Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 32:2 - ಪರಿಶುದ್ದ ಬೈಬಲ್‌

2 “ನರಪುತ್ರನೇ, ಈಜಿಪ್ಟಿನ ರಾಜನಾದ ಫರೋಹನಿಗೆ ಈ ಶೋಕಗೀತೆಯನ್ನು ಹಾಡು. ಅವನಿಗೆ ಹೀಗೆ ಹೇಳು: “‘ಜನಾಂಗಗಳ ಮಧ್ಯೆ ಹೆಮ್ಮೆಯಿಂದ ನಡೆದಾಡುತ್ತಿರುವ ಮೃಗರಾಜನಂತೆ ನೀನಿರುವೆ ಎಂದು ನೀನು ಭಾವಿಸಿದ್ದೆ. ಆದರೆ ನಿಜವಾಗಿಯೂ ನೀನು ಸರೋವರದಲ್ಲಿರುವ ಪೇರ್ಮೊಸಳೆಯಾಗಿರುವೆ. ನೀರಿನ ಹೊಳೆಗಳಲ್ಲಿ ನೀನು ನಿನ್ನ ದಾರಿಯನ್ನು ಮಾಡುವೆ. ನಿನ್ನ ಕಾಲುಗಳಿಂದ ಆ ನೀರನ್ನು ನೀನು ಕೆಸರಾಗಿ ಮಾಡುವೆ. ನೀನು ಈಜಿಪ್ಟಿನ ಹೊಳೆಗಳನ್ನು ಕದಡಿಸುವೆ.’”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 “ನರಪುತ್ರನೇ, ನೀನು ಐಗುಪ್ತದ ಅರಸನಾದ ಫರೋಹನ ವಿಷಯವಾಗಿ ಶೋಕ ಗೀತೆಯನ್ನು ಹಾಡಿ ಅವನಿಗೆ ಹೀಗೆ ನುಡಿ, ‘ನೀನು ಜನಾಂಗಗಳಲ್ಲಿ ಸಿಂಹದ ಮರಿಗೆ ಸಮನಾಗಿರುವೆ ಮತ್ತು ಸಮುದ್ರಗಳಲ್ಲಿರುವ ತಿಮಿಂಗಿಲದ ಹಾಗಿರುವೆ. ನೀನಿದ್ದ ನದಿಗಳನ್ನು ಭೇದಿಸಿಕೊಂಡು ಬಂದು, ನೀರನ್ನು ನಿನ್ನ ಕಾಲುಗಳಿಂದ ಕಲಕಿ, ಜನಾಂಗಗಳ ಹೊಳೆಗಳನ್ನೂ ತುಳಿದು ಬದಿಮಾಡಿದೆ.’”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 “ನರಪುತ್ರನೇ, ನೀನು ಈಜಿಪ್ಟಿನ ಅರಸ ಫರೋಹನನ್ನು ಕುರಿತು ಶೋಕಗೀತೆಯೊಂದನ್ನು ನುಡಿ : “ನೀನು ಮೃಗರಾಜನೆನಿಸಿಕೊಂಡಿರುವೆ ಜನಾಂಗಗಳಲ್ಲಿ, ಇಗೋ ದೊಡ್ಡ ಮೊಸಳೆಯಾಗಿಬಿಟ್ಟಿರುವೆ ಮಹಾನದಿಯಲ್ಲಿ. ನೀನಿದ್ದ ನದಿಗಳ ಭೇದಿಸಿಕೊಂಡು ಬಂದು, ಕಾಲಿಂದ ನೀ ಕಲಕಿರುವೆ ಅದರ ನೀರನ್ನು, ತುಳಿದು ಬದಿಮಾಡಿರುವೆ ಜನಾಂಗವೆಂಬ ಹೊಳೆಯನ್ನು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ನರಪುತ್ರನೇ, ನೀನು ಐಗುಪ್ತದ ಅರಸನಾದ ಫರೋಹನ ವಿಷಯವಾಗಿ ಶೋಕಗೀತವನ್ನೆತ್ತಿ ಅವನಿಗೆ ಹೀಗೆ ನುಡಿ - ನೀನು ಜನಾಂಗಗಳಲ್ಲಿ ಮೃಗರಾಜನೆನಿಸಿಕೊಂಡಿದ್ದಿ; ಇಗೋ ಮಹಾನದಿಯಲ್ಲಿನ ಪೇರ್ಮೊಸಳೆಯಾಗಿಬಿಟ್ಟಿ; ನೀನಿದ್ದ ನದಿಗಳನ್ನು ಭೇದಿಸಿಕೊಂಡು ಬಂದು ನೀರನ್ನು ನಿನ್ನ ಕಾಲುಗಳಿಂದ ಕಲಕಿ ಜನಾಂಗಗಳ ಹೊಳೆಗಳನ್ನೂ ತುಳಿದು ಬದಿಮಾಡಿದಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 “ಮನುಷ್ಯಪುತ್ರನೇ, ಈಜಿಪ್ಟಿನ ಅರಸನಾದ ಫರೋಹನ ವಿಷಯವಾಗಿ ಪ್ರಲಾಪವನ್ನೆತ್ತಿ ಅವನಿಗೆ ಹೇಳಬೇಕಾದದ್ದೇನೆಂದರೆ: “ ‘ನೀನು ಜನಾಂಗಗಳಲ್ಲಿ ಸಿಂಹದ ಮರಿಗೆ ಸಮನಾಗಿರುವೆ, ಮತ್ತು ಸಮುದ್ರಗಳಲ್ಲಿರುವ ತಿಮಿಂಗಿಲದ ಹಾಗಿರುವೆ. ನೀನಿದ್ದ ನದಿಗಳನ್ನು ಭೇದಿಸಿಕೊಂಡು ಬಂದು ನೀರನ್ನು ನಿನ್ನ ಕಾಲುಗಳಿಂದ ಕಲಕಿ ಹೊಳೆಗಳನ್ನು ತುಳಿದು ಬದಿಮಾಡಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 32:2
27 ತಿಳಿವುಗಳ ಹೋಲಿಕೆ  

‘ನನ್ನ ಒಡೆಯನಾದ ಯೆಹೋವನು ಹೀಗೆ ಹೇಳಿದ್ದಾನೆ ಎಂದು ಅವರಿಗೆ ತಿಳಿಸು, “‘ಈಜಿಪ್ಟಿನ ರಾಜನಾದ ಫರೋಹನೇ, ನಾನು ನಿನಗೆ ವಿರುದ್ಧವಾಗಿದ್ದೇನೆ. ನೀನು ನೈಲ್ ನದಿಯ ದಡದಲ್ಲಿ ಮಲಗಿರುವ ಪೇರ್ಮೊಸಳೆ, “ಇದು ನಾನು ನಿರ್ಮಿಸಿದ ಹೊಳೆ” ಎಂದು ನೀನು ಹೇಳಿಕೊಳ್ಳುವೆ.


“ನರಪುತ್ರನೇ, ತೂರಿನ ವಿಷಯವಾದ ಶೋಕಗೀತೆಯನ್ನು ಹಾಡು.


“ಶೆಬ, ದೆದಾನ್, ತಾರ್ಷೀಷಿನ ವ್ಯಾಪಾರಿಗಳು ಮತ್ತು ಇತರ ವಾಣಿಜ್ಯ ನಗರಗಳ ಜನರು ನಿನ್ನನ್ನು ನೋಡಿ, ‘ನೀನು ಸೂರೆಮಾಡಲು ಬಂದಿರುವಿಯಾ? ಬೆಳ್ಳಿಬಂಗಾರಗಳನ್ನೂ ಪಶುಗಳನ್ನೂ ಬೆಲೆಬಾಳುವ ವಸ್ತುಗಳನ್ನೂ ಕೊಳ್ಳೆಹೊಡೆಯಲು ನಿನ್ನ ಸೈನ್ಯಸಮೇತವಾಗಿ ಬಂದಿರುವೆಯಾ?’” ಎಂದು ವಿಚಾರಿಸುವರು.


ನೀವು ಒಳ್ಳೆಯ ದೇಶದಲ್ಲಿ ಬೆಳೆಯುವ ಹುಲ್ಲನ್ನು ಮೇಯಬಹುದು. ಆದ್ದರಿಂದ ಬೇರೆ ಕುರಿಗಳು ಮೇಯಬೇಕಾದ ಹುಲ್ಲನ್ನು ನೀವು ಯಾಕೆ ತುಳಿದು ಹಾಳುಮಾಡುವಿರಿ? ನೀವು ಶುದ್ಧವಾದ ನೀರು ಬೇಕಾದಷ್ಟು ಕುಡಿಯಬಹುದು. ಆದರೆ ಬೇರೆ ಕುರಿಗಳು ನೀರು ಕುಡಿಯದಂತೆ ಯಾಕೆ ನೀರನ್ನು ಕದಡಿಸುತ್ತೀರಿ.


“ಜನರು ಈಜಿಪ್ಟಿನ ಬಗ್ಗೆ ಈ ಶೋಕಗೀತೆಯನ್ನು ಹಾಡುವರು. ಬೇರೆ ದೇಶಗಳಲ್ಲಿರುವ ಹೆಣ್ಣುಮಕ್ಕಳು ಈ ಶೋಕಗೀತೆಯನ್ನು ಹಾಡುವರು. ಅವರು ಈಜಿಪ್ಟ್ ಮತ್ತು ಅದರ ಎಲ್ಲಾ ಜನರ ಕುರಿತು ಈ ಶೋಕಗೀತೆಯನ್ನು ಹಾಡುವರು.” ನನ್ನ ಒಡೆಯನಾದ ಯೆಹೋವನ ನುಡಿಗಳಿವು.


“ನರಪುತ್ರನೇ, ತೂರ್ ದೇಶದ ರಾಜನಿಗೆ ಈ ಶೋಕಗೀತೆಯನ್ನು ಹಾಡು. ಅವನಿಗೆ ಹೀಗೆ ಹೇಳು: ‘ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದ್ದಾನೆ: “‘ನೀನೊಬ್ಬ ಆದರ್ಶ ಮನುಷ್ಯನಾಗಿದ್ದೆ. ಸರ್ವಾಂಗಸುಂದರನೂ ಜ್ಞಾನದಿಂದ ತುಂಬಿದವನೂ ಆಗಿದ್ದೆ.


ತನ್ನ ಗುಹೆಯಿಂದ ಒಂದು “ಸಿಂಹವು” ಹೊರಬಂದಿದೆ. ಜನಾಂಗಗಳ ವಿನಾಶಕವಾದ ಸಿಂಹವು ಹೆಜ್ಜೆ ಹಾಕುತ್ತಿದೆ. ಅದು ನಿಮ್ಮ ಪ್ರದೇಶವನ್ನು ನಾಶಮಾಡಲು ತನ್ನ ಗುಹೆಯನ್ನು ಬಿಟ್ಟು ಹೊರಟಿದೆ. ನಿಮ್ಮ ಪಟ್ಟಣಗಳೆಲ್ಲ ನಾಶಹೊಂದುವವು. ಅಲ್ಲಿ ವಾಸಿಸಲು ಜನರೇ ಇಲ್ಲದಂತಾಗುವುದು.


ಆ ಸಮಯದಲ್ಲಿ ಯೆಹೋವನು ವಂಚನೆಯ ಸರ್ಪವಾದ ಲಿವ್ಯಾತಾನನಿಗೆ ನ್ಯಾಯತೀರಿಸುವನು. ಯೆಹೋವನು ಕಠಿಣವೂ ಮಹತ್ವವೂ ಬಲವೂ ಆಗಿರುವ ತನ್ನ ಖಡ್ಗದಿಂದ ಸುತ್ತಿಕೊಂಡಿರುವ ಸರ್ಪವಾದ ಲಿವ್ಯಾತಾನನನ್ನು ಕೊಲ್ಲುವನು. ಯೆಹೋವನು ಸಮುದ್ರದಲ್ಲಿರುವ ಘಟಸರ್ಪವನ್ನು ಕೊಲ್ಲುವನು.


“ನರಪುತ್ರನೇ, ಈಜಿಪ್ಟಿನ ಜನರಿಗಾಗಿ ಗೋಳಾಡು. ಪಾತಾಳಕ್ಕೆ ಇಳಿದುಹೋಗಿರುವ ಇತರ ಎಲ್ಲರೊಡನೆ ಇರುವದಕ್ಕಾಗಿ ಈಜಿಪ್ಟನ್ನು ಮತ್ತು ಇತರ ಜನಾಂಗಗಳ ಉಳಿದ ಪಟ್ಟಣಗಳನ್ನು ಸಮಾಧಿಗೆ ಕಳುಹಿಸು.


“‘ಅಳುತ್ತಾ ನಿನಗೆ ಈ ಶೋಕಗೀತೆಯನ್ನು ಹಾಡುವರು: “‘ತೂರಿನಂತೆ ಯಾರಿಲ್ಲ. ಆದರೆ ತೂರ್ ಹಾಳಾಗಿಹೋಯಿತು, ಸಮುದ್ರ ಮಧ್ಯದಲ್ಲಿ ನಾಶವಾಯಿತು.


ಭೋರ್ಗರೆಯುವ ನೈಲ್ ನದಿಯಂತೆ ಈಜಿಪ್ಟ್ ಬರುತ್ತಿದೆ. ಬಲಿಷ್ಠವಾಗಿಯೂ ಮತ್ತು ರಭಸವಾಗಿಯೂ ಹರಿಯುವ ನದಿಯಂತೆ ಬರುತ್ತಿದೆ. ‘ನಾನು ಬಂದು ಭೂಮಿಯ ಮೇಲೆಲ್ಲ ವ್ಯಾಪಿಸಿಕೊಳ್ಳುವೆನು. ನಾನು ನಗರಗಳನ್ನೂ ಅಲ್ಲಿದ್ದ ಜನರನ್ನೂ ನಾಶಮಾಡುವೆನು’ ಎಂದು ಈಜಿಪ್ಟ್ ಹೇಳುತ್ತಿದೆ.


‘ಆ ಹೆಂಗಸರು, ಬೇಗನೆ ಬಂದು ನಮಗಾಗಿ ಗೋಳಾಡಲಿ. ಆಗ ನಮ್ಮ ಕಣ್ಣುಗಳು ಕಣ್ಣೀರಿನಿಂದ ತುಂಬುವವು; ನಮ್ಮ ಕಣ್ಣುಗಳಿಂದ ನೀರಿನ ಪ್ರವಾಹಗಳು ಹರಿಯುವವು’ ಎನ್ನುವರು.


ಯೆಹೋವನ ಭುಜಬಲವೇ, ಎಚ್ಚರಗೊಳ್ಳು ಎಚ್ಚರಗೊಳ್ಳು, ಬಲವನ್ನು ಹೊಂದಿಕೊ! ಪುರಾತನ ಕಾಲದಲ್ಲಿ ಮಾಡಿದಂತೆಯೇ ನಿನ್ನ ಶಕ್ತಿಯನ್ನು ತೋರು. ನಿನ್ನ ಶಕ್ತಿಯಿಂದ ನೀನು ರಹಬನ್ನು ಸೋಲಿಸಿರುವೆ. ದೈತ್ಯಾಕಾರದ ಮೃಗವನ್ನು ಸೋಲಿಸಿರುವೆ.


ಬಲಹೀನರನ್ನು ಆಳುವ ಕೆಡುಕನು ಗರ್ಜಿಸುವ ಸಿಂಹದಂತಿರುವನು; ಮೇಲೆರಗಲಿರುವ ಕರಡಿಯಂತಿರುವನು.


ಅವರು ಅಡಗಿಕೊಂಡಿರುವರು; ಇಸ್ರೇಲರು ಸಿಂಹದಂತೆಯೂ ಹೆಣ್ಣು ಸಿಂಹದಂತೆಯೂ ವಿಶ್ರಮಿಸುವರು. ಅದನ್ನು ಎಬ್ಬಿಸಲು ಯಾರಿಗೆ ಧೈರ್ಯವಿದೆ? ನಿಮ್ಮನ್ನು ಆಶೀರ್ವದಿಸುವವನು ಆಶೀರ್ವದಿಸಲ್ಪಡುವನು. ನಿಮ್ಮನ್ನು ಶಪಿಸುವವನು ಶಪಿಸಲ್ಪಡುವನು.”


ಯೆಹೂದನು ಪ್ರಾಣಿಯನ್ನು ಕೊಂದ ಪ್ರಾಯದ ಸಿಂಹದಂತಿದ್ದಾನೆ. ಮಗನೇ, ನೀನು ಸಿಂಹದಂತೆ ಬೇಟೆಗಾಗಿ ಹೊಂಚುಹಾಕಿ ನಿಂತಿರುವೆ. ಯೆಹೂದನು ಸಿಂಹದಂತಿರುವನು. ಅವನು ಮಲಗಿ ವಿಶ್ರಮಿಸಿಕೊಳ್ಳುವನು; ಅವನನ್ನು ಕೆಣಕಲು ಯಾರಿಗೂ ಧೈರ್ಯವಿಲ್ಲ.


“ನನ್ನ ಈ ಮಾತುಗಳನ್ನು ಕೇಳಿ ಅವುಗಳಿಗೆ ವಿಧೇಯನಾಗಿರುವ ಪ್ರತಿಯೊಬ್ಬನೂ ತನ್ನ ಮನೆಯನ್ನು ಬಂಡೆಯ ಮೇಲೆ ಕಟ್ಟಿದ ಬುದ್ಧಿವಂತನಿಗೆ ಹೋಲಿಕೆಯಾಗಿದ್ದಾನೆ.


ದೇವರೇ, ನೀನು ನನ್ನನ್ನು ಕಾಯುವುದೇಕೆ? ನಾನೇನು ಸಮುದ್ರವೇ? ಭಯಂಕರವಾದ ಸಮುದ್ರ ಪ್ರಾಣಿಯೇ?


ದುಷ್ಟನು ಒಳ್ಳೆಯವನಿಗೆ ಆಪತ್ತನ್ನು ಬರಮಾಡಿದರೆ, ಅದು ಚಿಲುಮೆಗೆ ಮಣ್ಣುಹಾಕಿದಂತೆಯೂ ಒರತೆಯನ್ನು ಹೊಲಸು ಮಾಡಿದಂತೆಯೂ ಇದೆ.


ನೈಲ್ ನದಿಯಂತೆ ಯಾರು ಬರುತ್ತಿರುವರು? ಶಕ್ತಿಶಾಲಿಯಾದ ಮತ್ತು ರಭಸದಿಂದ ಹರಿಯುವ ನದಿಯಂತೆ ಯಾರು ಬರುತ್ತಿರುವರು?


ಅವರು ನಿನ್ನ ಬಗ್ಗೆ ಈ ಶೋಕಗೀತೆಯನ್ನು ಹಾಡುವರು: “‘ತೂರ್, ನೀನು ಹೆಸರುವಾಸಿಯಾದ ನಗರವಾಗಿದ್ದೆ. ನಿನ್ನಲ್ಲಿ ವಾಸಮಾಡಲು ಜನರು ಸಮುದ್ರದಾಚೆಯಿಂದ ಬಂದರು. ನೀನು ಪ್ರಸಿದ್ಧಳಾಗಿದ್ದೆ, ಆದರೆ ನೀನೀಗ ಹೋಗಿಬಿಟ್ಟೆ. ದ್ವೀಪವಾಗಿರುವ ನೀನು ಮತ್ತು ನಿನ್ನಲ್ಲಿ ವಾಸವಾಗಿದ್ದ ಜನರು ಸಮುದ್ರದಿಂದ ದೂರದಲ್ಲಿರುವುದರಿಂದ ಬಲಿಷ್ಠರಾಗಿದ್ದೀರಿ. ಭೂಮಿಯ ಮೇಲೆ ವಾಸವಾಗಿದ್ದ ಎಲ್ಲಾ ಜನರನ್ನು ನೀವು ಭಯಗೊಳಿಸಿದಿರಿ.


ಅದು ಯಾವ ಮಹತ್ವವೂ ಇಲ್ಲದ ರಾಜ್ಯವಾಗಿರುವುದು. ಬೇರೆ ರಾಜ್ಯಗಳಿಗಿಂತ ಅದು ಎಂದಿಗೂ ಉನ್ನತಸ್ಥಾನದಲ್ಲಿರದು. ಅದು ಅಷ್ಟು ಚಿಕ್ಕ ರಾಜ್ಯವಾಗುವುದರಿಂದ ಬೇರೆ ದೇಶಗಳ ಮೇಲೆ ಅಧಿಕಾರ ನಡೆಸದು.


ಅದರ ಚರ್ಮದಲ್ಲಿ ಯಾವ ಬಲಹೀನತೆಯೂ ಇಲ್ಲ. ಅದು ಕಬ್ಬಿಣದಂತೆ ಗಟ್ಟಿಯಾಗಿದೆ.


ಸಿಂಹವು ಎಲ್ಲಾ ಪ್ರಾಣಿಗಳಲ್ಲಿ ಅತಿ ಬಲಿಷ್ಠವಾದದ್ದು; ಅದು ಯಾವುದಕ್ಕೂ ಭಯಪಡುವುದಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು