Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 28:16 - ಪರಿಶುದ್ದ ಬೈಬಲ್‌

16 ನಿನ್ನ ವ್ಯಾಪಾರವು ನಿನಗೆ ಐಶ್ವರ್ಯವನ್ನು ತಂದಿತು. ಆದರೆ ಅದರೊಂದಿಗೆ ನಾನಾ ದುಷ್ಟತ್ವಗಳು ನಿನ್ನೊಳಗೆ ಬಂದು ನೀನು ಪಾಪ ಮಾಡಿದೆ. ಆಗ ನಾನು ನಿನ್ನನ್ನು ಅಶುದ್ಧನೆಂದು ಪರಿಗಣಿಸಿ ನಿನ್ನನ್ನು ದೇವರ ಪರ್ವತದಿಂದ ದಬ್ಬಿಬಿಟ್ಟೆನು. ನೀನು ನನ್ನ ಕೆರೂಬಿಯರಲ್ಲಿ ವಿಶೇಷವಾದವನಾಗಿದ್ದೆ. ನಿನ್ನ ರೆಕ್ಕೆಗಳು ನನ್ನ ಸಿಂಹಾಸನದ ಮೇಲೆ ಚಾಚಿರುತ್ತಿದ್ದವು. ಆದರೆ ಬೆಂಕಿಯಂತೆ ಹೊಳೆಯುವ ರತ್ನಾಭರಣಗಳನ್ನೆಲ್ಲಾ ತೆಗೆದಿಡಲು ನಿನ್ನನ್ನು ಬಲವಂತಪಡಿಸಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 “‘ನಿನ್ನ ಮಿತಿಯಿಲ್ಲದ ವ್ಯಾಪಾರದಿಂದ ನಿನ್ನಲ್ಲಿ ಬಲಾತ್ಕಾರವು ತುಂಬಿ ನೀನು ಪಾಪಿಯಾದೆ. ಆದಕಾರಣ ನಾನು ನಿನ್ನನ್ನು ದೇವರ ಪರ್ವತದಿಂದ ಅಪವಿತ್ರನೆಂದು ತಳ್ಳಿಬಿಟ್ಟೆನು; ಹೌದು, ನೆರಳು ನೀಡುವ ಕೆರೂಬಿಯೇ, ಬೆಂಕಿಯ ಕಲ್ಲುಗಳ ಮಧ್ಯದಿಂದ ನಿನ್ನನ್ನು ನಾಶಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ನೀ ಪಾಪಿಯಾದೆ ಮಿತಿಯಿಲ್ಲದ ವ್ಯಾಪಾರದಿಂದ ನಿನ್ನಲ್ಲಿ ಹಿಂಸಾಚಾರಗಳು ತುಂಬಿಕೊಂಡದ್ದರಿಂದ. ಎಂದೇ, ಹೊಲಸೆಂಬಂತೆ ನಿನ್ನ ತಳ್ಳಿಬಿಟ್ಟೆ ದೇವರ ಬೆಟ್ಟದಿಂದ ಕಿತ್ತೆಸೆದುಬಿಟ್ಟೆ ಕೆಂಡದ ನಡು ಮಡುವಿನ ನೆಲೆಯಿಂದ ನೆರಳು ನೀಡುವ ಕೆರೂಬಿಯೇ ಎಸೆಯಿತು ನಿನ್ನನ್ನು ಅಲ್ಲಿಂದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ನಿನ್ನ ವಿುತಿಯಿಲ್ಲದ ವ್ಯಾಪಾರದಿಂದ ನಿನ್ನಲ್ಲಿ ಬಲಾತ್ಕಾರವು ತುಂಬಿ ನೀನು ಪಾಪಿಯಾದಿ. ಆದಕಾರಣ ನಾನು ನಿನ್ನನ್ನು ದೇವರ ಪರ್ವತದಿಂದ ಹೊಲಸನ್ನಾಗಿ ತಳ್ಳಿಬಿಟ್ಟೆನು; ಹೌದು. ನೆರಳುಕೊಡುವ ಕೆರೂಬಿಯೇ, ಕೆಂಡದ ಮಳೆಯ ಮಧ್ಯದಲ್ಲಿನ ನಿನ್ನ ನೆಲೆಯಿಂದ ನಾನು ನಿನ್ನನ್ನು ಕಿತ್ತು ಧ್ವಂಸಮಾಡಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ನಿನ್ನ ಮಿತಿಯಿಲ್ಲದ ವ್ಯಾಪಾರದಿಂದ ನಿನ್ನಲ್ಲಿ ಹಿಂಸಾಚಾರವು ತುಂಬಿ ನೀನು ಪಾಪಿಯಾದೆ; ಆದ್ದರಿಂದ ನಿನ್ನನ್ನು ಅಪವಿತ್ರನೆಂದು ದೇವರ ಪರ್ವತದೊಳಗಿನಿಂದ ನಾನು ತಳ್ಳಿಬಿಟ್ಟೆನು. ಓ ರಕ್ಷಕ ಕೆರೂಬಿಯೇ, ಬೆಂಕಿಯ ಕಲ್ಲುಗಳ ಮಧ್ಯದಿಂದ ನಿನ್ನನ್ನು ನಾಶಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 28:16
23 ತಿಳಿವುಗಳ ಹೋಲಿಕೆ  

ಲೆಬನೋನಿನಲ್ಲಿ ಅನೇಕರನ್ನು ಗಾಯಗೊಳಿಸಿರುವೆ. ಅಲ್ಲಿ ಎಷ್ಟೋ ಪಶುಗಳನ್ನು ಅಪಹರಿಸಿರುವೆ. ಆ ದೇಶದಲ್ಲಿ ನೀನು ಮಾಡಿದ ದುಷ್ಕೃತ್ಯಗಳ ನಿಮಿತ್ತ, ಅದರಿಂದಾಗಿ ಅಲ್ಲಿ ಸತ್ತುಹೋದವರ ನಿಮಿತ್ತ ನೀನು ಭಯಗ್ರಸ್ತನಾಗಿರುವೆ. ಅಲ್ಲಿಯ ಪಟ್ಟಣಗಳಿಗೆ ನೀನು ಮಾಡಿದ ಹಾನಿ, ಜನರಿಗೆ ನೀನು ಕೊಟ್ಟ ಸಂಕಟದ ನಿಮಿತ್ತ ನಿನಗೆ ಹೆದರಿಕೆಯುಂಟಾಗಿದೆ.”


ಎಷ್ಟೋ ಜನಾಂಗಗಳಿಂದ ನೀನು ವಸ್ತುಗಳನ್ನು ಅಪಹರಿಸಿರುವೆ. ಅವರು ನಿನ್ನಿಂದ ಇನ್ನೂ ಹೆಚ್ಚಾಗಿ ಅಪಹರಿಸುವರು. ನೀನು ಎಷ್ಟೋ ಮಂದಿಯನ್ನು ಕೊಂದಿರುವೆ; ದೇಶಗಳನ್ನೂ ನಗರಗಳನ್ನೂ ನಾಶಮಾಡಿರುವೆ. ಅಲ್ಲಿಯ ಎಷ್ಟೋ ಜನರನ್ನು ಸಂಹರಿಸಿರುವೆ.


ಪಾರಿವಾಳಗಳನ್ನು ಮಾರುತ್ತಿದ್ದವರಿಗೆ, “ಇವುಗಳನ್ನು ಹೊರಗೆ ತೆಗೆದುಕೊಂಡು ಹೋಗಿರಿ! ನನ್ನ ತಂದೆಯ ಮನೆಯನ್ನು ವ್ಯಾಪಾರ ಸ್ಥಳವನ್ನಾಗಿ ಮಾಡಬೇಡಿ!” ಎಂದು ಹೇಳಿದನು.


ಆಗ ದೇವರು ನನಗೆ, “ನರಪುತ್ರನೇ, ಅವರು ಮಾಡುತ್ತಿರುವುದು ನಿನಗೆ ಕಾಣುತ್ತಿದೆಯೋ? ಯೆಹೂದದ ಜನರಿಗೆ ತಾವು ಮಾಡುತ್ತಿರುವ ಈ ಭಯಂಕರ ಕೃತ್ಯಗಳು ಸಾಕಾಗಿಲ್ಲ. ಇಡೀ ದೇಶವು ದುಷ್ಟತನದಿಂದ ತುಂಬಿಹೋಗಿದೆ. ಅವರು ನನ್ನನ್ನು ಇನ್ನೂ ಹೆಚ್ಚಿಗೆ ಕೋಪಗೊಳಿಸುತ್ತಿದ್ದಾರೆ. ವಿಗ್ರಹಾರಾಧನೆಯ ಪ್ರತೀಕವಾಗಿ ತಮ್ಮ ಮೂಗುಗಳಿಗೆ ಎಳೆಯ ಕೊಂಬೆಗಳನ್ನು ಸೋಕಿಸುತ್ತಾರೆ.


ಅಲ್ಲದೆ ಏದೆನ್ ತೋಟವನ್ನು ಸಂರಕ್ಷಿಸುವುದಕ್ಕಾಗಿ ಆತನು ಕೆರೂಬಿದೂತರನ್ನು ತೋಟದ ಪೂರ್ವಭಾಗದಲ್ಲಿ ಇರಿಸಿದನು. ಇದಲ್ಲದೆ ಆತನು ಬೆಂಕಿಯ ಖಡ್ಗವನ್ನು ಅಲ್ಲಿಟ್ಟನು. ಈ ಖಡ್ಗವು ಎಲ್ಲಾ ದಿಕ್ಕುಗಳತ್ತ ತಿರುಗುತ್ತಾ ಧಗಧಗನೆ ಪ್ರಜ್ವಲಿಸುತ್ತಾ ಜೀವದಾಯಕ ಮರದ ಮಾರ್ಗವನ್ನು ಕಾಯುತ್ತಿತ್ತು.


ಆ ಘಟಸರ್ಪವನ್ನು ಪರಲೋಕದಿಂದ (ಆ ಘಟಸರ್ಪಕ್ಕೆ ಸೈತಾನನೆಂತಲೂ ಪಿಶಾಚನೆಂತಲೂ ಹೆಸರಿದೆ. ಅದು ಲೋಕವನ್ನೆಲ್ಲಾ ತಪ್ಪು ಮಾರ್ಗಕ್ಕೆ ಎಳೆಯುತ್ತಿತ್ತು.) ಅದರ ದೂತರೊಂದಿಗೆ ಭೂಮಿಯ ಮೇಲೆ ಎಸೆಯಲಾಯಿತು.


ಆ ಸಮಯದಲ್ಲಿ ಹೊಸ್ತಿಲನ್ನು ಹಾರಿ ತಮ್ಮ ಒಡೆಯರ ಮನೆಯನ್ನು ತಮ್ಮ ಸುಳ್ಳು, ಮೋಸ, ಹಿಂಸೆಗಳಿಂದ ತುಂಬಿರುವವರನ್ನು ಶಿಕ್ಷಿಸುತ್ತೇನೆ” ಎಂದು ಯೆಹೋವನು ನುಡಿಯುತ್ತಾನೆ.


ಪಟ್ಟಣದ ಧನಿಕರು ಕ್ರೂರವಾದ ಮತ್ತು ದುಷ್ಟತ್ವದ ಕೃತ್ಯಗಳನ್ನು ಇನ್ನೂ ಮಾಡುತ್ತಿದ್ದಾರೆ. ಆ ಪಟ್ಟಣದಲ್ಲಿರುವ ಜನರು ಇನ್ನೂ ಸುಳ್ಳು ಹೇಳುತ್ತಾರೆ. ಹೌದು, ಆ ಜನರು ತಮ್ಮ ಸುಳ್ಳನ್ನು ಪ್ರದರ್ಶಿಸುತ್ತಾರೆ.


ಎದ್ದು ಈ ಸ್ಥಳವನ್ನು ಬಿಟ್ಟುಹೋಗು. ಇದು ನಿನ್ನ ವಿಶ್ರಾಂತಿಯ ಸ್ಥಳವಲ್ಲ, ಯಾಕೆಂದರೆ ನೀನು ಇದನ್ನು ಹಾಳು ಮಾಡಿರುವೆ. ನೀನು ಇದನ್ನು ಹೊಲಸು ಮಾಡಿರುವೆ, ಆದ್ದರಿಂದ ಇದು ನಾಶವಾಗುವದು; ಭಯಂಕರ ರೀತಿಯಲ್ಲಿ ಕೆಡವಲ್ಪಡುವದು.


ಅವರಿಗೆ ಹೊಲಗದ್ದೆಗಳು ಬೇಕು, ಅದನ್ನು ಅವರು ತೆಗೆದುಕೊಳ್ಳುವರು. ಅವರಿಗೆ ಮನೆಮಠಗಳು ಬೇಕು, ಅದನ್ನು ಅವರು ತೆಗೆದುಕೊಳ್ಳುವರು. ಒಬ್ಬನಿಗೆ ಮೋಸಮಾಡಿ ಅವನ ಮನೆಯನ್ನು ಕಿತ್ತುಕೊಳ್ಳುವರು. ಇನ್ನೊಬ್ಬನಿಗೆ ಮೋಸಮಾಡಿ ಅವನ ಹೊಲಗದ್ದೆಗಳನ್ನು ಕಿತ್ತುಕೊಳ್ಳುವರು.


ಅಷ್ಡೋದ್ ಮತ್ತು ಈಜಿಪ್ಟಿನ ಉನ್ನತ ಬುರುಜುಗಳ ಬಳಿಗೆ ಹೋಗಿ ಈ ಸಂದೇಶವನ್ನು ಸಾರಿರಿ, “ಸಮಾರ್ಯದ ಪರ್ವತಗಳ ಬಳಿಗೆ ಬನ್ನಿರಿ. ಅಲ್ಲಿ ಒಂದು ದೊಡ್ಡ ಗಲಿಬಿಲಿಯನ್ನು ನೋಡುವಿರಿ. ಯಾಕೆಂದರೆ ಜನರಿಗೆ ಸರಿಯಾಗಿ ಜೀವಿಸುವ ರೀತಿ ಗೊತ್ತಿಲ್ಲ. ಅವರು ಜನರೊಂದಿಗೆ ಕ್ರೂರವಾಗಿ ವರ್ತಿಸುವರು. ಬೇರೆ ಜನರಿಂದ ವಸ್ತುಗಳನ್ನು ತೆಗೆದುಕೊಂಡು ಅವುಗಳನ್ನು ಉನ್ನತ ಬುರುಜುಗಳಲ್ಲಿ ಅಡಗಿಸಿಡುವರು. ಯುದ್ಧದಲ್ಲಿ ಸೂರೆ ಮಾಡಿದ ವಸ್ತುಗಳಿಂದ ಅವರ ಖಜಾನೆಯು ತುಂಬಿರುವದು.”


“ಯಾಕೋಬನು ಒಬ್ಬ ವ್ಯಾಪಾರಿ. ಅವನು ತನ್ನ ಸ್ನೇಹಿತನಿಗೇ ಮೋಸಮಾಡುತ್ತಾನೆ. ಅವನ ತ್ರಾಸು ಮೋಸದ್ದು,


ನೀನು ಆರಿಸಲ್ಪಟ್ಟ ಕೆರೂಬಿಯರಲ್ಲಿ ಒಬ್ಬನಾಗಿದ್ದೆ. ನಿನ್ನ ರೆಕ್ಕೆಗಳು ನನ್ನ ಸಿಂಹಾಸನದ ಮೇಲೆ ಚಾಚಿದ್ದವು. ನಾನು ನಿನ್ನನ್ನು ದೇವರ ಪವಿತ್ರ ಪರ್ವತದಲ್ಲಿಟ್ಟೆನು. ನೀನು ಬೆಂಕಿಯಂತೆ ಹೊಳೆಯುವ ರತ್ನಗಳ ಮೇಲೆ ನಡೆದಾಡಿದೆ.


ಸರ್ವಶಕ್ತನಾದ ಯೆಹೋವನೇ. ಅದು ಪ್ರಾಮುಖ್ಯವಾಗದಂತೆ ಆತನೇ ತೀರ್ಮಾನಿಸಿದ್ದಾನೆ. ಆತನು ಗೌರವಿಸಲ್ಪಡುವ ಜನರನ್ನು ಅವಮಾನಪಡಿಸಬೇಕೆಂತಲೂ ಮಾಡಿದ್ದಾನೆ.


ಇಲ್ಲಿ ನೀನಿರುವ ಮುಖ್ಯ ಹುದ್ದೆಯಿಂದ ನಿನ್ನನ್ನು ತಳ್ಳಿಬಿಡುವೆನು. ನಿನ್ನ ಹೊಸ ಅರಸನು ನಿನ್ನನ್ನು ಆ ಹುದ್ದೆಯಿಂದ ತೆಗೆದುಬಿಡುವನು.


ದೇವರು ಭೂಮಿಯ ಕಡೆಗೆ ನೋಡಿದಾಗ ಜನರಿಂದ ಅದು ಕೆಟ್ಟುಹೋಗಿರುವುದನ್ನು ಕಂಡನು. ಎಲ್ಲೆಲ್ಲೂ ಹಿಂಸೆ ತುಂಬಿಕೊಂಡಿತ್ತು; ಜನರು ದುಷ್ಟರಾಗಿಯೂ ಕ್ರೂರಿಗಳಾಗಿಯೂ ತಮ್ಮ ಜೀವಿತವನ್ನು ಕೆಡಿಸಿಕೊಂಡಿದ್ದರು.


ನಿನ್ನ ಹೆಚ್ಚಳಿಕೆಯು ನಿನ್ನನ್ನು ಮರುಳುಗೊಳಿಸಿತು. ನೀನು ಎತ್ತರವಾದ ಬೆಟ್ಟದಂಚಿನ ಗುಹೆಗಳಲ್ಲಿ ವಾಸಿಸುವೆ. ನಿನ್ನ ಮನೆಯು ಪರ್ವತಗಳಲ್ಲಿದೆ. ಆದ್ದರಿಂದ ನೀನು ನಿನ್ನಲ್ಲಿ ಹೇಳಿಕೊಳ್ಳುವದೇನೆಂದರೆ, ‘ಯಾರೂ ನನ್ನನ್ನು ಕೆಳಗೆ ಭೂಮಿಯ ಮೇಲೆ ಇಳಿಸಲಾರರು.’”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು