ಯೆಹೆಜ್ಕೇಲನು 26:6 - ಪರಿಶುದ್ದ ಬೈಬಲ್6 ಆಕೆಯ ಹೆಣ್ಣುಮಕ್ಕಳು (ಚಿಕ್ಕ ಪಟ್ಟಣಗಳು) ಯುದ್ಧದಲ್ಲಿ ಕೊಲ್ಲಲ್ಪಡುವರು. ನಾನು ಯೆಹೋವನೆಂದು ಆಗ ತಿಳಿಯುವರು.” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20196 ಬಯಲು ಭೂಮಿಯಲ್ಲಿನ ಅದರ ಕುಮಾರ್ತೆಯರು ಖಡ್ಗದಿಂದ ಹತರಾಗುವರು. ಆಗ ನಾನೇ ಯೆಹೋವನು” ಎಂದು ಎಲ್ಲರಿಗೂ ಗೊತ್ತಾಗುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)6 ಬಯಲು ಭೂಮಿಯಲ್ಲಿನ ಅವರ ಕುವರಿಯರು ಖಡ್ಗದಿಂದ ಹತರಾಗುವರು; ನಾನೇ ಸರ್ವೇಶ್ವರ ಎಂದು ಎಲ್ಲರಿಗೂ ಗೊತ್ತಾಗುವುದು.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)6 ಬೈಲುಭೂವಿುಯಲ್ಲಿನ ಅದರ ಕುಮಾರ್ತೆಯರು ಖಡ್ಗದಿಂದ ಹತರಾಗುವರು; ನಾನೇ ಯೆಹೋವನು ಎಂದು ಎಲ್ಲರಿಗೂ ಗೊತ್ತಾಗುವದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ6 ಮತ್ತು ಪ್ರಧಾನ ಭೂಮಿಯಲ್ಲಿರುವ ಅದರ ಪುತ್ರಿಯರು ಖಡ್ಗದಿಂದ ಹತರಾಗುವರು. ಆಗ ನಾನೇ ಯೆಹೋವ ದೇವರೆಂದು ಎಲ್ಲರಿಗೂ ತಿಳಿಯುವುದು. ಅಧ್ಯಾಯವನ್ನು ನೋಡಿ |
ಯೆಹೋವನು ಹೀಗೆನ್ನುತ್ತಾನೆ: “ಅಮ್ಮೋನಿನ ರಬ್ಬಾ ನಿವಾಸಿಗಳು ಯುದ್ಧದ ಧ್ವನಿಗಳನ್ನು ಕೇಳುವ ಕಾಲ ಬರಲಿದೆ. ಅಮ್ಮೋನಿನ ರಬ್ಬಾ ನಾಶವಾಗಿ ಹಾಳಾದ ಕಟ್ಟಡಗಳ ಗುಡ್ಡವಾಗುವುದು. ಅದರ ಸುತ್ತಮುತ್ತಲಿನ ಪಟ್ಟಣಗಳನ್ನು ಸುಟ್ಟುಹಾಕಲಾಗುವುದು. ಆ ಜನರು ಇಸ್ರೇಲರಿಗೆ ಆ ಪ್ರದೇಶವನ್ನು ಬಿಟ್ಟುಹೋಗುವಂತೆ ಒತ್ತಾಯಿಸಿದರು. ಆದರೆ ಇಸ್ರೇಲರು ಆ ಪ್ರದೇಶವನ್ನು ಬಿಟ್ಟುಹೋಗುವಂತೆ ಅವರನ್ನು ಒತ್ತಾಯಿಸುವರು.” ಯೆಹೋವನು ಹೀಗೆನ್ನುತ್ತಾನೆ: