ಯೆಹೆಜ್ಕೇಲನು 30:21 - ಪರಿಶುದ್ದ ಬೈಬಲ್21 “ನರಪುತ್ರನೇ, ನಾನು ಈಜಿಪ್ಟಿನ ರಾಜನಾದ ಫರೋಹನ ಕೈಯ ಬಲವನ್ನು ಮುರಿದಿದ್ದೇನೆ. ಯಾರೂ ಅವನನ್ನು ಶೂಶ್ರೂಷೆ ಮಾಡಲಾರರು. ಅದು ಗುಣವಾಗದು. ಅವನ ಕೈಗೆ ಖಡ್ಗ ಹಿಡಿದುಕೊಳ್ಳುವಷ್ಟೂ ಬಲವಿರದು.” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201921 “ನರಪುತ್ರನೇ, ನಾನು ಐಗುಪ್ತದ ಅರಸನಾದ ಫರೋಹನ ಕೈಯನ್ನು ಮುರಿದುಬಿಟ್ಟಿದ್ದೇನೆ; ಇಗೋ, ಅದನ್ನು ಯಾರೂ ಕಟ್ಟಲಿಲ್ಲ, ಔಷಧ ಹಚ್ಚಲಿಲ್ಲ, ಅದು ಖಡ್ಗ ಹಿಡಿಯುವಷ್ಟು ಬಲಗೊಳ್ಳುವಂತೆ ಯಾರೂ ಬಟ್ಟೆ ಸುತ್ತಿ, ಅದನ್ನು ಬಿಗಿಸಲಿಲ್ಲ.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)21 “ನರಪುತ್ರನೇ, ನಾನು ಈಜಿಪ್ಟಿನ ಅರಸ ಫರೋಹನ ಕೈಯನ್ನು ಮುರಿದುಬಿಟ್ಟಿದ್ದೇನೆ; ಇಗೋ, ಅದನ್ನು ಯಾರೂ ಕಟ್ಟಲಿಲ್ಲ, ಔಷಧ ಹಚ್ಚಲಿಲ್ಲ. ಅದು ಖಡ್ಗ ಹಿಡಿಯುವಷ್ಟು ಬಲಗೊಳ್ಳುವಂತೆ ಯಾರೂ ಬಟ್ಟೆ ಸುತ್ತಿ ಅದನ್ನು ಬಿಗಿಸಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)21 ನರಪುತ್ರನೇ, ನಾನು ಐಗುಪ್ತದ ಅರಸನಾದ ಫರೋಹನ ಕೈಯನ್ನು ಮುರಿದುಬಿಟ್ಟಿದ್ದೇನೆ; ಇಗೋ, ಅದನ್ನು ಯಾರೂ ಕಟ್ಟಲಿಲ್ಲ, ಔಷಧ ಹಚ್ಚಲಿಲ್ಲ, ಅದು ಖಡ್ಗ ಹಿಡಿಯುವಷ್ಟು ಬಲಗೊಳ್ಳುವಂತೆ ಯಾರೂ ಬಟ್ಟೆಸುತ್ತಿ ಅದನ್ನು ಬಿಗಿಸಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ21 “ಮನುಷ್ಯಪುತ್ರನೇ, ನಾನು ಈಜಿಪ್ಟಿನ ಅರಸನಾದ ಫರೋಹನ ತೋಳನ್ನು ಮುರಿದು ಹಾಕಿದ್ದೇನೆ. ಇಗೋ, ಆ ದೇಶವನ್ನು ಯಾರೂ ಕಟ್ಟಲಿಲ್ಲ, ಔಷಧ ಹಚ್ಚಲಿಲ್ಲ. ಅದು ಖಡ್ಗ ಹಿಡಿಯುವಷ್ಟು ಬಲಗೊಳ್ಳುವಂತೆ ಯಾರೂ ಬಟ್ಟೆ ಸುತ್ತಿ ಅದನ್ನು ಬಿಗಿಸಲಿಲ್ಲ. ಅಧ್ಯಾಯವನ್ನು ನೋಡಿ |
ನಾನು ಹೇಳಿದಂತೆ ಮಾಡುವೆನೆಂಬುದಕ್ಕೆ ಪ್ರಮಾಣ ಇದು. ಯೆಹೋವನು ಹೀಗೆ ಹೇಳಿದನು: ‘ಫರೋಹ ಹೊಫ್ರನೆಂಬುವನು ಈಜಿಪ್ಟಿನ ರಾಜನಾಗಿದ್ದಾನೆ. ಅವನ ಶತ್ರುಗಳು ಅವನನ್ನು ಕೊಲ್ಲಬಯಸುತ್ತಾರೆ. ನಾನು ಫರೋಹ ಹೊಫ್ರನನ್ನು ಅವನ ಶತ್ರುಗಳಿಗೆ ಒಪ್ಪಿಸುತ್ತೇನೆ. ಚಿದ್ಕೀಯನು ಯೆಹೂದದ ರಾಜನಾಗಿದ್ದನು. ನೆಬೂಕದ್ನೆಚ್ಚರನು ಚಿದ್ಕೀಯನ ವೈರಿಯಾಗಿದ್ದನು. ನಾನು ಚಿದ್ಕೀಯನನ್ನು ಅವನ ಶತ್ರುವಿನ ಕೈಗೆ ಒಪ್ಪಿಸಿದೆ. ಅದೇ ರೀತಿ ನಾನು ಫರೋಹ ಹೊಫ್ರನನ್ನು ಅವನ ವೈರಿಯ ಕೈಗೆ ಒಪ್ಪಿಸುತ್ತೇನೆ.’”