ಯೆಹೆಜ್ಕೇಲನು 28:2 - ಪರಿಶುದ್ದ ಬೈಬಲ್2 “ನರಪುತ್ರನೇ, ತೂರಿನ ರಾಜನಿಗೆ ಹೀಗೆ ಹೇಳು, ‘ನನ್ನ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ: “‘ನೀನು ಬಹಳ ಹೆಮ್ಮೆಯುಳ್ಳವನು. “ನಾನು ದೇವರು ಎಂದು ಹೇಳುವೆ. ಸಾಗರದ ಮಧ್ಯದಲ್ಲಿ ದೇವರುಗಳ ಸಿಂಹಾಸನದಲ್ಲಿ ನಾನು ಕೂತಿರುತ್ತೇನೆ ಎಂದು ಅನ್ನುವೆ.” “‘ಆದರೆ ನೀನು ಮನುಷ್ಯನು, ದೇವರಲ್ಲ. ನೀನು ದೇವರೆಂದು ನೀನೇ ನೆನಸಿಕೊಳ್ಳುವೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20192 “ನರಪುತ್ರನೇ, ನೀನು ತೂರಿನ ಅರಸನಿಗೆ ಹೀಗೆ ನುಡಿ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ನೀನು ಉಬ್ಬಿದ ಮನಸ್ಸುಳ್ಳವನಾಗಿ ಆಹಾ, ನಾನೇ ದೇವರು, ಸಮುದ್ರ ಮಧ್ಯದಲ್ಲಿ ದೇವರ ಸ್ಥಾನದಲ್ಲಿ ಕುಳಿತುಕೊಂಡಿರುವೆನು’ ಎಂದು ಹೇಳಿಕೊಂಡಿದ್ದೀ; ನೀನು ದೇವರಲ್ಲ, ಮನುಷ್ಯನೇ. ಆದರೂ ನಿನ್ನನ್ನು ನೀನೇ ದೇವರಿಗೆ ಸಮಾನನೆಂದು ಭಾವಿಸಿಕೊಂಡಿರುವಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)2 “ನರಪುತ್ರನೇ, ನೀನು ಟೈರ್ ನಗರದ ರಾಜನಿಗೆ ಹೀಗೆ ನುಡಿ; ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನೀನು ಗರ್ವದಿಂದ ‘ಆಹಾ, ನಾನೆ ದೇವರು, ಸಮುದ್ರ ಮಧ್ಯೆ ದೇವರ ಆಸನವನ್ನೇ ಅಲಂಕರಿಸಿದ್ದೇನೆ’, ಎಂದುಕೊಂಡೆ. ನೀನು ನಿನ್ನ ದೇವರಿಗೆ ಸಮನಾಗಿಸಿಕೊಂಡೆಯೋ? ನೀನು ಎಂದಿಗೂ ದೇವರಲ್ಲ, ನೀನೊಬ್ಬ ನರಪ್ರಾಣಿಯಷ್ಟೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)2 ನರಪುತ್ರನೇ, ನೀನು ತೂರಿನ ಪ್ರಭುವಿಗೆ ಹೀಗೆ ನುಡಿ - ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನೀನು ಉಬ್ಬಿದ ಮನಸ್ಸುಳ್ಳವನಾಗಿ ಆಹಾ, ನಾನು ದೇವರು, ಸಮುದ್ರ ಮಧ್ಯದಲ್ಲಿ ದೇವರ ಆಸನವನ್ನೇ ಹತ್ತಿದ್ದೇನೆ ಅಂದುಕೊಂಡಿಯಷ್ಟೆ; ನೀನು ನಿನ್ನ ಮನಸ್ಸನ್ನು ದೇವರ ಮನಸ್ಸಿನಷ್ಟು ಹೆಚ್ಚಿಸಿಕೊಂಡದೇನು? ನೀನು ಎಂದಿಗೂ ದೇವರಲ್ಲ, ನೀನು ನರಪ್ರಾಣಿಯೇ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ2 “ಮನುಷ್ಯಪುತ್ರನೇ, ಟೈರಿನ ಆಡಳಿತ ಅಧಿಕಾರಿಗೆ ಹೇಳಬೇಕಾದದ್ದೇನೆಂದರೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ನೀನು ಗರ್ವದಿಂದ, “ನಾನು ಒಬ್ಬ ದೇವರು ದೇವರ ಸ್ಥಾನದಲ್ಲಿ ಸಮುದ್ರಗಳ ಮಧ್ಯದಲ್ಲಿ ಕುಳಿತುಕೊಂಡಿರುವೆನು,” ಎಂದು ಹೇಳಿಕೊಂಡಿದ್ದೀ. ಆದರೆ ನೀನು ದೇವರಲ್ಲ, ಮನುಷ್ಯನೇ, ಆದರೂ ನಿನ್ನನ್ನು ನೀನೇ ದೇವರಿಗೆ ಸಮನೆಂದು ಭಾವಿಸಿದೆ. ಅಧ್ಯಾಯವನ್ನು ನೋಡಿ |
ಅವರು ನಿನ್ನ ಬಗ್ಗೆ ಈ ಶೋಕಗೀತೆಯನ್ನು ಹಾಡುವರು: “‘ತೂರ್, ನೀನು ಹೆಸರುವಾಸಿಯಾದ ನಗರವಾಗಿದ್ದೆ. ನಿನ್ನಲ್ಲಿ ವಾಸಮಾಡಲು ಜನರು ಸಮುದ್ರದಾಚೆಯಿಂದ ಬಂದರು. ನೀನು ಪ್ರಸಿದ್ಧಳಾಗಿದ್ದೆ, ಆದರೆ ನೀನೀಗ ಹೋಗಿಬಿಟ್ಟೆ. ದ್ವೀಪವಾಗಿರುವ ನೀನು ಮತ್ತು ನಿನ್ನಲ್ಲಿ ವಾಸವಾಗಿದ್ದ ಜನರು ಸಮುದ್ರದಿಂದ ದೂರದಲ್ಲಿರುವುದರಿಂದ ಬಲಿಷ್ಠರಾಗಿದ್ದೀರಿ. ಭೂಮಿಯ ಮೇಲೆ ವಾಸವಾಗಿದ್ದ ಎಲ್ಲಾ ಜನರನ್ನು ನೀವು ಭಯಗೊಳಿಸಿದಿರಿ.
ಈ ನಿನೆವೆಯು ಸಂತೋಷಭರಿತ ನಗರಿಯಾಗಿದೆ. ಅದರ ನಿವಾಸಿಗಳು ತಾವು ಸುರಕ್ಷಿತರಾಗಿದ್ದೇವೆಂದು ತಿಳಿದಿದ್ದಾರೆ. ನಿನೆವೆಯು ಲೋಕದಲ್ಲಿ ಅತ್ಯಂತ ಮಹತ್ವಪೂರ್ಣ ಸ್ಥಳವೆಂದು ತಿಳಿದಿದ್ದಾರೆ. ಅವರು ಬಹಳ ಗರ್ವಪಡುತ್ತಾರೆ. ಆದರೆ ಆ ನಗರವು ನಾಶವಾಗುವದು. ಕಾಡುಮೃಗಗಳ ಹಕ್ಕೆಯಾಗುವದು. ದಾಟಿಹೋಗುವ ಜನರು, ತಮ್ಮ ಆಶ್ಚರ್ಯವನ್ನು ಸಿಳ್ಳುಹಾಕಿ ತಲೆಯಾಡಿಸಿ “ಎಂಥಾ ದುರ್ಗತಿ” ಎಂದು ಉದ್ಗರಿಸುವರು.
“ಉತ್ತರದ ರಾಜನು ತನ್ನ ಮನಸ್ಸಿಗೆ ಬಂದದ್ದನ್ನು ಮಾಡುವನು; ಬಡಾಯಿ ಕೊಚ್ಚಿಕೊಳ್ಳುವನು. ಅವನು ತನ್ನನ್ನು ತಾನು ಹೊಗಳಿಕೊಳ್ಳುವನು ಮತ್ತು ದೇವರಿಗಿಂತ ತಾನು ಹೆಚ್ಚಿನವನೆಂದು ಭಾವಿಸುವನು. ಅವನು ಯಾರೂ ಎಂದೂ ಕೇಳದ ಸಂಗತಿಗಳನ್ನು ಹೇಳುವನು. ಅವನು ಮಹೋನ್ನತನಾದ ದೇವರ ವಿರುದ್ಧವಾಗಿ ಅಂತಹ ಸಂಗತಿಗಳನ್ನು ಹೇಳುವನು. ಎಲ್ಲ ಕೆಟ್ಟ ಸಂಗತಿಗಳು ಜರಗುವವರೆಗೂ ಅವನು ಜಯ ಪಡೆಯುವನು. ಏನು ನಡೆಯಬೇಕೆಂದು ದೇವರು ನಿಶ್ಚಯ ಮಾಡಿರುವನೋ ಅದು ನಡೆಯುವದು.