Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 26:14 - ಪರಿಶುದ್ದ ಬೈಬಲ್‌

14 ನಾನು ನಿನ್ನನ್ನು ಬರಿದಾದ ಬಂಡೆಯನ್ನಾಗಿ ಮಾಡುವೆನು. ಸಮುದ್ರದ ತೀರದಲ್ಲಿ ಬಲೆಗಳನ್ನು ಹರಡುವ ಸ್ಥಳವಾಗಿ ನೀನು ಮಾರ್ಪಡುವೆ. ನೀನು ತಿರುಗಿ ಕಟ್ಟಲ್ಪಡುವದಿಲ್ಲ. ಇದು ಒಡೆಯನಾದ ಯೆಹೋವನ ನುಡಿ.” ನನ್ನ ಒಡೆಯನಾದ ಯೆಹೋವನು ಇದನ್ನು ನನಗೆ ತಿಳಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ನಾನು ನಿನ್ನನ್ನು ಬೋಳು ಬಂಡೆಯನ್ನಾಗಿ ಮಾಡುವೆನು; ನೀನು ಬಲೆಗಳನ್ನು ಹಾಕುವ ಸ್ಥಳವಾಗುವಿ; ನಿನ್ನ ಮೇಲೆ ಇನ್ನು ಕಟ್ಟಡವನ್ನು ಕಟ್ಟುವುದಿಲ್ಲ; ಯೆಹೋವನಾದ ನಾನೇ ಅಪ್ಪಣೆ ಕೊಟ್ಟಿದ್ದೇನೆ” ಇದು ಕರ್ತನಾದ ಯೆಹೋವನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ನಾನು ನಿನ್ನನ್ನು ಬೋಳುಬಂಡೆಮಾಡುವೆನು; ನೀನು ಬಲೆಗಳಿಗೆ ಹಾಸುಬಂಡೆಯಾಗುವೆ; ಇನ್ನು ನೀನು ಪುನಃ ನಿರ್ಮಾಣ ಹೊಂದಲಾರೆ; ಸರ್ವೇಶ್ವರನಾದ ನಾನು ಅಪ್ಪಣೆಕೊಟ್ಟಿದ್ದೇನೆ; ಇದು ಸರ್ವೇಶ್ವರನಾದ ದೇವರ ನುಡಿ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ನಾನು ನಿನ್ನನ್ನು ಬೋಳುಬಂಡೆ ಮಾಡುವೆನು; ನೀನು ಬಲೆಗಳಿಗೆ ಹಾಸಬಂಡೆಯಾಗುವಿ; ನಿನ್ನ ಮೇಲೆ ಇನ್ನು ಕಟ್ಟಡಕಟ್ಟರು; ಯೆಹೋವನಾದ ನಾನೇ ಅಪ್ಪಣೆಕೊಟ್ಟಿದ್ದೇನೆ; ಇದು ಕರ್ತನಾದ ಯೇಹೋವನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ನಿನ್ನನ್ನು ಬೋಳು ಬಂಡೆಯಂತೆ ಮಾಡುವೆನು. ನೀನು ಅಲ್ಲಿ ಬಲೆಹಾಸುವ ಸ್ಥಳವಾಗುವೆ. ನೀನು ಪುನಃ ಕಟ್ಟಲಾಗದೆ ಹೋಗುವಿ. ಯೆಹೋವ ದೇವರಾದ ನಾನೇ ಅದನ್ನು ಹೇಳಿದ್ದೇನೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 26:14
18 ತಿಳಿವುಗಳ ಹೋಲಿಕೆ  

ಎದೋಮ್ಯರು ಒಂದುವೇಳೆ ಹೀಗೆ ಹೇಳಿಯಾರು: “ನಾವು ನಾಶವಾಗಿದ್ದೇವೆ. ಹೌದು, ಆದರೆ ನಾವು ಹಿಂದೆ ಹೋಗಿ ತಿರುಗಿ ನಮ್ಮ ಪಟ್ಟಣಗಳನ್ನು ಕಟ್ಟುವೆವು.” ಸರ್ವಶಕ್ತನಾದ ಯೆಹೋವನು, “ಅವರು ಪಟ್ಟಣಗಳನ್ನು ತಿರುಗಿ ಕಟ್ಟಿದರೆ ನಾನು ತಿರುಗಿ ನಾಶಮಾಡುವೆನು” ಎಂದು ಹೇಳುತ್ತಾನೆ. ಇದಕ್ಕಾಗಿಯೇ ಜನರು, “ಎದೋಮ್ ದುಷ್ಟ ಪ್ರಾಂತ್ಯವಾಗಿದೆ, ಯೆಹೋವನು ನಿರಂತರವಾಗಿ ಅದನ್ನು ದ್ವೇಷಿಸುತ್ತಾನೆ” ಎಂದು ಅನ್ನುವರು.


ದೇವರು ಕೆಡವಿದ್ದನ್ನು ಮತ್ತೆ ಕಟ್ಟುವುದಕ್ಕಾಗಲಿ ಸೆರೆಗೆ ಹಾಕಿದವನನ್ನು ಬಿಡಿಸುವುದಕ್ಕಾಗಲಿ ಯಾರಿಗೂ ಸಾಧ್ಯವಿಲ್ಲ.


ಸರ್ವಶಕ್ತನಾದ ಯೆಹೋವನ ಈ ಸಂಕಲ್ಪವನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಜನರನ್ನು ದಂಡಿಸಲು ಆತನು ಕೈಮೇಲೆತ್ತಿದಾಗ ಯಾರೂ ಆತನನ್ನು ತಡೆಯಲಾರರು.


ನೀವು ಆ ಪಟ್ಟಣದಲ್ಲಿದ್ದ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ಪಟ್ಟಣದ ಮಧ್ಯದಲ್ಲಿ ತಂದುಹಾಕಿ ಅದಕ್ಕೆ ಬೆಂಕಿಹೊತ್ತಿಸಿ ಇಡೀ ಪಟ್ಟಣವನ್ನು ಬೆಂಕಿಯಿಂದ ಸುಡಬೇಕು. ಇದು ದೇವರಾದ ಯೆಹೋವನಿಗೆ ಸರ್ವಾಂಗಹೋಮವಾಗುವುದು. ಆ ಪಟ್ಟಣವು ಕಲ್ಲುಗಳ ರಾಶಿಯಾಗಿ ಪರಿಣಮಿಸುವುದು ಮತ್ತು ಯಾರೂ ಆ ಪಟ್ಟಣವನ್ನು ಮತ್ತೆ ಕಟ್ಟಬಾರದು.


ದೇವರು ಮನುಷ್ಯನಲ್ಲ; ಆತನು ಸುಳ್ಳಾಡುವುದಿಲ್ಲ. ದೇವರು ಮಾನವನಲ್ಲ; ಆತನ ಉದ್ದೇಶಗಳು ಬದಲಾಗುವುದಿಲ್ಲ. ಯೆಹೋವನು ತಾನು ಮಾಡುತ್ತೇನೆಂದು ಹೇಳಿದರೆ, ಅದನ್ನು ಮಾಡಿಯೇ ಮಾಡುತ್ತಾನೆ. ಯೆಹೋವನು ವಾಗ್ದಾನ ಮಾಡಿದರೆ, ಅದನ್ನು ನೆರವೇರಿಸುತ್ತಾನೆ.


ಭೂಮಿಯೂ ಆಕಾಶವೂ ನಾಶವಾಗುತ್ತವೆ, ಆದರೆ ನಾನು ಹೇಳಿದ ಮಾತುಗಳು ನಾಶವಾಗುವುದೇ ಇಲ್ಲ!


ನೈಲ್ ನದಿಯನ್ನು ನಾನು ಒಣನೆಲವನ್ನಾಗಿ ಮಾಡುವೆನು. ಆ ಒಣನೆಲವನ್ನು ನಾನು ಕೆಟ್ಟ ಜನರಿಗೆ ಮಾರುವೆನು. ಆ ದೇಶವನ್ನು ಬಂಜರು ಭೂಮಿಯನ್ನಾಗಿ ಮಾಡಲು ನಾನು ಪರದೇಶಸ್ಥರನ್ನು ಉಪಯೋಗಿಸುವೆನು. ನನ್ನ ಒಡೆಯನಾದ ಯೆಹೋವನು ಮಾತನಾಡಿದ್ದಾನೆ.”


ನೆಬೂಕದ್ನೆಚ್ಚರನ ಸೈನ್ಯವು ನಿನ್ನ ಐಶ್ವರ್ಯವನ್ನು ದೋಚಿಕೊಳ್ಳುವದು. ನೀನು ಮಾರಬೇಕೆಂದಿದ್ದ ವಸ್ತುಗಳನ್ನು ಅವರು ದೋಚಿಕೊಳ್ಳುವರು. ನಿನ್ನ ಗೋಡೆಗಳನ್ನು ಒಡೆದು ಅಂದವಾದ ನಿನ್ನ ಮನೆಗಳನ್ನು ಹಾಳು ಮಾಡುವರು. ನಿನ್ನ ಮರದಿಂದ ಮತ್ತು ಕಲ್ಲುಗಳಿಂದ ಮಾಡಿದ ಮನೆಗಳನ್ನು ಕಸದಂತೆ ಸಮುದ್ರಕ್ಕೆ ಎಸೆಯುವರು.


ನಾನು ನಿಮ್ಮನ್ನು ಶಿಕ್ಷಿಸಲು ಬಂದಾಗ ನೀವು ಧೈರ್ಯಶಾಲಿಗಳಾಗುವಿರಾ? ನಿಮ್ಮಲ್ಲಿ ಬಲವಿರುವದೋ? ನಾನೇ ಯೆಹೋವನು. ನಾನು ಹೇಳಿದ ಪ್ರಕಾರ ಮಾಡುವೆನು.


ನೀನು ಬೆಂಕಿಗೆ ಸೌದೆಯಂತೆ ಇರುವಿ. ನಿನ್ನ ರಕ್ತವು ಭೂಮಿಯ ಆಳಕ್ಕೆ ಹರಿಯುವದು. ಜನರು ಇನ್ನು ಮುಂದಕ್ಕೆ ನಿನ್ನನ್ನು ಎಂದಿಗೂ ನೆನಪು ಮಾಡರು. ಇದನ್ನು ಯೆಹೋವನಾದ ನಾನೇ ಹೇಳಿದ್ದೇನೆ.’”


ನಾನು ನಿನಗೆ ವಿರುದ್ಧವಾಗಿ ಬರಗಾಲಗಳನ್ನು ಮತ್ತು ಕ್ರೂರಪ್ರಾಣಿಗಳನ್ನು ಕಳುಹಿಸುವೆನು. ಅವು ನಿನ್ನ ಮಕ್ಕಳನ್ನು ಕೊಲ್ಲುತ್ತವೆ. ನಿನ್ನನ್ನು ಕೊಲ್ಲುವುದಕ್ಕಾಗಿ ರೋಗಗಳನ್ನು, ಹಿಂಸೆಯನ್ನು ಮತ್ತು ಯುದ್ಧಗಳನ್ನು ಕಳುಹಿಸುವೆನು. ಯೆಹೋವನಾದ ನಾನೇ ಇದನ್ನು ಹೇಳಿದ್ದೇನೆ. ಮತ್ತು ಇದು ನೆರವೇರುತ್ತದೆ.”


ನಿನ್ನ ಸುತ್ತಲೂ ಇರುವ ಜನಾಂಗಗಳು ನಿನಗೆ ಅವಮಾನ ಮಾಡಿ ಗೇಲಿ ಮಾಡುತ್ತವೆ. ನೀನು ಅವರಿಗೆ ಎಚ್ಚರಿಕೆಯಾಗಿಯೂ ಭಯೋತ್ಪಾದಕಕಾರಿಯಾಗಿಯೂ ಇರುವಿ. ನಾನು ನನ್ನ ಮಹಾಕೋಪದಿಂದ ನಿನ್ನನ್ನು ದಂಡಿಸಿದಾಗ ಇದು ಸಂಭವಿಸುವುದು. ಯೆಹೋವನಾದ ನಾನೇ ಇದನ್ನು ಹೇಳಿದ್ದೇನೆ.


ಆಗಲೇ ನನ್ನ ಕೋಪವು ಶಮನವಾಗುವುದು. ನಾನು ಅವರ ವಿರುದ್ಧವಾಗಿ ನನ್ನ ಕೋಪವನ್ನು ಬಳಸಿ ತೃಪ್ತನಾಗುವೆನು. ನನ್ನ ಕೋಪವನ್ನು ಸುರಿದಾಗ ಯೆಹೋವನಾದ ನಾನೇ ಅವರೊಂದಿಗೆ ಕೋಪದಿಂದ ಮಾತಾಡಿದೆನೆಂದು ಅವರಿಗೆ ಗೊತ್ತಾಗುವುದು.”


“ಯೋಬನೇ, ನನ್ನ ನೀತಿಯನ್ನು ಖಂಡಿಸುವಿಯಾ? ನಿನ್ನನ್ನು ನಿರಪರಾಧಿಯೆಂದು ನಿರೂಪಿಸಲು ನನ್ನನ್ನು ದೋಷಿಯೆಂದು ಪರಿಗಣಿಸುವೆಯಾ?


ಯೆಹೋವನು ಹೇಳುವುದೇನೆಂದರೆ, “ಚೀದೋನ್ ಕುಮಾರಿಯೇ, ನೀನು ನಾಶವಾಗುವೆ; ಎಂದಿಗೂ ನೀನು ಹರ್ಷಿಸುವದಿಲ್ಲ. ತೂರಿನ ಜನರು, ‘ನಮಗೆ ಸೈಪ್ರಸ್‌ನವರು ಸಹಾಯ ಮಾಡುತ್ತಾರೆ’ ಎಂದು ಹೇಳುತ್ತಾರೆ. ಆದರೆ ನೀನು ಸಮುದ್ರ ಮಾರ್ಗವಾಗಿ ಸೈಪ್ರಸ್‌ಗೆ ಹೋದರೆ ಅಲ್ಲಿ ನಿನಗೆ ವಿಶ್ರಮಿಸಲು ಸ್ಥಳ ದೊರಕುವದಿಲ್ಲ.”


ಎಂಗೇದಿಯಿಂದ ಪ್ರಾರಂಭವಾಗಿ ಏನ್‌ಎಗ್ಲಯಿಮ್ ತನಕ ಬೆಸ್ತರು ಹೊಳೆಯ ದಡದಲ್ಲಿ ನಿಂತಿರುವದನ್ನು ನೀನು ನೋಡಬಹುದು. ಅವರು ತಮ್ಮ ಬಲೆಗಳನ್ನು ಬೀಸಿ ನಾನಾ ತರದ ಮೀನುಗಳನ್ನು ಹಿಡಿಯುವದನ್ನು ನೀನು ನೋಡಬಹುದು. ಭೂಮಧ್ಯ ಸಮುದ್ರದೊಳಗೆ ಎಷ್ಟು ವಿಧವಾದ ಮೀನುಗಳಿವೆಯೋ ಅಷ್ಟೇ ವಿಧವಾದ ಮೀನುಗಳು ಈ ಹೊಳೆಯಲ್ಲಿಯೂ ಇವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು