ಯೆಹೆಜ್ಕೇಲನು 26:19 - ಪರಿಶುದ್ದ ಬೈಬಲ್19 ಇದು ನನ್ನ ಒಡೆಯನಾದ ಯೆಹೋವನ ನುಡಿ. “ತೂರ್, ನಾನು ನಿನ್ನನ್ನು ನಾಶಮಾಡುವೆನು. ಆಗ ನೀನು ಬರಿದಾದ ನಗರವಾಗಿರುವೆ. ಯಾರೂ ಅಲ್ಲಿ ವಾಸ ಮಾಡುವದಿಲ್ಲ. ನಿನ್ನ ಮೇಲೆ ಸಮುದ್ರವು ತುಂಬುವಂತೆ ಮಾಡುವೆನು. ಆ ಮಹಾಸಾಗರವು ನಿನ್ನನ್ನು ಮುಚ್ಚಿಬಿಡುವದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201919 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನು ನಿನ್ನನ್ನು ಹಾಳು ಊರನ್ನಾಗಿ ಮಾಡಿ, ನಿರ್ಜನ ಪಟ್ಟಣಗಳ ಗತಿಗೆ ತಂದು, ನೀನು ಜಲರಾಶಿಯಲ್ಲಿ ಮುಳುಗಿ ಹೋಗುವಂತೆ ನಿನ್ನ ಮೇಲೆ ಮಹಾಸಾಗರವನ್ನು ಬರಮಾಡುವೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)19 ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: - “ನಾನು ನಿನ್ನನ್ನು ಹಾಳೂರು ಮಾಡಿ ನಿರ್ಜನ ಪಟ್ಟಣಗಳ ಗತಿಗೆ ತಂದು, ನೀನು ಜಲರಾಶಿಯಲ್ಲಿ ಮುಣುಗಿಹೋಗುವಂತೆ ನಿನ್ನ ಮೇಲೆ ಮಹಾಸಾಗರವನ್ನು ಉಕ್ಕಿಸುವೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)19 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನಾನು ನಿನ್ನನ್ನು ಹಾಳೂರು ಮಾಡಿ ನಿರ್ಜನಪಟ್ಟಣಗಳ ಗತಿಗೆ ತಂದು ನೀನು ಜಲರಾಶಿಯಲ್ಲಿ ಮುಣುಗಿಹೋಗುವಂತೆ ನಿನ್ನ ಮೇಲೆ ಮಹಾಸಾಗರವನ್ನು ಉಕ್ಕಿಸುವಾಗ ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ19 “ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ನಿನ್ನನ್ನು ನಿವಾಸಿಗಳಿಲ್ಲದ ಪಟ್ಟಣದ ಹಾಗೆ ಹಾಳಾದ ಪಟ್ಟಣವಾಗಿ ಮಾಡುವಾಗ ಹೆಚ್ಚು ನೀರು ಮುಚ್ಚುವ ಹಾಗೆ ಅಗಾಧ ಜಲರಾಶಿಯನ್ನು ನಿನ್ನ ಮೇಲೆ ಬರಮಾಡುವೆನು. ಅಧ್ಯಾಯವನ್ನು ನೋಡಿ |