ಯೆಹೆಜ್ಕೇಲನು 29:14 - ಪರಿಶುದ್ದ ಬೈಬಲ್14 ಸೆರೆಹಿಡಿಯಲ್ಪಟ್ಟ ಈಜಿಪ್ಟರನ್ನು ಪತ್ರೋಸ್ ದೇಶಕ್ಕೆ ಬರಮಾಡುವೆನು. ಅವರ ಜನ್ಮಸ್ಥಳಕ್ಕೆ ಅವರನ್ನು ತಿರುಗಿ ಬರಮಾಡುವೆನು. ಆದರೆ ಅವರ ರಾಜ್ಯಕ್ಕೆ ಮಹತ್ವವಿರುವುದಿಲ್ಲ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201914 ಐಗುಪ್ತದ ದುರವಸ್ಥೆಯನ್ನು ತಪ್ಪಿಸಿ, ಅವರ ಜನ್ಮ ಭೂಮಿಯಾದ ಪತ್ರೋಸ್ ದೇಶಕ್ಕೆ ಪುನಃ ಬರಮಾಡುವೆನು; ಅಲ್ಲೇ ಅವರು ಕನಿಷ್ಠ ರಾಜ್ಯದವರಾಗಿರುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)14 ಈಜಿಪ್ಟಿನ ದುರವಸ್ಥೆಯನ್ನು ತಪ್ಪಿಸಿ, ಅವರ ಜನ್ಮಭೂಮಿಯಾದ ದಕ್ಷಿಣ ಈಜಿಪ್ಟಿಗೆ ಪುನಃ ಬರಮಾಡುವೆನು. ಅಲ್ಲೇ ಅವರು ನಿಕೃಷ್ಟ ರಾಜ್ಯದವರಾಗಿರುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)14 ಅವರ ಜನ್ಮಭೂವಿುಯಾದ ಪತ್ರೋಸ್ ದೇಶಕ್ಕೆ ಪುನಃ ಬರಮಾಡುವೆನು; ಅಲ್ಲೇ ಅವರು ನಿಕೃಷ್ಟ ರಾಜ್ಯದವರಾಗಿರುವರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ14 ನಾನು ಈಜಿಪ್ಟಿನವರನ್ನು ಸೆರೆಯಿಂದ ತಿರುಗಿ ಬಿಡಿಸಿ ಅವರನ್ನು ಪತ್ರೋಸ್ ದೇಶಕ್ಕೆ ಅಂದರೆ ಅವರ ಜನ್ಮದೇಶಕ್ಕೆ ಮತ್ತೆ ಬರಮಾಡುವೆನು. ಅಲ್ಲಿ ಅವರು ಕನಿಷ್ಠ ರಾಜ್ಯದವರಾಗಿರುವರು. ಅಧ್ಯಾಯವನ್ನು ನೋಡಿ |
ಈಜಿಪ್ಟಿನಲ್ಲಿ ವಾಸಮಾಡುತ್ತಿರುವ ಅನೇಕ ಯೆಹೂದಿ ಸ್ತ್ರೀಯರು ಬೇರೆ ದೇವರುಗಳಿಗೆ ನೈವೇದ್ಯಗಳನ್ನು ಅರ್ಪಿಸುತ್ತಿದ್ದರು. ಅವರ ಗಂಡಂದಿರಿಗೆ ಅದು ಗೊತ್ತಿತ್ತು. ಆದರೆ ಅವರು ಅದನ್ನು ತಡೆಯಲಿಲ್ಲ. ಯೆಹೂದದ ಜನರ ಒಂದು ದೊಡ್ಡ ಗುಂಪು ಸೇರಿತ್ತು. ಅವರು ಈಜಿಪ್ಟಿನ ದಕ್ಷಿಣಭಾಗದಲ್ಲಿ ವಾಸಿಸುವ ಯೆಹೂದಿಗಳಾಗಿದ್ದರು. ಅನ್ಯದೇವರುಗಳಿಗೆ ನೈವೇದ್ಯವನ್ನು ಅರ್ಪಿಸುತ್ತಿದ್ದ ಸ್ತ್ರೀಯರ ಗಂಡಂದಿರು ಯೆರೆಮೀಯನಿಗೆ ಹೀಗೆಂದರು: