ಯೆಹೆಜ್ಕೇಲನು 37:1 - ಪರಿಶುದ್ದ ಬೈಬಲ್1 ಯೆಹೋವನ ಶಕ್ತಿಯು ನನ್ನ ಮೇಲೆ ಬಂದಿತು. ಯೆಹೋವನ ಆತ್ಮವು ನನ್ನನ್ನು ನಗರದೊಳಗಿಂದ ಎತ್ತಿಕೊಂಡು ತಗ್ಗಿನ ಮಧ್ಯಕ್ಕೆ ಕೊಂಡೊಯ್ದನು. ಆ ಬಯಲಿನ ತುಂಬಾ ಒಣಗಿದ ಎಲುಬುಗಳು ತುಂಬಿದ್ದವು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ನಾನು ಯೆಹೋವನ ಹಸ್ತಸ್ಪರ್ಶದಿಂದ ಪರವಶನಾಗಲು, ಆತನು ತನ್ನ ಆತ್ಮದ ಮೂಲಕ ನನ್ನನ್ನು ಒಯ್ದು ಎಲುಬುಗಳಿಂದ ತುಂಬಿದ್ದ ಒಂದು ಕಣಿವೆಯಲ್ಲಿ ಇಳಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1 ನಾನು ಸರ್ವೇಶ್ವರನ ಹಸ್ತಸ್ಪರ್ಶದಿಂದ ಪರವಶನಾಗಿದ್ದೆ. ಆಗ ಅವರು ತಮ್ಮ ಆತ್ಮದ ಮೂಲಕ ನನ್ನನ್ನು ಒಯ್ದು, ಎಲುಬುಗಳಿಂದ ತುಂಬಿದ್ದ ಒಂದು ಕಣಿವೆಯಲ್ಲಿ ಇಳಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 ನಾನು ಯೆಹೋವನ ಹಸ್ತಸ್ಪರ್ಶದಿಂದ ಪರವಶನಾಗಿರಲು ಆತನು ತನ್ನ ಆತ್ಮದ ಮೂಲಕ ನನ್ನನ್ನು ಒಯ್ದು ಎಲುಬುಗಳಿಂದ ತುಂಬಿದ್ದ ಒಂದು ತಗ್ಗಿನಲ್ಲಿ ಇಳಿಸಿ ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ1 ಯೆಹೋವ ದೇವರ ಕೈ ನನ್ನ ಮೇಲೆ ಇತ್ತು; ಅದು ಆತನ ಆತ್ಮದ ಮೂಲಕ ನನ್ನನ್ನು ಹೊರಗೆ ತಂದು ಪೂರ್ತಿಯಾಗಿ ಎಲುಬುಗಳು ತುಂಬಿರುವ ಕಣಿವೆಯಲ್ಲಿ ಇಳಿಸಿತು. ಅಧ್ಯಾಯವನ್ನು ನೋಡಿ |
ಅವರು ಅವನಿಗೆ, “ನೋಡು, ನಮ್ಮಲ್ಲಿ ಐವತ್ತು ಮಂದಿ ಬಲಿಷ್ಠ ಜನರಿದ್ದಾರೆ. ನಿನ್ನ ಒಡೆಯನನ್ನು ಹುಡುಕಲು ದಯವಿಟ್ಟು ಅವರಿಗೆ ಅವಕಾಶಕೊಡು. ಯೆಹೋವನ ಆತ್ಮವು ಎಲೀಯನನ್ನು ಮೇಲಕ್ಕೆ ಎತ್ತಿಕೊಂಡು ಹೋಗಿ ಯಾವುದಾದರೂ ಬೆಟ್ಟದ ಮೇಲಾಗಲಿ ಅಥವಾ ಕಣಿವೆಯಲ್ಲಾಗಲಿ ಬೀಳಿಸಿರಬೇಕು” ಎಂದು ಹೇಳಿದರು. ಆದರೆ ಎಲೀಷನು, “ಇಲ್ಲ, ಎಲೀಯನನ್ನು ಹುಡುಕಲು ಜನರನ್ನು ಕಳುಹಿಸಬೇಡಿ!” ಎಂದು ಉತ್ತರಿಸಿದನು.
ಆದರೆ ಯೆಹೋವನು ಹೇಳುವುದೇನೆಂದರೆ, “ನಿನ್ನ ಜನರು ಸತ್ತಿದ್ದಾರೆ. ಆದರೆ ಅವರು ಮತ್ತೆ ಬದುಕುವರು. ನನ್ನ ಜನರ ದೇಹಗಳು ಸತ್ತವರೊಳಗಿಂದ ಏಳುವವು. ಭೂಮಿಯ ಮೇಲೆ ಸತ್ತಿರುವ ಜನರೇ, ಎದ್ದುನಿಂತು ಸಂತೋಷಿಸಿರಿ. ನಿಮ್ಮನ್ನು ಆವರಿಸಿದ ಮಂಜು ಮುಂಜಾನೆಯ ಬೆಳಕಿನಂತೆ ಪ್ರಕಾಶಿಸುತ್ತದೆ. ಭೂಮಿಯು ತನ್ನಲ್ಲಿರುವ ಸತ್ತವರನ್ನು ಒಪ್ಪಿಸಿಕೊಡುವಾಗ ಪ್ರಾರಂಭವಾಗುವ ಹೊಸ ದಿನವನ್ನು ಅದು ಸೂಚಿಸುವದು.”