ಯೆಹೆಜ್ಕೇಲನು 36:6 - ಪರಿಶುದ್ದ ಬೈಬಲ್6 “ಇಸ್ರೇಲ್ ದೇಶದ ವಿಷಯವಾಗಿ ಅವರಿಗೆ ಹೇಳು. ಪರ್ವತ, ಬೆಟ್ಟ, ತಗ್ಗು, ಹೊಳೆಗಳಿಗೆ ಹೇಳು. ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ ಎಂದು ತಿಳಿಸು. ‘ನೀನು ಆ ದೇಶಗಳವರ ನಿಂದನೆಯ ಮಾತುಗಳನ್ನು ಕೇಳಬೇಕಾಯಿತಲ್ಲಾ ಎಂದು ನನ್ನ ಹೃದಯವು ಸಿಟ್ಟಿನಲ್ಲಿ ಕುದಿಯುತ್ತದೆ.’” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20196 ಹೀಗಿರಲು ಇಸ್ರಾಯೇಲ್ ದೇಶದ ವಿಷಯವಾದ ಈ ಪ್ರವಾದನೆಯನ್ನು ಅದರ ಬೆಟ್ಟಗಳಿಗೆ, ಗುಡ್ಡಗಳಿಗೆ, ತೊರೆತಗ್ಗುಗಳಿಗೆ ನುಡಿಯಬೇಕೆಂದು ಅಪ್ಪಣೆಯಾಗಿದೆ. ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಆಹಾ! ನಾನು ಕೋಪೋದ್ರೇಕದಿಂದಲೂ, ರೋಷಾವೇಶದಿಂದಲೂ ಮಾತನಾಡಿದ್ದೇನೆ, ನೀವು ಅನ್ಯಜನಾಂಗಗಳಿಂದ ಅವಮಾನವನ್ನು ಅನುಭವಿಸಿದ್ದೀರಿ!’ ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)6 “ಹೀಗಿರಲು ಇಸ್ರಯೇಲ್ ನಾಡಿನ ವಿಷಯವಾದ ಈ ದೈವೋಕ್ತಿಯನ್ನು ಅದರ ಬೆಟ್ಟಗುಡ್ಡ, ತೊರೆ-ತಗ್ಗುಗಳಿಗೆ ನುಡಿಯಬೇಕೆಂದು ಅಪ್ಪಣೆಯಾಗಿದೆ - ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಆಹಾ, ನಾನು ಕೋಪೋದ್ರೇಕದಿಂದ ರೋಷಾವೇಷದಿಂದ ಮಾತನಾಡಿದ್ದೇನೆ. ನೀವು ಅನ್ಯಜನಾಂಗಗಳಿಂದ ಅವಮಾನವನ್ನು ಅನುಭವಿಸಿದ್ದೀರಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)6 ಹೀಗಿರಲು ಇಸ್ರಾಯೇಲ್ ದೇಶದ ವಿಷಯವಾದ ಈ ದೈವೋಕ್ತಿಯನ್ನು ಅದರ ಬೆಟ್ಟಗುಡ್ಡ ತೊರೆತಗ್ಗುಗಳಿಗೆ ನುಡಿಯಬೇಕೆಂದು ಅಪ್ಪಣೆಯಾಗಿದೆ - ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಆಹಾ, ನಾನು ಕೋಪೋದ್ರೇಕದಿಂದಲೂ ರೋಷಾವೇಶದಿಂದಲೂ ಮಾತಾಡಿದ್ದೇನೆ, ನೀವು ಅನ್ಯಜನಾಂಗಗಳಿಂದ ಅವಮಾನವನ್ನು ಅನುಭವಿಸಿದ್ದೀರಲ್ಲಾ! ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ6 ಆದ್ದರಿಂದ ಇಸ್ರಾಯೇಲ್ ದೇಶಕ್ಕೆ ಸಂಬಂಧಪಟ್ಟ ಹಾಗೆ ಪ್ರವಾದಿಸು. ಪರ್ವತಗಳಿಗೂ ಬೆಟ್ಟಗಳಿಗೂ ಹಳ್ಳಕೊಳ್ಳಗಳಿಗೂ ಹೇಳಬೇಕಾದದ್ದೇನೆಂದರೆ: ‘ಸಾರ್ವಭೌಮ ಯೆಹೋವ ದೇವರು ಇಂತೆನ್ನುತ್ತಾರೆ: ಇತರ ಜನಾಂಗಗಳ ಅವಮಾನವನ್ನು ಹೊತ್ತದ್ದರಿಂದ ನಾನು ರೋಷದಿಂದಲೂ ರೌದ್ರದಿಂದಲೂ ಮಾತನಾಡಿದ್ದೇನೆ. ಅಧ್ಯಾಯವನ್ನು ನೋಡಿ |