ಯೆಹೆಜ್ಕೇಲನು 26:4 - ಪರಿಶುದ್ದ ಬೈಬಲ್4 ದೇವರು ಹೇಳಿದ್ದೇನೆಂದರೆ, “ಆ ಶತ್ರು ಸೈನಿಕರು ತೂರಿನ ಗೋಡೆಗಳನ್ನು ಕೆಡವಿ, ಅದರ ಬುರುಜುಗಳನ್ನು ಎಳೆದು ಹಾಕುವರು. ನಾನು ಅದರ ಫಲವತ್ತಾದ ಮಣ್ಣನ್ನು ಕೆರೆದುಹಾಕಿ, ಅದನ್ನು ಬರಿದಾದ ಬಂಡೆಯನ್ನಾಗಿ ಬಿಟ್ಟುಬಿಡುವೆನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ಅವು ತೂರಿನ ಪೌಳಿಗೋಡೆಯನ್ನು ಉರುಳಿಸಿ, ಅದರ ಕೋಟೆ ಕೊತ್ತಲುಗಳನ್ನು ಕೆಡವಿ ಹಾಕುವವು; ನಾನು ಅದರ ಧೂಳನ್ನು ಒರೆಸಿ, ಅದನ್ನು ಬೋಳು ಬಂಡೆಯಂತೆ ಮಾಡುವೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 ಅವು ಟೈರಿನ ಪೌಳಿಗೋಡೆಯನ್ನು ಉರುಳಿಸಿ, ಅದರ ಕೊತ್ತಲಗಳನ್ನು ಕೆಡವಿಹಾಕುವುವು; ನಾನು ಅದರ ಮಣ್ಣನ್ನು ಕೆರೆದು, ಅದನ್ನು ಬೋಳುಬಂಡೆಯಾಗಿ ಮಾಡುವೆನು; ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)4 ಅವು ತೂರಿನ ಪೌಳಿಗೋಡೆಯನ್ನು ಉರುಳಿಸಿ ಅದರ ಕೊತ್ತಲಗಳನ್ನು ಕೆಡವಿಹಾಕುವವು; ನಾನು ಅದರ ಮಣ್ಣನ್ನು ಕೆರೆದು ಅದನ್ನು ಗುಡಿಸಿ ಗಂಡಾಂತರಮಾಡುವೆನು; ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ4 ಅವರು ಟೈರಿನ ಗೋಡೆಗಳನ್ನು ಕೆಡಿಸಿ ಅದರ ಗೋಪುರಗಳನ್ನು ಒಡೆದು ಬಿಡುವರು, ನಾನು ಅದರ ಧೂಳನ್ನು ಒರಸಿ ಅದನ್ನು ಬೋಳು ಬಂಡೆಯಂತೆ ಮಾಡುವೆನು. ಅಧ್ಯಾಯವನ್ನು ನೋಡಿ |