Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 34:28 - ಪರಿಶುದ್ದ ಬೈಬಲ್‌

28 ಬೇರೆ ದೇಶಗಳು ಅವರನ್ನು ಪ್ರಾಣಿಗಳನ್ನು ಹಿಡಿಯುವಂತೆ ಇನ್ನು ಹಿಡಿಯುವದಿಲ್ಲ. ಅವರು ಅವುಗಳನ್ನು ಇನ್ನು ಮುಂದಕ್ಕೆ ತಿನ್ನುವದಿಲ್ಲ. ಅವರು ಸುರಕ್ಷಿತವಾಗಿ ಜೀವಿಸುವರು. ಯಾರೂ ಅವರನ್ನು ಇನ್ನು ಹೆದರಿಸುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 “‘ಅಂದಿನಿಂದ ಅವರನ್ನು ಅನ್ಯಜನರು ಸೂರೆಮಾಡುವುದಿಲ್ಲ, ಕಾಡು ಮೃಗಗಳು ಅವರನ್ನು ತಿನ್ನುವುದಿಲ್ಲ; ಅವರು ಯಾರಿಗೂ ಹೆದರದೆ ನೆಮ್ಮದಿಯಾಗಿ ವಾಸಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

28 ಅಂದಿನಿಂದ ಅವರನ್ನು ಅನ್ಯಜನರು ಸೂರೆಮಾಡರು, ಕಾಡುಮೃಗಗಳು ನುಂಗವು; ಅವರು ಯಾರಿಗೂ ಹೆದರದೆ ನೆಮ್ಮದಿಯಾಗಿ ವಾಸಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ಅಂದಿನಿಂದ ಅವರನ್ನು ಅನ್ಯಜನರು ಸೂರೆಮಾಡರು, ಕಾಡುಮೃಗಗಳು ನುಂಗವು; ಅವರು ಯಾರಿಗೂ ಹೆದರದೆ ನೆಮ್ಮದಿಯಾಗಿ ವಾಸಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 ಅವರು ಇನ್ನು ಮೇಲೆ ಇತರ ಜನಾಂಗಗಳಿಗೆ ಕೊಳ್ಳೆಯಾಗುವುದಿಲ್ಲ; ಕಾಡುಮೃಗಗಳು ಅವರನ್ನು ತಿನ್ನುವುದಿಲ್ಲ. ಯಾರೂ ಅವರನ್ನು ಹೆದರಿಸುವವರಿಲ್ಲದೆ ನಿರ್ಭಯವಾಗಿ ವಾಸಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 34:28
16 ತಿಳಿವುಗಳ ಹೋಲಿಕೆ  

“ನನ್ನ ಸೇವಕನಾದ ಯಾಕೋಬೇ, ಭಯಪಡಬೇಡ. ಇಸ್ರೇಲೇ, ಅಂಜಬೇಡ. ಆ ದೂರಸ್ಥಳಗಳಿಂದ ನಾನು ನಿನ್ನನ್ನು ಖಂಡಿತವಾಗಿ ರಕ್ಷಿಸುತ್ತೇನೆ. ಬಂಧಿಯಾಗಿರುವ ದೇಶಗಳಿಂದ ನಾನು ನಿನ್ನ ಮಕ್ಕಳನ್ನು ರಕ್ಷಿಸುತ್ತೇನೆ. ಯಾಕೋಬು ಪುನಃ ನೆಮ್ಮದಿಯಾಗಿಯೂ ಸುರಕ್ಷಿತವಾಗಿಯೂ ಇರುವುದು. ಯಾರೂ ಅದನ್ನು ಹೆದರಿಸಲಾರರು.”


ಯೆಹೋವನು ಹೀಗೆಂದನು: “ನನ್ನ ಸೇವಕನಾದ ಯಾಕೋಬನೇ, ಭಯಪಡಬೇಡ! ಇಸ್ರೇಲೇ, ಅಂಜಬೇಡ, ನಾನು ನಿಮ್ಮನ್ನು ಆ ದೂರಪ್ರದೇಶದಿಂದ ರಕ್ಷಿಸುವೆನು. ಆ ದೂರದೇಶದಲ್ಲಿ ನೀವು ಬಂಧಿಗಳಾಗಿದ್ದೀರಿ, ಆದರೆ ನಾನು ನಿಮ್ಮ ವಂಶದವರನ್ನು ರಕ್ಷಿಸುತ್ತೇನೆ. ಅವರನ್ನು ಆ ನಾಡಿನಿಂದ ಮತ್ತೆ ಕರೆದುತರುತ್ತೇನೆ. ಯಾಕೋಬು ಮತ್ತೆ ನೆಮ್ಮದಿಯಿಂದ ಇರುವುದು. ಜನರು ಯಾಕೋಬನನ್ನು ಪೀಡಿಸುವದಿಲ್ಲ; ನನ್ನ ಜನರನ್ನು ಹೆದರಿಸುವ ಶತ್ರುಗಳಿರುವದಿಲ್ಲ.” ಇದು ಯೆಹೋವನ ನುಡಿ.


ಆ ಜನರು ತಮಗೊದಗಿದ ಅವಮಾನವನ್ನೂ ನನಗೆ ವಿರುದ್ಧವಾಗಿ ವರ್ತಿಸಿದ್ದನ್ನೂ ಮರೆತುಬಿಡುವರು. ತಮ್ಮ ಸ್ವದೇಶದಲ್ಲಿ ಸುರಕ್ಷಿತವಾಗಿ ವಾಸಿಸುವರು. ಅವರು ಯಾರಿಗೂ ಹೆದರಬೇಕಾಗಿಲ್ಲ.


“ನಾನು ಆ ಜನಾಂಗಗಳು ಇನ್ನು ಮೇಲೆ ನಿನ್ನನ್ನು ತುಚ್ಛೀಕರಿಸಲು ಬಿಡುವದಿಲ್ಲ. ಅವರ ಮಾತುಗಳಿಂದ ಇನ್ನು ನೀನು ಬೇಸರಪಟ್ಟುಕೊಳ್ಳಲಾರೆ. ನಿನ್ನ ಜನರಿಂದ ಮಕ್ಕಳನ್ನು ಕಿತ್ತುಕೊಳ್ಳಲಾರೆ.” ಇದು ನನ್ನ ಒಡೆಯನಾದ ಯೆಹೋವನ ನುಡಿ.


ನಾನು ಅವರಿಗೆ ಭೂಮಿಯನ್ನು ಕೊಡುವೆನು. ಅದರಲ್ಲಿ ಅವರು ತೋಟವನ್ನು ಮಾಡುವರು. ಆ ನಾಡಿನಲ್ಲಿ ಅವರು ಇನ್ನೆಂದಿಗೂ ಹಸಿವೆಯಿಂದ ಸಂಕಟಪಡುವುದಿಲ್ಲ. ಇತರ ಜನಾಂಗದವರಿಂದ ಇನ್ನು ಮುಂದೆ ಅವಮಾನ ಹೊಂದುವುದಿಲ್ಲ.


“ನನ್ನ ಜೀವದಾಣೆ, ನನ್ನ ಕುರಿಗಳು ಎಲ್ಲಾ ಬಗೆಯ ಕಾಡುಪ್ರಾಣಿಗಳಿಂದ ಹಿಡಿಯಲ್ಪಟ್ಟು ಅವುಗಳಿಗೆ ಆಹಾರವಾದವು. ಯಾಕೆಂದರೆ ಅವುಗಳಿಗೆ ಒಳ್ಳೆಯ ಕುರುಬರಿರಲಿಲ್ಲ. ನನ್ನ ಕುರುಬರು ತಮ್ಮ ಕುರಿಗಳಿಗೆ ಗಮನಕೊಡಲಿಲ್ಲ. ಅವರು ಅವುಗಳನ್ನು ಕೊಂದು ತಿಂದರು. ಆದರೆ ಮಂದೆಗೆ ಆಹಾರ ಒದಗಿಸಲಿಲ್ಲ.”


ಆದ್ದರಿಂದ ಇಸ್ರೇಲಿನ ಪರ್ವತಗಳೇ, ನನ್ನ ಒಡೆಯನಾದ ಯೆಹೋವನ ಮಾತುಗಳಿಗೆ ಕಿವಿಗೊಡಿರಿ! ನನ್ನ ಒಡೆಯನಾದ ಯೆಹೋವನು ಬೆಟ್ಟಗುಡ್ಡಗಳಿಗೂ ತೊರೆಗಳಿಗೂ ಕಣಿವೆಗಳಿಗೂ ಪಾಳುಬಿದ್ದ ಸ್ಥಳಗಳಿಗೂ ಮತ್ತು ಅನ್ಯಜನರಿಂದ ಕೊಳ್ಳೆಹೊಡೆಯಲ್ಪಟ್ಟು ಅಪಹ್ಯಾಸಕ್ಕೆ ಒಳಗಾಗಿ ನಿರ್ಜನವಾಗಿರುವ ಪಟ್ಟಣಗಳಿಗೂ ಹೀಗೆನ್ನುತ್ತಾನೆ:


“ನಾನು ನನ್ನ ಕುರಿಗಳೊಂದಿಗೆ ಸಮಾಧಾನದ ಒಡಂಬಡಿಕೆಯನ್ನು ಮಾಡುವೆನು. ಕೆಟ್ಟ ಕುರಿಗಳನ್ನು ನಾನು ದೇಶದೊಳಗಿಂದ ತೆಗೆದುಬಿಡುವೆನು. ಆಮೇಲೆ ನನ್ನ ಕುರಿಗಳು ಅಡವಿಯಲ್ಲಿ ಸುರಕ್ಷಿತವಾಗಿದ್ದು ಕಾಡುಗಳಲ್ಲಿ ಮಲಗಿಕೊಳ್ಳುವವು.


‘ಇಸ್ರೇಲರನ್ನು ಮತ್ತು ಯೆಹೂದ್ಯರನ್ನು ತಮ್ಮ ಪ್ರದೇಶವನ್ನು ಬಿಟ್ಟುಹೋಗಲು ನಾನು ಒತ್ತಾಯಿಸಿದ್ದೇನೆ. ನಾನು ಅವರ ಮೇಲೆ ತುಂಬ ಕೋಪಗೊಂಡಿದ್ದೆ. ಆದರೆ ನಾನು ಅವರನ್ನು ಈ ಸ್ಥಳಕ್ಕೆ ಹಿಂದಿರುಗಿಸುವೆನು. ನಾನು ಒತ್ತಾಯಿಸಿ ಅವರನ್ನು ಅಟ್ಟಿದ ಸ್ಥಳಗಳಿಂದ ಅವರನ್ನು ಒಟ್ಟುಗೂಡಿಸುವೆನು. ಅವರನ್ನು ಪುನಃ ಈ ಸ್ಥಳಕ್ಕೆ ಕರೆತರುವೆನು. ಅವರು ನೆಮ್ಮದಿಯಿಂದ ಮತ್ತು ಸುರಕ್ಷಿತವಾಗಿ ಇರುವಂತೆ ಮಾಡುವೆನು.


“‘ಈಗ ಆ ಮಂದೆಯು ಚದರಿಹೋಗಿದೆ. ಯಾಕೆಂದರೆ ಅವುಗಳಿಗೆ ಕುರುಬರಿಲ್ಲ. ಅವುಗಳು ಕಾಡುಪ್ರಾಣಿಗಳಿಗೆ ಆಹಾರವಾದವು. ಆದ್ದರಿಂದ ಅವು ಚದರಿಹೋದವು.


ಈಜಿಪ್ಟಿನಿಂದ ಅವರು ಪಕ್ಷಿಗಳಂತೆ ನಡುಗುತ್ತಾ ಬರುವರು. ಅಶ್ಶೂರದಿಂದ ನಡುಗುವ ಪಾರಿವಾಳಗಳ ರೀತಿಯಲ್ಲಿ ಬರುವರು. ಆಗ ನಾನು ಅವರನ್ನು ಮನೆಗೆ ಕರೆದುಕೊಂಡು ಹೋಗುವೆನು. ಇದು ಯೆಹೋವನ ನುಡಿ.


ನಾನು ನನ್ನ ಜನರನ್ನು ಅವರ ದೇಶದಲ್ಲಿ ಸ್ಥಾಪಿಸುವೆನು. ನಾನು ಕೊಟ್ಟಿರುವ ದೇಶದಿಂದ ಅವರು ಕೀಳಲ್ಪಡುವುದಿಲ್ಲ.” ನಿಮ್ಮ ದೇವರಾದ ಯೆಹೋವನು ಈ ಸಂಗತಿಗಳನ್ನು ಹೇಳಿದ್ದಾನೆ.


ಆಗ ನೀನು ಮಲಗಿ ವಿಶ್ರಮಿಸಿಕೊಳ್ಳುವೆ; ಯಾರೂ ನಿನಗೆ ಭಯ ಹುಟ್ಟಿಸುವುದಿಲ್ಲ. ಅನೇಕರು ನಿನ್ನ ಸಹಾಯಕ್ಕಾಗಿಯೇ ಕೇಳಿಕೊಳ್ಳುವರು.


ನನ್ನ ಜನರು ಮನೋಹರವಾಗಿರುವ ಶಾಂತಿಮಯವಾದ ಭೂಮಿಯಲ್ಲಿಯೂ ಸುರಕ್ಷಿತವಾದ ಗುಡಾರಗಳಲ್ಲಿಯೂ ಪ್ರಶಾಂತವಾದ ಮತ್ತು ನಿಶಬ್ದವಾದ ಸ್ಥಳಗಳಲ್ಲಿಯೂ ವಾಸಿಸುವರು.


ಇಸ್ರೇಲಿನಲ್ಲಿ ಉಳಿದವರು ದುಷ್ಕೃತ್ಯಗಳನ್ನು ಮಾಡುವುದಿಲ್ಲ. ಸುಳ್ಳು ಹೇಳುವದಿಲ್ಲ. ಜನರನ್ನು ಮೋಸಗೊಳಿಸುವದಿಲ್ಲ. ಅವರು ಕುರಿಗಳಂತೆ ಮೇದು ವಿಶ್ರಾಂತಿ ತೆಗೆದುಕೊಳ್ಳುವರು. ಯಾರೂ ಅವರ ಗೊಡವೆಗೆ ಹೋಗುವುದಿಲ್ಲ.”


“ಈ ಜನರು ನೆಮ್ಮದಿಯಿಂದ ಭೂಮಿಯ ಮೇಲೆ ನಡೆಯುವರು. ಅವರ ದ್ರಾಕ್ಷಾಲತೆಗಳು ದ್ರಾಕ್ಷಿಹಣ್ಣನ್ನು ಕೊಡುವವು. ದೇಶವು ಸಮೃದ್ಧಿಯಾದ ಬೆಳೆಯನ್ನು ಕೊಡುವದು. ಆಕಾಶವು ಮಳೆಯನ್ನು ಸುರಿಸುವದು. ಇವೆಲ್ಲವನ್ನು ನಾನು ನನ್ನ ಜನರಿಗೆ ಕೊಡುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು