂದ ಗೋಮೆರ್ ಮತ್ತು ಸೈನ್ಯದವರನ್ನೂ, ತೋಗರ್ಮದವರನ್ನು ಮತ್ತು ಅನೇಕ ಜನರನ್ನು ನಿನ್ನೊಂದಿಗೆ ಬರಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಪಡೆಪಡೆಯಾದ ಗೋಮೆರ್ಯರನ್ನು, ಉತ್ತರದಿಕ್ಕಿನ ಕಟ್ಟಕಡೆಯಿಂದ ಬಂದ ಪಡೆಪಡೆಯಾದ ತೋಗರ್ಮದವರನ್ನು, ಹೀಗೆ ಅನೇಕಾನೇಕ ಜನಾಂಗಗಳನ್ನು ನಿನ್ನೊಂದಿಗೆ ಬರಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಇವರನ್ನು ಗುವ್ಮಿುಗುವ್ಮಿುಯಾದ ಗೋಮೆರ್ಯರನ್ನು, ಉತ್ತರದಿಕ್ಕಿನ ಕಟ್ಟಕಡೆಯಿಂದ ಬಂದ ಗುವ್ಮಿುಗುವ್ಮಿುಯಾದ ತೋಗರ್ಮದವರನ್ನು ಅಂತು ಅನೇಕಾನೇಕ ಜನಾಂಗಗಳನ್ನು ನಿನ್ನೊಂದಿಗೆ ಬರಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಗೋಮೆರ್ ಮತ್ತು ಅದರ ಎಲ್ಲಾ ದಳಗಳನ್ನೂ, ಉತ್ತರ ದಿಕ್ಕಿನ ತೋಗರ್ಮದವರನ್ನೂ ಮತ್ತು ಅದರ ಎಲ್ಲಾ ದಳಗಳನ್ನೂ, ಹೀಗೆ ನಿನ್ನ ಸಂಗಡವಿರುವ ಅನೇಕ ಜನರನ್ನೂ ನಿನ್ನೊಂದಿಗೆ ಬರಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 38:6
5 ತಿಳಿವುಗಳ ಹೋಲಿಕೆ  

ತೋಗರ್ಮ ದೇಶದ ಜನರು ನೀನು ಮಾರುವ ವಸ್ತುಗಳಿಗೆ ಕುದುರೆ, ಯುದ್ಧದ ಕುದುರೆಗಳು, ಹೇಸರಕತ್ತೆಗಳನ್ನು ಬದಲಿಕೊಟ್ಟರು.


“ಅಂತ್ಯಕಾಲದ ಸಮಯಕ್ಕೆ ದಕ್ಷಿಣದ ರಾಜನು ಉತ್ತರದ ರಾಜನೊಂದಿಗೆ ಯುದ್ಧ ಮಾಡುವನು. ಉತ್ತರದ ರಾಜನು ಅವನ ಮೇಲೆ ಧಾಳಿ ಮಾಡುವನು. ಅವನ ರಥ, ಕುದುರೆ ಸವಾರರು, ಹಡಗುಪಡೆಯೊಂದಿಗೆ ಧಾಳಿ ಮಾಡುವನು. ಆ ಉತ್ತರದ ರಾಜನು ಪ್ರವಾಹದಂತೆ ರಭಸದಿಂದ ದೇಶದಲ್ಲೆಲ್ಲ ಮುನ್ನುಗ್ಗುವನು.


“ಉತ್ತರ ದೇಶದ ನಾಯಕರೆಲ್ಲಾ ಅಲ್ಲಿದ್ದಾರೆ. ಚೀದೋನಿನ ಸೈನಿಕರೂ ಅಲ್ಲಿದ್ದಾರೆ. ಅವರ ಬಲವು ಜನರನ್ನು ಭಯಗ್ರಸ್ತರನ್ನಾಗಿ ಮಾಡಿತ್ತು. ಅವರೂ ಈಗ ಯುದ್ಧದಲ್ಲಿ ಮಡಿದ ಇತರರೊಂದಿಗೆ ಬಿದ್ದುಕೊಂಡಿದ್ದಾರೆ. ತಮ್ಮ ನಾಚಿಕೆಯೊಂದಿಗೆ ಪಾತಾಳವನ್ನು ಸೇರಿದ್ದಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು