Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 3:27 - ಪರಿಶುದ್ದ ಬೈಬಲ್‌

27 ಆದರೆ ನಾನು ನಿನ್ನೊಂದಿಗೆ ಮಾತನಾಡುವಾಗ, ನಿನ್ನನ್ನು ಮಾತನಾಡಲಾಗುವಂತೆ ಮಾಡುವೆನು. ಆಗ ನೀನು ಅವರಿಗೆ, ‘ನಮ್ಮ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ’ ಎಂದು ಹೇಳಬೇಕು. ಕೆಲವರು ಕಿವಿಗೊಡುವರು; ಕೆಲವರು ಕಿವಿಗೊಡರು; ಯಾಕೆಂದರೆ ಅವರು ಯಾವಾಗಲೂ ನನಗೆ ವಿರುದ್ಧವಾಗಿಯೇ ಇರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ನಾನು ನಿನ್ನೊಡನೆ ಮತ್ತೆ ಮಾತನಾಡುವಾಗ ನಾನು ನಿನ್ನ ಬಾಯಿಯನ್ನು ಬಿಚ್ಚುವೆನು; ಆಗ ನೀನು ಅವರಿಗೆ, ‘ಕರ್ತನಾದ ಯೆಹೋವನು ಇಂತೆನ್ನುತ್ತಾನೆ’ ಎಂದು ಹೇಳಬೇಕು; ಕೇಳುವವನು ಕೇಳಲಿ, ಕೇಳದವನು ಕೇಳದೇ ಇರಲಿ; ಅವರು ತಿರುಗಿ ಬೀಳುವ ವಂಶದವರೇ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

27 ನಾನು ನಿನ್ನೊಡನೆ ಮತ್ತೆ ಮಾತಾಡುವಾಗ ನಿನ್ನ ಬಾಯನ್ನು ಬಿಚ್ಚುವೆನು; ಆಗ ನೀನು ಅವರಿಗೆ, ‘ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ’ ಎಂದು ನುಡಿಯಬೇಕು; ಕೇಳುವವನು ಕೇಳಲಿ, ಕೇಳದವನು ಬಿಡಲಿ; ಏಕೆಂದರೆ ಅವರು ದ್ರೋಹಿವಂಶದವರೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ನಾನು ನಿನ್ನೊಡನೆ ಮತ್ತೆ ಮಾತಾಡುವ ಕಾಲದಲ್ಲಿ ನಿನ್ನ ಬಾಯನ್ನು ಬಿಚ್ಚುವೆನು; ಆಗ ನೀನು ಅವರಿಗೆ - ಕರ್ತನಾದ ಯೆಹೋವನು ಇಂತೆನ್ನುತ್ತಾನೆ ಎಂದು ನುಡಿಯಬೇಕು; ಕೇಳುವವನು ಕೇಳಲಿ. ಕೇಳದವನು ಬಿಡಲಿ; ಅವರು ದ್ರೋಹದ ಜನವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

27 ಆದರೆ ನಾನು ನಿನ್ನ ಸಂಗಡ ಮಾತನಾಡುವಾಗ ನಾನು ನಿನ್ನ ಬಾಯನ್ನು ತೆರೆಯುವೆನು. ಆಗ ನೀನು ಅವರಿಗೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ.’ ಕೇಳುವವನು ಕೇಳಲಿ, ಕೇಳದವನು ಕೇಳದೇ ಇರಲಿ. ಏಕೆಂದರೆ ಅವರು ತಿರುಗಿಬೀಳುವ ಜನರಾಗಿದ್ದಾರೆಂದು ಹೇಳಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 3:27
17 ತಿಳಿವುಗಳ ಹೋಲಿಕೆ  

ಆ ಸಮಯದಲ್ಲಿ ನಿನಗೆ ಆ ಮನುಷ್ಯನೊಂದಿಗೆ ಮಾತನಾಡಲಾಗುವುದು. ನೀನು ಆಮೇಲೆ ಎಂದಿಗೂ ಮೌನವಾಗಿರುವುದಿಲ್ಲ. ಈ ರೀತಿಯಾಗಿ ನೀನು ಅವರಿಗೆ ಒಂದು ಮಾದರಿಯಾಗುವೆ. ನಾನು ಯೆಹೋವನೆಂದು ಆಗ ಅವರು ತಿಳಿಯುವರು.”


ಬಳಿಕ ಸೆರೆವಾಸದಲ್ಲಿರುವ ನಿನ್ನ ಸ್ವಜನರ ಬಳಿಗೆ ಹೋಗು. ಅವರು ಕೇಳಲಿ, ಕೇಳದಿರಲಿ, ನೀನು ಅವರಿಗೆ, ‘ದೇವರಾದ ಯೆಹೋವನು ಹೀಗೆ ಹೇಳುತ್ತಾನೆ’” ಎಂದು ಹೇಳು.


“ಆ ದಿವಸದಲ್ಲಿ ಇಸ್ರೇಲ್ ವಂಶವನ್ನು ನಾನು ಬಲಪಡಿಸುವೆನು. ಯೆಹೆಜ್ಕೇಲನೇ, ನೀನು ಅವರೊಂದಿಗೆ ಮಾತನಾಡುವಂತೆ ಮಾಡುವೆನು. ಆಗ ಅವರು ನಾನೇ ಯೆಹೋವನೆಂದು ತಿಳಿದುಕೊಳ್ಳುವರು.”


ಅಲ್ಲದೆ ನನಗಾಗಿಯೂ ಪ್ರಾರ್ಥಿಸಿರಿ. ನಾನು ಮಾತಾಡುವಾಗ ಸುವಾರ್ತೆಯ ರಹಸ್ಯಸತ್ಯವನ್ನು ನಿರ್ಭಯದಿಂದ ತಿಳಿಸಲು ಬೇಕಾದ ಮಾತನ್ನು ದೇವರು ನನಗೆ ಅನುಗ್ರಹಿಸುವಂತೆ ಪ್ರಾರ್ಥಿಸಿರಿ.


ಏಕೆಂದರೆ ನಾನೇ ನಿಮಗೆ ಜ್ಞಾನವನ್ನು ಕೊಡುತ್ತೇನೆ. ಆದ್ದರಿಂದ ನಿಮ್ಮ ವೈರಿಗಳಲ್ಲಿ ಯಾರೂ ನಿಮ್ಮ ಮಾತಿಗೆ ಪ್ರತ್ಯುತ್ತರವನ್ನು ಕೊಡಲು ಸಾಧ್ಯವಿಲ್ಲ.


ನನಗೆ ಕಿವಿಗೊಡುವ ಜನರೇ, ಲಾಲಿಸಿರಿ!”


ಜನರೇ, ನಾನು ಹೇಳುವುದನ್ನು ಕೇಳಿರಿ. ಆಲಿಸಿರಿ!


“‘ನೀನು ಅವರಿಗೆ ಏನೂ ಅಲ್ಲ. ಒಬ್ಬ ಪ್ರೇಮಗೀತೆಯನ್ನು ಹಾಡುವ ಹಾಡುಗಾರ. ನಿನಗೆ ಮಧುರವಾದ ಕಂಠವಿದೆ. ನೀನು ವಾದ್ಯವನ್ನು ಚೆನ್ನಾಗಿ ಬಾರಿಸುವಿ. ಅವರು ನಿನ್ನ ಮಾತುಗಳನ್ನು ಕೇಳಿದರೂ ನೀನು ಹೇಳಿದಂತೆ ಮಾಡುವದಿಲ್ಲ.


ಅವನು ಬರುವ ಹಿಂದಿನ ದಿವಸದ ಸಾಯಂಕಾಲ ನನ್ನ ಒಡೆಯನಾದ ಯೆಹೋವನ ಆತ್ಮನಿಂದ ಪರವಶನಾದೆನು. ದೇವರು ನನ್ನನ್ನು ಮಾತನಾಡದಂತೆ ಮಾಡಿದ್ದನು. ಆ ಸಮಯದಲ್ಲಿ ಆ ಮನುಷ್ಯನು ನನ್ನ ಬಳಿಗೆ ಬಂದನು. ಆಗ ದೇವರು ನನ್ನ ಬಾಯನ್ನು ತೆರೆದು ನಾನು ಮಾತನಾಡುವಂತೆ ಮಾಡಿದನು.


ನನ್ನೊಂದಿಗೆ ಸೆರೆವಾಸದಲ್ಲಿದ್ದ ಜನರಿಗೆ, ಯೆಹೋವನು ನನಗೆ ತೋರಿಸಿದ ಎಲ್ಲಾ ಸಂಗತಿಗಳ ಬಗ್ಗೆ ಹೇಳಿದೆನು.


ನಿನ್ನ ನಾಲಿಗೆಯು ಸೇದಿ ಹೋಗುವಂತೆ ಮಾಡುವೆನು. ನಿನಗೆ ಮಾತನಾಡಲು ಆಗದು. ಆದ್ದರಿಂದ ಅವರನ್ನು ಖಂಡಿಸಲು ಯಾರೂ ಇರುವದಿಲ್ಲ. ಯಾಕೆಂದರೆ ಆ ಜನರು ಯಾವಾಗಲೂ ನನ್ನ ವಿರುದ್ಧವಾಗಿ ವರ್ತಿಸುವರು.


ವಜ್ರವು ಬಂಡೆಕಲ್ಲಿಗಿಂತ ಗಟ್ಟಿಯಾದ ವಸ್ತು. ಅದೇ ಪ್ರಕಾರ ನಿನ್ನ ತಲೆ ಅವರ ತಲೆಗಿಂತ ಗಟ್ಟಿಯಾಗಿರುವುದು. ಆ ಜನರಿಗೆ ಭಯಪಡಬೇಡ. ಅವರು ದಂಗೆಕೋರರಾಗಿದ್ದರೂ ಅವರ ಸಮ್ಮುಖದಲ್ಲಿ ಭಯಪಡಬೇಡ.”


ಜನರು ನಿನ್ನ ಮಾತನ್ನು ಕೇಳಬಹುದು ಅಥವಾ ಕೇಳದಿರಬಹುದು: ಯಾಕೆಂದರೆ ಅವರು ದಂಗೆಕೋರರಾಗಿದ್ದಾರೆ. ನನ್ನ ಮುಂದೆ ಪಾಪಮಾಡುವುದನ್ನು ನಿಲ್ಲಿಸಲಿಲ್ಲ. ಅವರು ಯಾವಾಗಲೂ ನನ್ನ ವಿರುದ್ಧ ದಂಗೆ ಏಳುವರು. ಆದ್ದರಿಂದ ನಾನು ತಿಳಿಸಿದ್ದನ್ನೆ ನೀನು ಹೇಳಬೇಕು. ಆಗ ಅವರು ತಮ್ಮ ಮಧ್ಯೆ ಒಬ್ಬ ಪ್ರವಾದಿ ಇದ್ದಾನೆಂದು ಗ್ರಹಿಸಿಕೊಳ್ಳುವರು.


ಆ ಜನರೊಂದಿಗೆ ಮಾತನಾಡಲು ನಾನು ನಿನ್ನನ್ನು ಕಳುಹಿಸುತ್ತಿದ್ದೇನೆ. ಅವರು ಬಹಳವಾಗಿ ಪ್ರತಿಭಟಿಸುವವರೂ ಮೊಂಡರೂ ಆಗಿದ್ದಾರೆ. ಆದರೆ ನೀನು ಅವರೊಂದಿಗೆ ಮಾತಾಡಿ, ‘ನಮ್ಮ ಒಡೆಯನಾದ ಯೆಹೋವನು ಇದನ್ನು ಹೇಳಿದ್ದಾನೆ’ ಎಂದು ಹೇಳಬೇಕು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು