ಯೆಹೆಜ್ಕೇಲನು 29:7 - ಪರಿಶುದ್ದ ಬೈಬಲ್7 ಇಸ್ರೇಲ್ ಜನರು ಈಜಿಪ್ಟಿನ ಮೇಲೆ ಆತುಕೊಂಡರು. ಆದರೆ ಈಜಿಪ್ಟ್ ಅವರ ಕೈಗಳನ್ನೂ ಭುಜಗಳನ್ನೂ ಗಾಯಗೊಳಿಸಿತು. ನಿನ್ನ ಸಹಾಯಕ್ಕಾಗಿ ಅವರು ನಿನ್ನನ್ನು ಆಶ್ರಯಿಸಿದರು. ಆದರೆ ನೀನು ಅವರ ಬೆನ್ನೆಲುಬನ್ನು ತಿರುಗಿಸಿ ಮುರಿದುಬಿಟ್ಟೆ.’” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20197 ಇಸ್ರಾಯೇಲರು ನಿನ್ನ ಮೇಲೆ ಕೈಯಿಡಲು, ನೀನು ಮುರಿದು ಅವರೆಲ್ಲರ ಹೆಗಲನ್ನು ಚುಚ್ಚಿದೆ; ಅವರು ನಿನ್ನ ಮೇಲೆ ಆತುಕೊಳ್ಳುವಾಗ, ನೀನು ಅವರನ್ನು ಒಡೆದು, ಅವರ ಕಾಲುಗಳಿಗೆ ಮತ್ತು ನಡುವಿಗೆ ನಡುಕವನ್ನು ಉಂಟುಮಾಡಿದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)7 ಈಜಿಪ್ಟೇ, ಇಸ್ರಯೇಲರು ನಿನ್ನ ಮೇಲೆ ಕೈಯಿಡಲು, ನೀನು ಅವರನ್ನು ಮುರಿದು ಅವರೆಲ್ಲರ ಹೆಗಲನ್ನು ಚುಚ್ಚಿದೆ; ನಿನ್ನ ಮೇಲೆ ಊರಿಕೊಳ್ಳಲು, ನೀನು ಒಡೆದು ಅವರೆಲ್ಲರ ನಡುವಿಗೆ ನಡುಕವನ್ನು ಉಂಟುಮಾಡಿದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)7 [ಐಗುಪ್ತವೇ,] ಇಸ್ರಾಯೇಲ್ಯರು ನಿನ್ನ ಮೇಲೆ ಕೈಯಿಡಲು ನೀನು ಮುರಿದು ಅವರೆಲ್ಲರ ಹೆಗಲನ್ನು ಚುಚ್ಚಿದಿ; ಊರಿಕೊಳ್ಳಲು ನೀನು ಒಡೆದು ಅವರೆಲ್ಲರ ನಡುವಿಗೆ ನಡುಕವನ್ನು ಉಂಟುಮಾಡಿದಿ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ7 ಇಸ್ರಾಯೇಲರು ನಿನ್ನ ಮೇಲೆ ಕೈಯಿಡಲು ನೀನು ಮುರಿದು ಅವರ ಹೆಗಲನ್ನು ಚುಚ್ಚಿದೆ; ಅವರು ನಿನ್ನನ್ನು ಆದರಿಸಿಕೊಂಡಾಗ ನೀನು ಮುರಿದು ಅದರ ನಡುವುಗಳನ್ನೆಲ್ಲಾ ನಿಲ್ಲಿಸಿಬಿಟ್ಟೆ. ಅಧ್ಯಾಯವನ್ನು ನೋಡಿ |